ಕರ್ನಾಟಕದ ಜನತೆಗೆ 200 ಯೂನಿಟ್ ಉಚಿತ ವಿದ್ಯುತ್ ! ಅಧಿಕಾರಕ್ಕೆ ಬಂದ್ರೆ ಕಾಂಗ್ರೆಸ್ ಕೊಡುಗೆ

Bengaluru : ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು (free electricity of Karnataka people) ಅಧಿಕಾರಕ್ಕೆ ಬಂದ್ರೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಕರ್ನಾಟಕ ಕಾಂಗ್ರೆಸ್ ಬುಧವಾರ‌ ಅಧಿಕೃತವಾಗಿ ಘೋಷಿಸಿದೆ.

ಬೆಳಗಾವಿಯಲ್ಲಿ ಪ್ರಜಾಧ್ವನಿ ಯಾತ್ರೆಯ ಬಸ್‌ ರ‍್ಯಾಲಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್‌ ಈ ಬಗ್ಗೆ ಘೋಷಣೆ ಮಾಡಿದ್ದು, ಈ ಮೂಲಕ ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಿದೆ.

ಈ ಕಾರ್ಯಕ್ರಮವು ಜನರಿಗೆ ಪಕ್ಷದ ಮೊದಲ ಗ್ಯಾರಂಟಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shiva kumar) ಹೇಳಿದ್ದಾರೆ.

ಬೆಲೆ ಏರಿಕೆಯ ದಾಳಿಯ ವಿರುದ್ಧ ಕನ್ನಡಿಗರಿಗೆ ಸಹಾಯ ಹಸ್ತ ನೀಡಲು ಮತ್ತು ಆಹಾರ, ಮಕ್ಕಳಿಗೆ ಶಿಕ್ಷಣ ಮತ್ತು ಆರೋಗ್ಯದಂತಹ (free electricity of Karnataka people) ಅಗತ್ಯಗಳಿಗಾಗಿ ಮುಂದಿದ್ದೇವೆ.

ಕರ್ನಾಟಕದ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಅನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಉಚಿತವಾಗಿ ಪೂರೈಸುತ್ತದೆ.

ರಾಜ್ಯಾದ್ಯಂತ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಿದ್ದೇವೆ, ಇದು ನಮ್ಮಮೊದಲ ಭರವಸೆ.

https://vijayatimes.com/high-court-stayed-reservation/

ಈ ಮೂಲಕ, ಪ್ರತಿ ಮನೆಯನ್ನು ಬೆಳಕಿನಿಂದ ಬೆಳಗಿಸುವ ನಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ಯೋಜನೆಗೆ ಗೃಹ ಜ್ಯೋತಿ ಯೋಜನೆ(Jyoti yojane) ಎಂದು ಹೆಸರಿಸಲಾಗಿದ್ದು,

ಅಗತ್ಯ ವಸ್ತುಗಳ ಬೆಲೆಗಳು ಏರುತ್ತಿರುವ ಸಮಯದಲ್ಲಿ ಈ ಯೋಜನೆ ಅಗತ್ಯವಿದೆ. ಕರ್ನಾಟಕ ರಾಜ್ಯದ ಜನೆತೆ ನಾವು ನೀಡುವ ಈ ಯೋಜನೆ ಮುಖ್ಯವಾಗಿದೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಇದನ್ನೂ ಓದಿ: https://vijayatimes.com/santro-ravi-bjp-worker/

ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಕೇವಲ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಪ್ರತಿಯೊಬ್ಬರಿಗೂ,

ಪ್ರತಿ ಮನೆಗೂ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೂಡ ಹೇಳಿದ್ದಾರೆ.

10 ಗಂಟೆ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದ್ದನ್ನು ಉಲ್ಲೇಖಿಸಿ ಮಾತನಾಡಿದ ಸಿದ್ದರಾಮಯ್ಯ, “ಅವರು ಕೊಟ್ಟಿದ್ದಾರಾ?

ನಾವು (ಕಾಂಗ್ರೆಸ್) ಅದನ್ನು (ಮೂರು ಹಂತ) 7 ಗಂಟೆಗಳ ನೀಡುವುದಾಗಿ ಭರವಸೆ ನೀಡಿದ್ದೇವೆ ಮತ್ತು ನಮ್ಮ ಬದ್ಧತೆಯನ್ನು (ಕಳೆದ ಬಾರಿ ಅಧಿಕಾರದಲ್ಲಿದ್ದಾಗ) ಪೂರೈಸಿದ್ದೇವೆ.

ಈಗ ನಾವು 200 ಯೂನಿಟ್ ಉಚಿತ ವಿದ್ಯುತ್ ಅನ್ನು ಹೇಳಿದ್ದೇವೆ ಮತ್ತು ನಾವು ಈ ಭರವಸೆಯನ್ನು ಯಾವುದೇ ಬೆಲೆಯಲ್ಲಿ ಪೂರೈಸುತ್ತೇವೆ.

1924 ರಲ್ಲಿ ಮಹಾತ್ಮ ಗಾಂಧಿಯವರು ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸ್ಮಾರಕವಾದ ವೀರ್ ಸೌಧದಲ್ಲಿ ಕಾಂಗ್ರೆಸ್ ರ್ಯಾಲಿಯನ್ನು ಪ್ರಾರಂಭಿಸಿತು.

21 ಜಿಲ್ಲೆಗಳ ಪ್ರವಾಸದಲ್ಲಿ ಪಕ್ಷವು ತನ್ನ ಆಲೋಚನೆಗಳನ್ನು ಜನರೊಂದಿಗೆ ಹಂಚಿಕೊಳ್ಳುತ್ತದೆ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಭರವಸೆ ನೀಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ: https://vijayatimes.com/aam-aadmi-party-fine/

ಬಸ್ ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಇಬ್ಬರೂ ಒಂದೇ ಬಸ್ಸಿನಲ್ಲಿ ಜನವರಿ 29 ರವರೆಗೆ ಪ್ರಯಾಣಿಸಲಿದ್ದು, ನಂತರ ಫೆಬ್ರವರಿ ಎರಡನೇ ವಾರದಲ್ಲಿ ಎರಡು ಪ್ರತ್ಯೇಕ ತಂಡಗಳು ರಚನೆಯಾಗಲಿದ್ದು,

ಸಿದ್ದರಾಮಯ್ಯ ನೇತೃತ್ವದಲ್ಲಿ ಉತ್ತರ ಕರ್ನಾಟಕ ಪ್ರದೇಶದ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡರೇ, ದಕ್ಷಿಣ ಜಿಲ್ಲೆಗಳಲ್ಲಿ ಶಿವಕುಮಾರ್ ಮುನ್ನಡೆ ಸಾಧಿಸಲಿದ್ದಾರೆ.

ಕಾಂಗ್ರೆಸ್ ನಾಯಕರು ಸಾಂಕೇತಿಕವಾಗಿ ಪೊರಕೆ ಹಿಡಿದು ಬೀದಿ ಗುಡಿಸಿ, ಮೇ ವೇಳೆಗೆ ಚುನಾವಣೆ ನಡೆಯಲಿರುವ ರಾಜ್ಯದಿಂದ ಭ್ರಷ್ಟರನ್ನು ತೊಡೆದುಹಾಕುತ್ತೇವೆ ಎಂದು ಗುಡುಗಿದ್ದಾರೆ!

ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ರಾಜ್ಯದಿಂದ ತೊಡೆದುಹಾಕಲು ಬೆಳಗಾವಿಯಿಂದ ಕಾಂಗ್ರೆಸ್ ಯಾತ್ರೆ ಆರಂಭಿಸುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಚಾರ್ಜ್ ಶೀಟ್ ಅನ್ನು ಜನರ ಮುಂದೆ ಇಡುವುದು ನಮ್ಮ ಉದ್ದೇಶವಾಗಿದೆ, ಏಕೆಂದರೆ ಇಡೀ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ.
ದುರಾಡಳಿತ ಹೆಚ್ಚುತ್ತಿದೆ ಮತ್ತು ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಯಾರಾದರೂ ಪ್ರಶ್ನಿಸಿದರೆ ಸುಳ್ಳು ಕೇಸು ಹಾಕಿ ಬಂಧಿಸುವ ಮೂಲಕ ಬೆದರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Exit mobile version