ನಾಯಕನನ್ನು ಹಾಡಿನ ಮೂಲಕ ಗೌರವಿಸಲು ನಿರಾಕರಿಸಿದ್ದಕ್ಕೆ 16 ವರ್ಷದ ಹುಡುಗಿಯನ್ನು ಥಳಿಸಿ ಹತ್ಯೆ!

Iran : ಇರಾನ್ (Girl Beaten To Death) ದೇಶದ 16 ವರ್ಷದ ಹುಡುಗಿಯೊಬ್ಬಳು ಶಾಲೆಯ ತರಗತಿಯಲ್ಲಿದ್ದ ವೇಳೆ ಭದ್ರತಾ ಪಡೆಯವರು ತಮ್ಮ ನಾಯಕನಿಗೆ ಎಲ್ಲರೂ ಹಾಡಿನ ಮೂಲಕ ಗೌರವಿಸಿದರೆ,

ಈ ಹುಡುಗಿ ಹಾಡಲು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ ಆಕೆಯನ್ನು ಥಳಿಸುವ ಮೂಲಕ ಹತ್ಯೆಗೈದಿದ್ದಾರೆ (Beaten To Death) ಎನ್ನಲಾಗಿದೆ

ಇತರ ವಿದ್ಯಾರ್ಥಿಗಳೊಂದಿಗೆ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಒಳಗೊಂಡ ಗೀತೆಯನ್ನು ಹಾಡಿ, ಗೌರವಿಸಲು ನಿರಾಕರಿಸಿದ್ದಕ್ಕಾಗಿ ಬಾಲಕಿಯನ್ನು ಥಳಿಸಲಾಗಿದೆ ಎಂದು ವರದಿಗಳು ಮಾಹಿತಿ (Girl Beaten To Death) ನೀಡಿವೆ.

ಕಳೆದ ವಾರ ವಾಯುವ್ಯ ಅರ್ದಬಿಲ್ ನಗರದಲ್ಲಿ ಭದ್ರತಾ ಪಡೆಗಳು ಶಹೀದ್ ಗರ್ಲ್ಸ್ ಹೈಸ್ಕೂಲ್ ಮೇಲೆ ದಾಳಿ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಬಿಬಿಸಿ ವರದಿ(BBC Report) ಮಾಡಿದೆ.

ಇದನ್ನೂ ಓದಿ : https://vijayatimes.com/aap-ban-fire-crackers/

ಭದ್ರತಾ ಪಡೆಗಳು ಆ ಗೀತೆಯನ್ನು ಹಾಡಲು ಹುಡುಗಿಯರನ್ನು ಒತ್ತಾಯಿಸಿದ್ದಾರೆ. ಆದ್ರೆ, ಆಸ್ರಾ ಪನಾಹಿ ಎಂಬ ಯುವತಿ ಮತ್ತು ಇತರರು ವಿರೋಧಿಸಿದಾಗ, ಅವರನ್ನು ಮನಬಂದಂತೆ ಥಳಿಸಿದ್ದಾರೆ.

ಆಸ್ರಾ ಪನಾಹಿಗೆ ತೀವ್ರ ಗಂಭೀರ ಗಾಯಗಳಾದ ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ : https://vijayatimes.com/deadbody-on-shoulder/

ಆದ್ರೆ, ಆಸ್ರಾ ಪನಾಹಿ ಆಸ್ಪತ್ರೆಯಲ್ಲಿ ವೈದ್ಯರ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಆಕೆಯ ಸಾವಿನ ಹೊಣೆಗಾರಿಕೆಯನ್ನು ಹೊರಲು ಅಧಿಕಾರಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಒಂದು ತಿಂಗಳ ಹಿಂದೆ ಇರಾನ್ ದೇಶದಲ್ಲಿ ಪ್ರಾರಂಭವಾದ ಸರ್ಕಾರದ ವಿರೋಧಿ ಪ್ರತಿಭಟನೆಗಳು ತೀವ್ರ ಭುಗಿಲೆದ್ದಿದ್ದವು.

ಮಹ್ಸಾ ಅಮಿನಿ (Mahsa Amini) ಸಾವಿಗೆ ಆಕ್ರೋಶಗೊಂಡ ಇರಾನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಅಸ್ರಾ ಪನಾಹಿ ಅವರ ಸಾವು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

22 ವರ್ಷದ ಮಹ್ಸಾ ಅಮಿನಿಯ ಸಾವು ನೈತಿಕ ಪೊಲೀಸರ ಕೈಯಿಂದಲೇ ಎಂಬುದು ಅಲ್ಲಿನ ಮಹಿಳೆಯರ ವಾದ!

ಇರಾನ್‌ನಲ್ಲಿ ಮಹಿಳೆಯರು ಆಡಳಿತದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಇಂದಿಗೂ ನಡೆಸುತ್ತಿದ್ದಾರೆ. ಹಿಜಾಬ್ ಸರಿಯಾಗಿ ಧರಿಸದಿದ್ದಕ್ಕಾಗಿ ಇರಾನ್‌ನ ಕುಖ್ಯಾತ ನೈತಿಕ ಪೊಲೀಸರು ಮಹ್ಸಾ ಅಮಿನಿಯನ್ನು ಬಂಧಿಸಿ,

ಆಕೆಯನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದ ಕಾರಣದಿಂದಲೇ ಮಹ್ಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಸಾವನಪ್ಪಿದಳು.

ಇದನ್ನೂ ಓದಿ : https://youtu.be/svXngIHLD34

ಇದಕ್ಕೆ ಪೊಲೀಸರ ಗುಂಪು ಕಾರಣ ಎಂಬುದು ಇರಾನ್ ಮಹಿಳೆಯರ ಆರೋಪ! ಸಾಮಾಜಿಕ ಮಾಧ್ಯಮದಲ್ಲಿ ಇರಾನ್ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸಿಕೊಂಡು ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೆ,

ಇನ್ನು ಕೆಲವರು ಬ್ಯಾನರ್ ಹಿಡಿದು, “ಮಹಿಳೆಯರಿಗೆ ಬದುಕಲು ಸ್ವಾತಂತ್ರ್ಯ ಇಲ್ಲ”, “ಸರ್ವಾಧಿಕಾರಿಗಳ ದರ್ಬಾರ್” ಎಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
Exit mobile version