ಸ್ವತಂತ್ರ ಭಾರತದ ಮೊಟ್ಟ ಮೊದಲ ಮತದಾರರು ಇವರೇ ; 105 ವರ್ಷದ ಶ್ಯಾಮ್ ಸರಣ್ ನೇಗಿ!

Shyam saran negi

ಹಿಮಾಚಲ ಪ್ರದೇಶದ(Himachal Pradesh) ಕಿನ್ನೌರ್(Kinnour) ಜಿಲ್ಲೆಯಲ್ಲಿ 1951ನೇ ಇಸವಿಯಲ್ಲಿ ಸ್ವತಂತ್ರ ಭಾರತದ ಮೊದಲ ಮತದಾರ ಆಗಿ ಇತಿಹಾಸ ಬರೆದವರು ಶ್ಯಾಮ್ ಸರಣ್ ನೇಗಿ(Shyam Saran Negi). ಅಧಿಕೃತ ದಾಖಲೆಗಳ ಪ್ರಕಾರ ನಿವೃತ್ತ ಶಾಲಾ ಶಿಕ್ಷಕರಾಗಿರುವ ನೇಗಿ, ಜುಲೈ 1,1917 ರಂದು ತನ್ನ ಜನಿಸಿದರು. ಇವರು 1952 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಬೇಕಾಗಿದ್ದ ಕಾರಣ ಬೆಳಿಗ್ಗೆಯೇ ತೆರಳಿ ತಮ್ಮ ಮತ ಚಲಾಯಿಸಿರುವುದನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ.


“ಭಾರತದ ಪ್ರಥಮ ಚುನಾವಣೆ(Election) ಫೆಬ್ರವರಿ 1952 ರಲ್ಲಿ ನಡೆಯಿತು, ಆದರೆ ಹಿಮಾಚಲ ಪ್ರದೇಶದಲ್ಲಿ ರಿಮೋಟ್, ಬುಡಕಟ್ಟು ಪ್ರದೇಶಗಳಲ್ಲಿ ಚಳಿಗಾಲದ ಸಮಯದಲ್ಲಿ ವಾತಾವರಣದ ಏರುಪೇರಿನ ಕಾರಣ ಇಲ್ಲಿ ಮತದಾನವು ಐದು ತಿಂಗಳು ಮುಂಚಿತವಾಗಿ ಅಕ್ಟೋಬರ್ 23, 1951 ರಂದು ನಡೆಯಿತು ಎಂದು ಹೇಳಿದರು. ನಾನು ಶಾಲಾ ಶಿಕ್ಷಕನಾಗಿದ್ದೆ ಮತ್ತು ಚುನಾವಣಾ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಹೀಗಾಗಿ, ನಾನು ಕಿನ್ನೌರ್ನ ಕಲ್ಪಾ ಪ್ರೈಮರಿ ಶಾಲೆಯಲ್ಲಿ ನನ್ನ ಮತ ಚಲಾಯಿಸಲು 7 ಗಂಟೆಗೆ ನಾನು ಮತದಾನ ಬೂತ್ಗೆ ತಲುಪಿದ್ದೆ. ಮತವನ್ನು ಚಲಾಯಿಸುವ ಮೊದಲ ವ್ಯಕ್ತಿ ನಾನು ಎಂದು ಅವರು ತಮ್ಮ ಮೊದಲ ಮತದಾನದ ಬಗ್ಗೆ ಮೆಲುಕು ಹಾಕಿದರು.


ಪ್ರತಿ ಲೋಕಸಭೆ, ವಿಧಾನಸಭೆ ಮತ್ತು ಪಂಚಾಯಿತಿ ಚುನಾವಣೆಯಲ್ಲಿ ನೇಗಿ ತಮ್ಮ ಮತ ಚಲಾಯಿಸಿದ್ದಾರೆ. ಅವರಿಗೆ ಈಗ 105 ವರ್ಷ ವಯಸ್ಸು. 2019ರ ಲೋಕಸಭಾ ಚುನಾವಣೆಯಲ್ಲೂ ತಮ್ಮ ಮತ ಚಲಾಯಿಸುವುದಕ್ಕೆ ಅವರು ಉತ್ಸುಕರಾಗಿದ್ದರು. ಕಳೆದ 45 ವರ್ಷಗಳಿಂದ ಅವರು ಈಗಿರುವ ಸ್ಥಳದಲ್ಲೇ ಇದ್ದರೂ ಮಹತ್ವ ಗೊತ್ತಿರಲಿಲ್ಲ. ಆದರೆ, 2007ರಲ್ಲಿ ಐಎಎಸ್ ಅಧಿಕಾರಿ ಮನೀಶ್ ನಂದಾ (ಈಗ ಹಿಮಾಚಲ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ) ಈ ಸಂಗತಿಯನ್ನು ಪತ್ತೆ ಹಚ್ಚಿದರು. ಅದು ಚುನಾವಣೆ ಫೋಟೋ ಗುರುತಿನ ಚೀಟಿ ಮಾಡಿಸುವ ವೇಳೆ ಈ ಅಂಶ ಪತ್ತೆ ಮಾಡಿದರು.


ಬಹಳ ಸಂಶೋಧನೆ ನಂತರ ಚುನಾವಣೆ ಆಯೋಗದಿಂದ ನೇಗಿ ಅವರೇ ಮೊದಲ ಮತದಾರ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಯಿತು. 2012ರಲ್ಲಿ ಆಗಿನ ಚುನಾವಣಾ ಆಯುಕ್ತರಾಗಿದ್ದ ನವೀನ್ ಚಾವ್ಲಾ ಸ್ವತಃ ನೇಗಿ ಅವರ ಮನೆಗೆ ತೆರಳಿ, ಸನ್ಮಾನ ಕೂಡ ಮಾಡಿದ್ದರು. 2014ರ ಚುನಾವಣೆ ವೇಳೆ ಗೂಗಲ್ ನಿಂದ ‘ಮತದಾನಕ್ಕೆ ಬದ್ದ’ ಅಭಿಯಾನದ ಭಾಗವಾಗಿ ನೇಗಿ ಅವರ ಬಗ್ಗೆ ವಿಡಿಯೋ ಮಾಡಲಾಗಿತ್ತು.
2014ರ ಲೋಕಸಭೆ ಚುನಾವಣೆ ವೇಳೆ ಗೂಗಲ್‌ ಇಂಡಿಯಾ ಸಂಸ್ಥೆಯು ಮತದಾನ ಸಂಕಲ್ಪ ಮಾಡಿ ಎಂಬ ಅಭಿಯಾನದಡಿ,

ನೇಗಿ ಅವರ ವಿಡಿಯೊ ಪ್ರಕಟಿತ್ತು. ಶ್ಯಾಮ್‌ ಶರಣ್‌ ನೇಗಿ ಅವರು ಸನಮ್‌ ರೆ(Sanam Re) ಎಂಬ ಹಿಂದಿ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

Exit mobile version