ವಾಚ್ ಪ್ರಿಯರಿಗೊಂದು ಗುಡ್ ನ್ಯೂಸ್: ಭಾರತದಲ್ಲಿ ಬಿಡುಗಡೆಯಾಗಿದೆ ಗೂಗಲ್ ಪಿಕ್ಸೆಲ್ ವಾಚ್ 2

ಇಂಟರ್‌ನೆಟ್‌ (Internet) ಲೋಕದಲ್ಲಿ ಬೃಹತ್ ಕಂಪನಿಯಾಗಿ ನಿಂತಿರುವ ಗೂಗಲ್ ತನ್ನ ಪಿಕ್ಸೆಲ್ ವಾಚ್ 2 ಅನ್ನು ಭಾರತದ (Google Pixel new Watch) ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು,

ಗೂಗಲ್ ಪಿಕ್ಸೆಲ್ (Google Pixel) 8 ಮತ್ತು ಪಿಕ್ಸೆಲ್ 8 ಪ್ರೊ ಫೋನ್‌ಗಳ ಜೊತೆಗೆಯೇ ಗೂಗಲ್ ಸ್ಮಾರ್ಟ್ ವಾಚ್ ಕೂಡಾ ಎಂಟ್ರಿ ಕೊಟ್ಟಿದೆ. ಈ ವಾಚ್‌ನ ವೈಶಿಷ್ಟ್ಯಗಳು, ಮಾರಾಟ ಆರಂಭದ ದಿನ

ಸೇರಿದಂತೆ (Google Pixel new Watch) ಪ್ರಮುಖ ಮಾಹಿತಿಗಳು ಇಲ್ಲಿವೆ.

ವಾಚ್ 2 ಭಾರತದಲ್ಲಿ ಅಕ್ಟೋಬರ್ 13 ರಿಂದ ಮಾರಾಟವಾಗಲಿದೆ. ಗೂಗಲ್ ತನ್ನ ಮೊದಲ ಸ್ಮಾರ್ಟ್ ವಾಚ್ ಪಿಕ್ಸೆಲ್ ವಾಚ್ (Watch) ಅನ್ನು ಬಿಡುಗಡೆ ಮಾಡಿದ್ದು 2022ರಲ್ಲಿ ಆದರೆ ಮೊದಲ

ಪಿಕ್ಸೆಲ್ ವಾಚ್ ಭಾರತದಲ್ಲಿ ಬಿಡುಗಡೆಯಾಗಿರಲಿಲ್ಲ. ಪಿಕ್ಸೆಲ್ ವಾಚ್ 2 ಅನ್ನು ಹೊರ ತಂದಿದ್ದು, ಇದು ಭಾರತದಲ್ಲಿ ಬಿಡುಗಡೆಯಾಗಿದೆ. ಈ ಮೂಲಕ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಗೂಗಲ್‌ನ

ಮೊದಲ ಸ್ಮಾರ್ಟ್ ವಾಚ್ (Smart Watch) ಎಂದೇ ಇದು ಗುರುತಿಸಿಕೊಂಡಿದೆ.

ಪಿಕ್ಸೆಲ್ ವಾಚ್ 2 ವೈ-ಫೈ ವೇರಿಯೆಂಟ್‌ನಲ್ಲಿ ಮಾತ್ರ ಲಭ್ಯವಿದ್ದು, ಇದರ ಬೆಲೆ 39,999 ರೂಪಾಯಿ. ಪಿಕ್ಸೆಲ್ ವಾಚ್ 2 Qualcomm Snapdragon W5+ Gen 1 ಚಿಪ್‌ಸೆಟ್‌ನಲ್ಲಿ ಚಾಲನೆಯಾಗುತ್ತದೆ

ಮತ್ತು 2ಜಿಬಿ ರ‍್ಯಾಮ್ ಹೊಂದಿದೆ. ಹೊಸದಾಗಿ ಬಿಡುಗಡೆಯಾದ ಪಿಕ್ಸೆಲ್ ವಾಚ್ 2ಗೂ, ಮೊದಲ ಪಿಕ್ಸೆಲ್ ವಾಚ್ ಮಾದರಿಗೂ ಬಾಹ್ಯವಾಗಿ ಯಾವುದೇ ವ್ಯತ್ಯಾಸ ಇಲ್ಲ.

ಕಳೆದ ವರ್ಷದ ಮಾದರಿಯನ್ನೇ ಹೊಸ ವಾಚ್ ಕೂಡಾ ಬಾಹ್ಯ ವಿನ್ಯಾಸದಲ್ಲಿ ಹೋಲುತ್ತದೆ. ಆದರೆ ಕೆಲವೊಂದು ಸಣ್ಣ ಬದಲಾವಣೆಗಳನ್ನೂ ಈ ವಾಚ್‌ನಲ್ಲಿ ಕಾಣಬಹುದು. ಈ ಸ್ಮಾರ್ಟ್‌ ವಾಚ್ ಹೆಚ್ಚು

ಬಾಳಿಕೆ ಬರುವ ಕವರ್ ಗ್ಲಾಸ್ ಮತ್ತು ಶೇಕಡಾ ನೂರರಷ್ಟು ಮರುಬಳಕೆ ಮಾಡಬಹುದಾದ ಅಲ್ಯೂಮಿನಿಯಂ ಅನ್ನು ಇದು ಹೊಂದಿದೆ.

ಈ ಸ್ಮಾರ್ಟ್ ವಾಚ್ ಆಲ್ಟಿಮೀಟರ್, ದಿಕ್ಸೂಚಿ, 3-ಆಕ್ಸಿಸ್ ಅಕ್ಸೆಲೆರೊಮೀಟರ್, ಗೈರೊಸ್ಕೋಪ್, ಆಂಬಿಯೆಂಟ್ ಲೈಟ್ ಸೆನ್ಸರ್ (Ambient Light Sensor) ಬ್ಯಾರೋಮೀಟರ್ ಮತ್ತು

ಮ್ಯಾಗ್ನೆಟೋಮೀಟರ್‌ ನಂತಹ ಬಹು ಸೆನ್ಸರ್‌ಗಳನ್ನು ಹೊಂದಿದ್ದು,ಇದರೊಂದಿಗೆ ಆಕ್ಸಿಜನ್ ಸ್ಯಾಚುರೇಶನ್ (SpO2) ಮಾನಿಟರ್, ಇಸಿಜಿ ಮಾನಿಟರ್, ಮಲ್ಟಿ-ಪಾತ್ ಆಪ್ಟಿಕಲ್ ಹಾರ್ಟ್‌ ರೇಟ್ ಸೆನ್ಸರ್

ಜೊತೆಗೆ ಹಲವು ಆರೋಗ್ಯ ಮೇಲ್ವಿಚಾರಣಾ ವೈಶಿಷ್ಟ್ಯಗಳನ್ನೂ ಈ ವಾಚ್ ಹೊಂದಿದೆ.

ಇದನ್ನು ಓದಿ: ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಪ್ರಾರಂಭ: ಟಿಕೆಟ್ ಪ್ರಕ್ರಿಯೆ ಈಗಾಗಲೇ ಆರಂಭ

Exit mobile version