ಕರ್ನಾಟಕದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ಹಳೆ ಬಸ್ ಪಾಸ್ ಅವಧಿ ವಿಸ್ತರಿಸಿದ KSRTC

Bengaluru: 2023-24ನೇ ಸಾಲಿನ ಪ್ರಸ್ತುತ ಶೈಕ್ಷಣಿಕ ವೇಳಾಪಟ್ಟಿಯಂತೆ ಬುಧವಾರದಿಂದ (ಮೇ 31) ಕರ್ನಾಟಕ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಇಂದು ಆರಂಭವಾಗಿವೆ.ಈ ಹಿನ್ನೆಲೆಯಲ್ಲಿ (Good news for students) ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ (Bus Pass) ಅವಧಿಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವಿಸ್ತರಣೆ ಮಾಡುತ್ತದೆ ಎಂದು ಇಂದು (ಮೇ 31) ಆದೇಶ ಹೊರಡಿಸಿದೆ.

ಜೂನ್ 15 ರ ತನಕ ಉಚಿತ ಪ್ರಯಾಣಕ್ಕೆ ಅವಕಾಶ :

KSRTC ಹೊರಡಿಸಿರುವ ಪ್ರಸ್ತುತ ಆದೇಶವು ಎಲ್ಲಾ ಶಾಲಾ ಮತ್ತು ಕಾಲೇಜು (College) ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತದೆ.

ತಮ್ಮ ಈ ಹಿಂದಿನ ವರ್ಷದ ಪಾಸನ್ನೇ ವಿದ್ಯಾರ್ಥಿಗಳು ಬಸ್ ಗಳಲ್ಲಿ ನೀಡಿ ಪ್ರಯಾಣ ಮಾಡಬಹುದು. ಒಂದು ವೇಳೆ ಯಾವ ವಿದ್ಯಾರ್ಥಿ ಪಾಸ್ ಹೊಂದಿರುವುದಿಲ್ಲವೋ

ಅಂತಹ ವಿದ್ಯಾರ್ಥಿಗಳು ತಮ್ಮ ಪ್ರಸಕ್ತ ವರ್ಷದ ಶಾಲಾ ಶುಲ್ಕ ರಸೀದಿ ತೋರಿಸಿ ಪ್ರಯಾಣಿಸಬಹುದು ಎಂದು ಕೆಎಸ್​ಆರ್​​ಟಿಸಿ (KSRTC) ತನ್ನ ಆದೇಶದಲ್ಲಿ ತಿಳಿಸಿದೆ.

https://youtu.be/nW8-3qJD4wA

ಅಷ್ಟೇ ಅಲ್ಲದೆಈ ಬಾರಿ ಸರ್ಕಾರವು ಶಾಲಾ ಪ್ರಾರಂಭಕ್ಕೆ ಕೆಲವೊಂದು ಹೊಸ ಮಾರ್ಗಸೂಚಿಯನ್ನು ನೀಡಲು ನಿರ್ದೇಶನ ನೀಡಿದೆ. ಈ ಸೂಚನೆಗಳಲ್ಲಿ (Good news for students) ಎಲ್ಲಾ ಶಾಲಾ ಆಡಳಿತ ಮಂಡಳಿಗಳು,

ಸರ್ಕಾರ ಮತ್ತು ಅನುದಾನಿತ ಶಾಲೆಗಳಲ್ಲಿ ತಮ್ಮ ಮೊದಲ ದಿನದಂದು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ಜೊತೆ ಸಿಹಿತಿಂಡಿಗಳನ್ನು ಒದಗಿಸಬೇಕೆಂದು ಕಡ್ಡಾಯವಾಗಿ ಆದೇಶವಾಗಿದೆ.

ಹೆಚ್ಚುವರಿಯಾಗಿ, ತರಗತಿಗಳು, ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು ಮತ್ತು ನೀರಿನ ಸಂಗ್ರಹಾಗಾರಗಳು ಸೇರಿದಂತೆ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕೆಂದು ಕರೆ ನೀಡಿದೆ.

ಮತ್ತು ತರಗತಿಗಳು ಪ್ರಾರಂಭವಾಗುವ ಮೊದಲು ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಬೇಕೆಂದು ಶಾಲೆಗಳಿಗೆ ನಿರ್ದೇಶನ ನೀಡಿವೆ.

ಪ್ರತಿ ತರಗತಿಗೆ ತಮ್ಮ ವೇಳಾಪಟ್ಟಿಯನ್ನು ಮುಂಚಿತವಾಗಿ ಸಿದ್ಧಪಡಿಸುವಂತೆ ನಿರ್ವಾಹಕರನ್ನು ಒತ್ತಾಯಿಸಲಾಗಿದೆ.

ಇದಲ್ಲದೆ, ಹೊಸ ಶೈಕ್ಷಣಿಕ ವರ್ಷದ 244 ಕಲಿಕೆಯ ದಿನಗಳು ಸುಗಮವಾಗಿ ನಡೆಯಬೇಕೆಂದು ಸರ್ಕಾರವು ಶೈಕ್ಷಣಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ರಶ್ಮಿತಾ ಅನೀಶ್

Exit mobile version