ಉಪಮುಖ್ಯಮಂತ್ರಿಯಾಗಿದ್ರು ನನ್ನನ್ನು ದೇವಸ್ಥಾನದೊಳಕ್ಕೆ ಬಿಟ್ಟುಕೊಳ್ಳಲಿಲ್ಲ : ಜಿ ಪರಮೇಶ್ವರ್!

parameshwar

ನಾನು ದಲಿತನಾಗಿದ್ದರಿಂದ ನಾನು ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದರೂ ನನ್ನನ್ನು ದೇವಸ್ಥಾನದೊಳಗೆ ಬಿಟ್ಟುಕೊಳ್ಳಲಿಲ್ಲ ಎಂದು ಕಾಂಗ್ರೆಸ್‍ನ(Congress) ಹಿರಿಯ ನಾಯಕ(Leader) ಜಿ ಪರಮೇಶ್ವರ್(G Parameshwar) ಬೇಸರ ವ್ಯಕ್ತಪಡಿಸಿದರು.

ಕೊರಟಗೆರೆ ಪಟ್ಟಣ ಪಂಚಾಯತಿ ಆವರಣದಲ್ಲಿ ಡಾ. ಬಿ.ಆರ್ ಅಂಬೇಡ್ಕರ್(BR Ambedkar) ಅವರ 131ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಮಾಜದಲ್ಲಿ ಇಂದಿಗೂ ದಲಿತರ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ನಾನು ಶಾಸಕನಾಗಿದ್ದೇನೆ, ಸಚಿವನಾಗಿದ್ದೇನೆ, ರಾಜ್ಯ ನಂಬರ್ 2 ಸ್ಥಾನವಾದ ಉಪಮುಖ್ಯಮಂತ್ರಿಯಾಗಿದ್ದೇ, ಆದರೆ ನಾನು ದಲಿತ ಎಂಬ ಕಾರಣಕ್ಕೆ ನಾನು ದೇವಸ್ಥಾನಕ್ಕೆ ಹೋದರೆ, ಮಂಗಳಾರತಿ ತಟ್ಟೆಯನ್ನು ನನ್ನ ಮುಂದೆಯೇ ತರುತ್ತಿದ್ದರು.

ನಾನು ದೇವರ ಬಳಿ ಹೋಗಿ ಮಂಗಳಾರತಿ ತೆಗೆದುಕೊಳ್ಳುವ ಅವಕಾಶ ನೀಡುತ್ತಿರಲಿಲ್ಲ. ದೇವಸ್ಥಾನದೊಳಕ್ಕೆ ಬಂದು ಬಿಡುತ್ತಾನೆ ಎಂಬ ಕಾರಣಕ್ಕಾಗಿ ನಾನಿರುವಲ್ಲಿಗೆ ಮಂಗಳಾರತಿ ತಟ್ಟೆಯನ್ನು ತರುತ್ತಿದ್ದರು ಎಂದರು. ದೇಶದಲ್ಲಿ ಇಂದಿಗೂ ಅನೇಕ ಕಡೆ ದಲಿತರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ರಾಜಕೀಯವಾಗಿ ನಾವು ಉನ್ನತ ಹುದ್ದೆ ಅಲಂಕರಿಸಿದರು ಸಾಮಾಜಿಕವಾಗಿ ನಮ್ಮನ್ನು ಇನ್ನು ಸಮಾನರಾಗಿ ಈ ಸಮಾಜ ಒಪ್ಪಿಕೊಂಡಿಲ್ಲ. ದಲಿತರನ್ನು ಕೀಳಾಗಿ ನೋಡುವ ಪ್ರವೃತ್ತಿ ಇಂದಿಗೂ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮೆಲ್ಲರ ಬಾಳಿಗೆ ಬೆಳಕು ನೀಡಿದರು. ದಲಿತ ಸಮುದಾಯಕ್ಕೆ ಒಂದು ಶಕ್ತಿ ನೀಡಿದರು. ತಾರತಮ್ಯ ರಹಿತ ಮತ್ತು ಎಲ್ಲರೂ ಸಮಾನರಾಗಿ ಬಾಳುವಂತ ಸಮಾಜ ಕಟ್ಟಲು ಸಂವಿಧಾನ ನೀಡಿದರು. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ನಮಗೆ ದಾರಿದೀಪ, ಅದುವೇ ನಮ್ಮೆಲ್ಲರ ಪರಮ ಶ್ರೇಷ್ಠ ಗ್ರಂಥ ಎಂದರು.

Exit mobile version