5G ಬಿಡುಗಡೆಗೆ ತಯಾರಿ ಮಾಡಿಕೊಳ್ಳಿ : ಟೆಲಿಕಾಂ ಕಂಪನಿಗಳಿಗೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸೂಚನೆ

IT Minister

ನವದೆಹಲಿ : ಭಾರತದಲ್ಲಿ(India) 5G ಸೇವೆಗಳನ್ನು(5G Service) ಪ್ರಾರಂಭಿಸಲು ತಯಾರಿ ನಡೆಸುವಂತೆ ಎಲ್ಲಾ ಟೆಲಿಕಾಂ ಸೇವಾ(Telecom Service) ಪೂರೈಕೆದಾರರನ್ನು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್(Ashwini Vaishnav) ಕೇಳಿಕೊಂಡಿದ್ದಾರೆ. ಈ ಕುರಿತು ತ್ವರಿತಗತಿಯಲ್ಲಿ ಕೆಲಸ ಮಾಡುವಂತೆ ಟೆಲಿಕಾಂ ಕಂಪನಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ಶೀಘ್ರದಲ್ಲೇ ಭಾರತದಲ್ಲಿ 5G ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದ್ದು, 5G ಸೇವೆಗಳು ನಿರೀಕ್ಷೆಗಿಂತ ಬೇಗ ಲಭ್ಯವಾಗಲಿವೆ. 5G ವೇಗವು ದೇಶದಲ್ಲಿ 4G ವೇಗಕ್ಕಿಂತ 10X ವೇಗವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಹೇಳಿದ್ದರು. ಇನ್ನು ಏರ್ಟೆಲ್(Airtel) ಮತ್ತು ಜಿಯೋ(Jio) ಈ ತಿಂಗಳ ಕೊನೆಯಲ್ಲಿ ತಮ್ಮ 5G ಸೇವೆಗಳ ಮೊದಲ ಹಂತವನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.

ಈ ವರ್ಷದ ಕೊನೆಯಲ್ಲಿ ದೇಶಾದ್ಯಂತ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಆದರೆ ಟೆಲಿಕಾಂ ಕಂಪನಿಗಳು ಭಾರತದಲ್ಲಿ 5G ಲಾಂಚ್ ಕುರಿತು ಯಾವುದೇ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸಿಲ್ಲ. ಇನ್ನು ಇತ್ತೀಚೆಗೆ ನಡೆದ 5ಜಿ ಹರಾಜಿನಲ್ಲಿ ಕೇಂದ್ರ ಸರ್ಕಾರವು(Central Government) 1.5 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ರಿಲಯನ್ಸ್ ಜಿಯೋ(Reliance Jio) 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಅತಿ ಹೆಚ್ಚು ಬಿಡ್ ಮಾಡಿ, ಪ್ರೀಮಿಯಂ 700 MHz ಬ್ಯಾಂಡ್ನ ಸ್ಪೆಕ್ಟ್ರಮ್ ಅನ್ನು 88,000 ಕೋಟಿ ರೂ. ನೀಡಿ ಖರೀದಿಸಿತು.

ಎಲ್ಲಾ ಏರ್ವೇವ್ಗಳಲ್ಲಿ ಅರ್ಧದಷ್ಟನ್ನು ರಿಲಯನ್ಸ್ ಜಿಯೋ ಸ್ವಾಧೀನಪಡಿಸಿಕೊಂಡಿತು. ಇನ್ನು ಬಳಕೆದಾರರಿಗೆ ಹೆಚ್ಚಿನ ವೇಗದ ಡೇಟಾ ಸಂಪರ್ಕದ ಜೊತೆಗೆ, ಯಂತ್ರದಿಂದ ಯಂತ್ರದ ಸಂವಹನಗಳು, ಇಂಟರ್‍ನೆಟ್ ಸಂಪರ್ಕಿತ ವಾಹನಗಳು, ವರ್ಧಿತ ರಿಯಾಲಿಟಿ ಮತ್ತು ಮೆಟಾವರ್ಸ್ಗಳನ್ನು ಸಕ್ರಿಯಗೊಳಿಸುವ ಸಾಮರ್ಥ್ಯವನ್ನು 5G ಹೊಂದಿದೆ. ಹೀಗಾಗಿ 5ಜಿ ಸ್ಪೆಕ್ಟ್ರಮ್ ನಿಂದ ದೇಶದ ಅಭಿವೃದ್ದಿಗೆ ಮತ್ತಷ್ಟು ವೇಗ ಸಿಗಲಿದೆ.

Exit mobile version