ಮೈಗ್ರೇನ್ ಸಮಸ್ಯೆಗೆ ಇಲ್ಲಿದೆ ಸರಳ ಆಹಾರ ಕ್ರಮ ಪಾಲಿಸಿ

Health Tips : ಮೈಗ್ರೇನ್(Food Procedure For Migrain) ಅಂದ್ರೆ ಆರೋಗ್ಯ ತಜ್ಞರ ಪ್ರಕಾರ, ಮೈಗ್ರೇನ್ ಒಂದು ನರ ವೈಜ್ಞಾನಿಕ ಖಾಯಿಲೆ. ಮೈಗ್ರೇನ್ನಿಂದ ಬಳಲುತ್ತಿರುವ ಜನರು ತಿಂಗಳಲ್ಲಿ ಹಲವು ಬಾರಿ ತಲೆನೋವಿನಿಂದ ಬಳಲುತ್ತಾರೆ.

ಮೈಗ್ರೇನ್ ಖಾಯಿಲೆಯಿಂದ ಬಳಲುವ ವ್ಯಕ್ತಿ, ತಿಂಗಳಲ್ಲಿ 15 ದಿನಗಳಿಗಿಂತಲೂ ಹೆಚ್ಚು ಕಾಲ ನರಳಾಡುತ್ತಾರೆ. ಈ ಖಾಯಿಲೆ ತಡೆಗಟ್ಟುವಿಕೆಗೆ ಇಲ್ಲಿದೆ ಸರಳ ಆಹಾರ ಕ್ರಮ ಅನುಸರಿಸಿ.

ಈ ಮೈಗ್ರೇನ್ (Food Procedure For Migrain) ಪುರುಷರಿಗಿಂತ ಮಹಿಳೆಯರಲ್ಲಿ ಮೂರು ಪಟ್ಟು ಹೆಚ್ಚು ಸಾಮಾನ್ಯ ಎಂಬ ಮಾಹಿತಿ ವರದಿಗಳಲ್ಲಿ ಉಲ್ಲೇಖವಾಗಿದೆ.

ಒಬ್ಬ ವ್ಯಕ್ತಿಯು ಮೈಗ್ರೇನ್ ಹೊಂದಿದ್ದರೆ, ಆ ವ್ಯಕ್ತಿಯ ತಲೆಯ ಒಂದು ಭಾಗದಲ್ಲಿ ತೀಕ್ಷ್ಣವಾದ ಅಥವಾ ಮಧ್ಯೆ ಭಾಗದ ತಲೆನೋವು ಅನುಭವಿಸುತ್ತಾನೆ.

ಮೈಗ್ರೇನ್ ಖಾಯಿಲೆಯು ಮಾನಸಿಕ ಒತ್ತಡ, ನರಗಳ ಹಿಗ್ಗುವಿಕೆ, ಮಲಬದ್ದತೆ, ಅತಿಯಾದ ಮದ್ಯಪಾನ, ರಕ್ತಹೀನತೆ, ಶೀತ ಮತ್ತು ಆಯಾಸ ಇತ್ಯಾದಿಗಳಿಂದ ಉಂಟಾಗುತ್ತದೆ.

ಈ ಲಕ್ಷಣಗಳು ಕಂಡು ಬಂದಾಗ ಪ್ರಾರಂಭದಲ್ಲಿ ಪತ್ತೆಹಚ್ಚಿದರೇ ಸುಲಭವಾಗಿ ಚಿಕಿತ್ಸೆ ನೀಡಬಹುದು. ಮೈಗ್ರೇನ್ ದೊಡ್ಡ ಖಾಯಿಲೆಯಲ್ಲ ಎಂದು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟಬುತ್ತಿ!

ಇದನ್ನೂ ಓದಿ : https://vijayatimes.com/indian-box-office-movies-2022/

ಮೈಗ್ರೇನ್ ತೊಂದರೆ ಇರುವವರು ತಮ್ಮ ಆಹಾರ ಪದ್ಧತಿ ಕ್ರಮದಲ್ಲಿ ನಿಯಂತ್ರಣ ಮಾಡಿಕೊಂಡರೆ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು, ಈ ಪಟ್ಟಿ ಅನುಸರಿಸಿ :

ಸಮುದ್ರದ ಆಹಾರ(Sea Food) : ಸಮುದ್ರ ಆಹಾರಗಳಾದ ಮೀನು, ಏಡಿ ಹಾಗೂ ಸೀಗಡಿಗಳನ್ನೂ ಸೇವಿಸುವುದರಿಂದ ಮೈಗ್ರೇನ್ ಖಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದು.

ಒಮೆಗಾ -3 ಕೊಬ್ಬಿನಾಮ್ಲ ಇದರಲ್ಲಿ ಹೆಚ್ಚಾಗಿ ಇರುವುದರಿಂದ ಮೈಗ್ರೇನ್ಗೆ ಪ್ರಯೋಜನಕಾರಿಯಾಗಿದೆ. ವಾರಕ್ಕೆ 2 ಬಾರಿ ಸಮುದ್ರ ಆಹಾರವನ್ನು ಸೇವಿಸಬೇಕು.

ಬಾಳೆಹಣ್ಣು(Banana): ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಕಂಡುಬರುತ್ತದೆ.

ಮೈಗ್ರೇನ್ ಸಮಸ್ಯೆ ಇರುವವರು ಪ್ರತಿದಿನ ನಿಯಮಿತವಾದ ಬಾಳೆಹಣ್ಣನ್ನು ಸೇವಿಸುವುದರಿಂದ ತಲೆನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಇದಲ್ಲದೆ ಹಸಿರು ತರಕಾರಿಗಳು, ವಿಟಮಿನ್ ಸಿ ಹಣ್ಣುಗಳನ್ನು ಸೇವಿಸಿದರೆ ಉತ್ತಮ.

ಚಹಾ/ಕಾಫಿ(Coffee/Tea) : ಮೈಗ್ರೇನ್ ರೋಗಿಗಳು ಚಹಾ ಅಥವ ಕಾಫಿ ಕುಡಿಯಬಾರದು. ಕೆಫೀನ್ ಕಾಫಿ ಮತ್ತು ಚಹಾದಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಮೈಗ್ರೇನ್ಗೆ ಪರಿಹಾರ ನೀಡುವುದರ ಬದಲಿಗೆ ಸಮಸ್ಯೆಯನ್ನು ಹೆಚ್ಚಿಸುತ್ತದೆ.

https://fb.watch/hoaBzjyjrr/ ಭಯಾನಕ ಛಾಪಾ ಹಗರಣ ಬಯಲು ! ರಾಜ್ಯದಲ್ಲಿ ಬಯಲಾಗಿದೆ ಕೊಟ್ಯಾಂತರ ರೂಪಾಯಿಯ ಛಾಪಾಕಾಗದ ಹಗರಣ!

ಮದ್ಯಪಾನ ಮತ್ತು ಧೂಮಪಾನ : ಆಲ್ಕೊಹಾಲ್ ಹಾಗೂ ತಂಬಾಕಿನಿಂದಾಗಿ ಮೈಗ್ರೇನ್ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಇದರಿಂದ ಪರಿಸ್ಥಿತಿ ಇನ್ನೂ ಹದಗೆಡುತ್ತದೆ.

ಡಾರ್ಕ್ ಚಾಕಲೇಟ್ : ಸಂಶೋಧನೆಯ ಪ್ರಕಾರ ಡಾರ್ಕ್ ಚಾಕೋಲೇಟ್(Dark Chocolate) ಮೈಗ್ರೇನ್ ತಲೆನೋವನ್ನು ಇನ್ನೂ ವೃದ್ಧಿಸುತ್ತದೆ ಎಂದು ಸಾಭಿತಾಗಿರುವುದರಿಂದ ಡಾರ್ಕ್ ಚಾಕಲೇಟ್ ನಿಂದ ದೂರ ಇರುವುದೇ ಉತ್ತಮ. ಇದಿಷ್ಟೂ ಮೈಗ್ರೇನ್ ರೋಗಿಗಳು ಅನುಸರಿಸಬೇಕಾದ ಆಹಾರ ಕ್ರಮಗಳು.

Exit mobile version