ಕಾಲೇಜ್‌ ಕ್ಯಾಂಪಸ್‌ನಲ್ಲಿ ಪ್ರತ್ಯಕ್ಷವಾಯ್ತು ‘ಫುಡ್‌ ಸ್ಟ್ರೀಟ್‌’: ಕೆ.ಆರ್.ಪುರ ಕಾಲೇಜಿನಲ್ಲಿ `ಯಮ್ಮಿ ಟೇಸ್ಟ್’ ಆಹಾರ ಮೇಳ

K.R.Puram: ಕಾಲೇಜ್‌ ಕ್ಯಾಂಪಸ್‌ನಲ್ಲಿ ಪ್ರತ್ಯಕ್ಷವಾಯ್ತು ‘ಫುಡ್‌ ಸ್ಟ್ರೀಟ್‌’(Food Fair at krpuram College). ಮಳಿಗೆಗಳನ್ನು ಹಾಕಿ ತಾವೇ ತಯಾರಿಸಿದ ಬಗೆಬಗೆಯ ಉತ್ಪನ್ನಗಳನ್ನು ಮಾರಾಟ

ಮಾಡುತ್ತಿರುವ ತರುಣ-ತರುಣಿಯರು. ವಿವಿಧ ತಿಂಡಿ ತಿನಿಸುಗಳನ್ನು ಹಣಕೊಟ್ಟು ಖರೀದಿಸುತ್ತಿರುವ ಗ್ರಾಹಕರು. ಇನ್ನು ತಮ್ಮ ತಮ್ಮ ಮಳಿಗೆಗಳತ್ತ ಗ್ರಾಹಕರನ್ನು ಸೆಳೆಯಲು ವಿವಿಧ ಮಳಿಗೆಗಳ ಸ್ವಾಗತಕಾರರು

ಪೈಪೋಟಿಗಿಳಿದು ಮಾತನಾಡುವ ದೃಶ್ಯಗಳು. ಇದೇನೊ ಬೆಂಗಳೂರಿನ ಯಾವುದೋ ‘ಫುಡ್‌ ಸ್ಟ್ರೀಟ್‌’ಗೆ ಬಂದಿದ್ದೇವೆ ಎಂಬ ಊಹೆ ತಮ್ಮಲ್ಲಿದ್ದರೆ ನಿಮ್ಮ ಊಹೆ ಖಂಡಿತಾ ತಪ್ಪು. ಇವರೆಲ್ಲರೂ ವಿದ್ಯಾರ್ಥಿಗಳು.

ಆದರೆ ಇಂದು ಮಾತ್ರ ಪಕ್ಕಾ ವ್ಯಾಪಾರಿಗಳಾಗಿ ಬದಲಾಗಿದ್ದರು. ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಕೌಶಲ್ಯವನ್ನು ಬೆಳೆಸುವ ಸದುದ್ದೇಶದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರದ (K.R.Puram)

ವಾಣಿಜ್ಯ ವಿಭಾಗದ ವತಿಯಿಂದ ಏರ್ಪಡಿಸಿದ್ದ ಆಹಾರದ ಮೇಳದ (Food Fair at krpuram College) ಸುಂದರ ದೃಶ್ಯಗಳಿವು.

 ಕಾಮರ್ಸ್ (Commerce) ವಿಭಾಗದ ಮುಖ್ಯಸ್ಥರಾದ ಡಾ. ಅಶ್ವತ್ ನಾರಾಯಣ (Dr.Ashwat Narayana) ಅವರ ಮಾರ್ಗದರ್ಶನದಲ್ಲಿ `ಯಮ್ಮಿ ಟೇಸ್ಟ್‘ (Yummy Taste) ಹೆಸರಿನಲ್ಲಿ ಜುಲೈ

೨೮ರ ಶುಕ್ರವಾರ ಈ ಆಹಾರ ಮೇಳ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ತಾವೇ ತಯಾರಿಸಿದ ಆಹಾರ ಪದಾರ್ಥಗಳನ್ನು ಕಾಲೇಜು ಆವರಣದಲ್ಲಿ ಮಾರಾಟ ಮಾಡುತ್ತಿರುವ ದೃಶ್ಯಗಳು ಖುಷಿಪಡುವಂತಿತ್ತು.

ಸದಾ ಕ್ಲಾಸ್, ಪಾಠಗಳಲ್ಲಿ ಬ್ಯುಸಿಯಾಗಿರುತ್ತಿದ್ದ ವಿದ್ಯಾರ್ಥಿಗಳು ಇಂದು ಸಂಪೂರ್ಣ ಬದಲಾಗಿದ್ದರು. ವೈವಿಧ್ಯಮಯವಾದ ಫುಡ್‌ಗಳನ್ನು ಮಾರಾಟ ಮಾಡಿ ಗ್ರಾಹಕರ ಬಾಯಲ್ಲಿ ನೀರೂರುವಂತೆ ಮಾಡಿದರು.

ಗ್ರಾಮೀಣ ಭಾಗದ ಜನಪ್ರಿಯವಾದ ಫುಡ್ ಮುದ್ದೆ, ಸೊಪ್ಪಿನ ಸಾರು ಗಮಗಮಿಸುತ್ತಿತ್ತು. ಉತ್ತರ ಕರ್ನಾಟಕದ ಕಡಕ್ ರೊಟ್ಟಿ ಗ್ರಾಹಕರ ಬಾಯಿಯಲ್ಲಿ ಸದ್ದು ಮಾಡುತ್ತಿತ್ತು. ಪಾನಿಪುರಿ, ಶೇವ್‌ಪುರಿ, ಚುರ್ಮುರಿ,

ಸ್ಯಾಂಡ್‌ವಿಚ್, ಮಸಾಲ ಚಾಟ್, ಬೇಬಿ ಕಾರ್ನ್ (Baby Corn), ಪಾಪ್ ಕಾರ್ನ್ ಸಮೋಸಾ, ವೆಜ್ ಸ್ಯಾಂಡ್‌ವಿಚ್ (Veg Sandwich) , ಡ್ರೂ ಜಾಮೂನ್ ಮೊದಲಾದ ತಿನಿಸುಗಳು ಗ್ರಾಹಕರನ್ನು ಆಕರ್ಷಿಸಿದವು.

ಕಾಲೇಜು ಕ್ಯಾಂಟಿನ್ ಟೀ ಕುಡಿಯುತ್ತಿದ್ದ ವಿದ್ಯಾರ್ಥಿ-ಅಧ್ಯಾಪಕರಿಗೆ ನಾಲಿಗೆಗೆ ಹೊಸ ಟೇಸ್ಟ್ ಸಿಗುವಂತೆ ಮಾಡಿದ್ದು ವಿದ್ಯಾರ್ಥಿಗಳ ಟೀ ಅಂಗಡಿ. ವೃತ್ತಿಪರ ಚಾಯ್‌ವಾಲಾಗಳನ್ನು ಮೀರಿಸುವ ರೀತಿಯಲ್ಲಿಯೇ ಟೀ-ಕಾಫಿ,

ಗ್ರೀನ್ ಟೀಗಳನ್ನು ತಯಾರಾಗಿದ್ದವು. ಟೀ ಪರಿಮಳ ಕಾಲೇಜಿನ ಸುತ್ತಲೂ ಪಸರಿತ್ತು. ಬಿಸ್ಕೆಟ್ ಟೀಯ ರುಚಿಯನ್ನು ಮತ್ತಷ್ಟು ಹೆಚ್ಚಿಸಿತ್ತು.

ಕೇಕ್, ವಿವಿಧ ರೀತಿಯ ಸಿಹಿ ತಿಂಡಿಗಳು, ಚಾಕೋಲೇಟ್‌ಗಳು ಹೆಸರಿಗೆ ತಕ್ಕಂತೆ `ಯಮ್ಮಿ ಟೇಸ್ಟ್‘(Yummy Taste) ಆಗಿತ್ತು. ಎಂಟು ವೆರೈಟ್‌ನಲ್ಲಿ ತಯಾರಿಸಿದ್ದ ತಂಪು ಪಾನೀಯಗಳು ಎಲ್ಲರ ಗಮನ ಸೆಳೆದವು.

ತುಂತುರ ಮಳೆಯಿಂದ ವಾತಾವರಣ ಚಳಿಯಿಂದ ಕೂಡಿದ್ದರೂ ಫ್ರೆಶ್ ಲೈಮ್ (Fresh Lime), ಆರೆಂಜ್ ಜ್ಯೂಸ್‌ಗಳನ್ನು ಕುಡಿಯುವುದಕ್ಕೆ ವಿದ್ಯಾರ್ಥಿಗಳು ಮುಗಿಬಿದ್ದರು. ವಿದ್ಯಾರ್ಥಿಗಳು ತಾವೇ ಕಷ್ಟಪಟ್ಟು

ತಯಾರಿಸಿದ ತಿಂಡಿಗಳನ್ನು ಮಾರಾಟ ಮಾಡುವ ಸಲುವಾಗಿ ೬೦ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಿದ್ದರು.

ಇಡೀ ದಿನ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳು (Professors), ಬೋಧಕೇತರ ವೃಂದದವರು ಗ್ರಾಹಕರಾಗಿ ರುಚಿ-ಶುಚಿಯಾದ ತಿಂಡಿ-ತಿನಿಸುಗಳನ್ನು ಖರೀದಿಸಿ ರುಚಿ ಸವಿದರು.

ವ್ಯವಹಾರ ನಡೆಸುವುದು ಎಷ್ಟು ಕಷ್ಟವಿದೆ. ಗ್ರಾಹಕರನ್ನು ಹೇಗೆ ಸೆಳೆಯಬೇಕು, ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕು ಎನ್ನುವ ಅಂಶಗಳು ವಿದ್ಯಾರ್ಥಿ ದಿಸೆಯಲ್ಲೇ ಅರಿವಾಗಬೇಕು ಎಂಬ ಸದುದ್ದೇಶದಿಂದ ಏರ್ಪಡಿಸಿದ್ದ

ಈ ಆಹಾರ ಮೇಳಕ್ಕೆ ಕೆ.ಆರ್.ಪುರದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿ ಶ್ರೀಶೈಲ ಕನ್ನಾಲ್ (Srishaila Kannal) ಚಾಲನೆ ನೀಡಿದರು.

ಉತ್ತಮ ಆರೋಗ್ಯಕ್ಕೆ ಬೇಕಾಗುವ ಆಹಾರವನ್ನು ಹಿತಮಿತವಾಗಿ ಸೇವಿಸಬೇಕು. ನಾಲಿಗೆ ರುಚಿಗಾಗಿ ಜಂಕ್ ಫುಡ್ಸ್ (Junk Food) ತಿನ್ನಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಶ್ರೀಶೈಲ ಅವರು

ಅನಗತ್ಯವಾಗಿ ಆಹಾರವನ್ನು ವ್ಯರ್ಥ ಮಾಡಬಾರದು ಎಂದರು.

ಆಹಾರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕೆ.ಆರ್.ಪುರದ ಸಾರ್ವಜನಿಕ ಆಸ್ಪತ್ರೆಯ ಮತ್ತೊಬ್ಬ ಆರೋಗ್ಯಾಧಿಕಾರಿ ವಿಷ್ಣುಕುಮಾರ್ (Vishnukumar) , ಪ್ರಾಂಶುಪಾಲರಾದ ಪ್ರೊಫೆಸರ್ ಪ್ರತಿಭಾ ಪಾರ್ಶ್ವನಾಥ್

(Pratibha Parswanath) ಸೇರಿದಂತೆ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ಪ್ರೊಫೆಸರ್‌ಗಳಾದ ಡಾ. ಶ್ರೀನಿವಾಸ್, ಡಾ, ವಿವೇಕ್ ಸರಿಕಾರ್, ಡಾ. ಸುಬ್ರಮಣ್ಯ,

ಆಶೋಕ್ ಕೆ.ಎಲ್, ಆಶೋಕ್ ಎಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಸಂಚಾಲಕರಾದ ಪ್ರೊ. ಗಣೇಶ್.ಬಿ ಮತ್ತು ಮುಖ್ಯಸ್ಥರಾದ ಡಾ. ಟಿ. ಅಶ್ವತನಾರಾಯಣ, ನಿರ್ವಹಣಾ ವಿಭಾಗದ ಡಾ. ವಜ್ಜಲಾ ನೀಲವೇಣಿ

ಸೇರಿದಂತೆ ವಿಭಾಗದ ಎಲ್ಲಾ ಅಧ್ಯಾಪಕರುಗಳ ಸಹಕಾರದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು. ತೀರ್ಪುಗಾರರಾಗಿ ಡಾ. ಹೊಂಬಾಳೆ, ಜೀಶಾ ಮತ್ತು ವಿಜಯಲಕ್ಷ್ಮಿ ಶಿಬರೂರು ಭಾಗವಹಿಸಿದ್ದರು. 3

ವಿಜೇತರನ್ನು ಗೌರವಿಸಲಾಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರದ ವಾಣಿಜ್ಯ ವಿಭಾಗದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಆಹಾರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕೆ.ಆರ್.ಪುರದ ಸಾರ್ವಜನಿಕ ಆಸ್ಪತ್ರೆಯ

ಆರೋಗ್ಯಾಧಿಕಾರಿ ಶ್ರೀಶೈಲ ಕನ್ನಾಲ್, ಆರೋಗ್ಯಾಧಿಕಾರಿ ವಿಷ್ಣುಕುಮಾರ್, ಪ್ರಾಂಶುಪಾಲರಾದ ಪ್ರೊಫೆಸರ್ ಪ್ರತಿಭಾ ಪಾರ್ಶ್ವನಾಥ್, ವಿಭಾಗದ ಮುಖ್ಯಸ್ಥರಾದ ಡಾ. ಟಿ. ಅಶ್ವತನಾರಾಯಣ

(D.T.Aswath Narayan) ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Exit mobile version