Gold Price: ಏರಿಕೆ ಕಂಡ ಚಿನ್ನದ ದರ

ನವದೆಹಲಿ, ಡಿ. 19: ಕಳೆದ ವಾರ 10 ಗ್ರಾಂಗೆ 49,300 ರೂ. ಇದ್ದ ಚಿನ್ನದ ಬೆಲೆ ಇಂದು 49,720 ರೂ. ಗೆ ಏರಿಕೆಯಾಗಿದೆ. ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಬೆಂಗಳೂರಿನಲ್ಲಿ 24 ಕ್ಯಾರೇಟ್‌ನ 10 ಗ್ರಾಂ ಚಿನ್ನಕ್ಕೆ 50,610 ರೂ. ಇದ್ದು, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 48,720 ರೂ. ಹಾಗೂ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 49,720 ರೂ. ಇದೆ.

ಹಲವು ನಗರಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಾಗಿದೆ. 2 ದಿನಗಳ ಹಿಂದೆ ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ 10 ಗ್ರಾಂ. ಚಿನ್ನಕ್ಕೆ 49,960 ರೂ. ಅದರೆ ಇಂದು 50, 610ಕ್ಕೆ ಏರಿಕೆಯಾಗಿದೆ. ಇದರ ಜೊತೆ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದು 46,410 ರೂ. ಆಗಿದೆ. ಮುಂದೆ ನೋಡುವುದಾದರೆ ಹಲವು ನಗರಗಳಲ್ಲಿ ಅಂದರೆ ಮೈಸೂರು, ಮಂಗಳೂರು, ಮುಂಬೈ, ಹೈದರಾಬಾದ್, ಕೇರಳ, ಪುಣೆಯಲ್ಲಿ ಅಸು ಪಾಸಿನಲ್ಲಿ ಚಿನ್ನದ ಬೆಲೆಯಿದೆ. ಹಾಗೂ ಬೆಳ್ಳಿಯ ಬೆಲೆ 3 ದಿನಗಳಿಂದ ಏರಿಕೆಕಂಡಿಲ್ಲ. 1 ಕೆಜಿ ಬೆಳ್ಳಿಗೆ 65,610 ರೂ. ಇತ್ತು ಮತ್ತು 67,700 ರೂ. ಆಗಿದೆ.

Exit mobile version