ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್‌ನೀಡುವುದಿಲ್ಲ : ಬಿ.ಎಸ್.ಯಡಿಯೂರಪ್ಪ ಘೋಷಣೆ

Kalaburagi : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಲ್ವರು ಹಾಲಿ ಶಾಸಕರಿಗೆ ಟಿಕೆಟ್‌ನೀಡುವುದಿಲ್ಲ. ಅವರ ಕಾರ್ಯವೈಖರಿ ಪಕ್ಷಕ್ಕೆ ತೃಪ್ತಿ ತಂದಿಲ್ಲ. ಹೀಗಾಗಿ (foursitting mla no tickets) ಅವರಿಗೆ ಚುನಾವಣೆಯಲ್ಲಿ ಟಿಕೆಟ್‌ ನೀಡದಿರಲು ನಿರ್ಧರಿಸಲಾಗಿದೆ.

ಉಳಿದಂತೆ ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು (B.S.Yeddyurappa) ಘೋಷಣೆ ಮಾಡಿದ್ದಾರೆ.

B.S.Yeddyurappa

ಕಲಬುರಗಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ(BJP) ಪಕ್ಷ ಪ್ರಚಂಡ ಗೆಲುವಿನೊಂದಿಗೆ ಮರಳಿ ಅಧಿಕಾರಕ್ಕೇರಲಿದೆ. ನಾವು 140 ಸ್ಥಾನಗಳನ್ನು ಗೆಲ್ಲುತ್ತೇವೆ.

ನಮ್ಮ ಪಕ್ಷದ ಕಾರ್ಯಕರ್ತರು ಈಗಾಗಲೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟದ 41 ಸ್ಥಾನಗಳ ಪೈಕಿ 30 ರಲ್ಲಿ ನಾವು ಗೆಲುವು  ಸಾಧಿಸುತ್ತೇವೆ.

ಇದನ್ನು ಓದಿ:2014 ನಂತ್ರ ದೇಶದ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಇಳಿಕೆ: ಭಾರತದ ಸ್ಕೋರ್ 0.4ಕ್ಕಿಂತ ಕಡಿಮೆ

ಕಲ್ಯಾಣ ಕರ್ನಾಟಕದ (Kalyan Karnataka) ಅಭಿವೃದ್ದಿಗೆ ನಮ್ಮ ಸರ್ಕಾರದ ಸಾಕಷ್ಟು ಕೊಡುಗೆ ನೀಡಿದೆ. ಹೀಗಾಗಿ ಈ ಭಾಗದ ಜನರು ನಮ್ಮ ಕೈಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಕಾಂಗ್ರೆಸ್‌ ಶಾಸಕ  ರಮೇಶ್‌ಕುಮಾರ್‌ (Ramesh Kumar) ಅವರ ನಾವು ಸಾಕಷ್ಟು ಮಾಡಿಕೊಂಡು ತೃಪ್ತಿಯಾಗಿದ್ದೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಹಿರಿಯ ಶಾಸಕರಾಗಿರುವ ರಮೇಶ್‌ಕುಮಾರ್‌

ಅವರ ಈ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ ಉತ್ತರ ನೀಡಬೇಕು. ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ  ಯಾತ್ರೆಗೆ ಜನ ಸೇರುತ್ತಿಲ್ಲ.

ಹೀಗಾಗಿ ಕಾಂಗ್ರೆಸ್‌ ಪಕ್ಷದ ಮುಖಂಡರು ಹತಾಶೆಯಲ್ಲಿದ್ದಾರೆ.

ನಮ್ಮ ಸಭೆಗಳಿಗೆ ಜನಸಾಗರವೇ ಹರಿದು ಬರುತ್ತಿದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ನಮ್ಮ ಪಕ್ಷ 140 ಸ್ಥಾನಗಳೊಂದಿಗೆ ಅಧಿಕಾರ  ಹಿಡಿಯಲಿದೆ. ಇನ್ನು ದಾವಣಗೆರೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯ

ಸಮಾರೋಪ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಮಿಸಲಿದ್ದಾರೆ. ಆ (foursitting mla no tickets) ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಹೊಸ ಉತ್ಸಾಹ ತುಂಬಲಿದ್ದಾರೆ ಎಂದರು.

MLA

ಇನ್ನು ಬಸವ ಕಲ್ಯಾಣ (Basava Kalyan) ಇಡೀ ದೇಶದಲ್ಲಿಯೇ ವಿಶೇಷ ಸ್ಥಳವಾಗಬೇಕೆಂಬುದು ನನ್ನ ಆಶಯ. ಹೀಗಾಗಿಯೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಚಿವಾಲಯ ಸ್ಥಾಪಿಸುವ ಬಗ್ಗೆ  ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇನೆ.

ಈ ಭಾಗದ ಅಭಿವೃದ್ದಿಗೆ  ಬಿಜೆಪಿ ಬದ್ದವಾಗಿದೆ. ಇನ್ನು 2023 ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ವಿಜಯೇಂದ್ರಗೆ ಪಕ್ಷದ ಹೈಕಮಾಂಡ್‌ ಅವಕಾಶ ನೀಡಿದರೆ ಸ್ಪರ್ಧಿಸುತ್ತಾರೆ.

ಬೇರೆ ಕ್ಷೇತ್ರ ನೀಡಿದರೆ, ಅಲ್ಲಿಂದಲೇ ವಿಜಯೇಂದ್ರ ಅವರು ಸ್ಪರ್ಧೆ ಮಾಡಲಿದ್ಧಾರೆ ಎಂದು ಬಿಎಸ್‌ವೈ  ಹೇಳಿದರು.

Exit mobile version