ಸರ್ಕಾರಿ ನೌಕರರ ವೇತನದಲ್ಲಿ ಶೇ.೧೭ ಏರಿಕೆ ! ಮೂಗಿಗೆ ತುಪ್ಪ ಸವರಿದ್ರಾ ಸಿಎಂ

Karnataka: ಏಳನೇ ವೇತನ ಆಯೋಗದ ವರದಿ ಜಾರಿ ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಮುಷ್ಕರಕ್ಕೆ (government employees salary hike) ಇಳಿದ ಸರ್ಕಾರಿ ನೌಕರರ ಬೇಡಿಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಧ್ಯಂತರ ಪರಿಹಾರ ನೀಡಿದ್ದಾರೆ.

ತಕ್ಷಣವೇ ನೌಕರರ ವೇತನವನ್ನು ಶೇ. 17 ರಷ್ಟು ಹೆಚ್ಚಳ ಮಾಡುವ ಹಾಗೂ ಏಳನೇ ವೇತನ ಆಯೋಗದ ವರದಿ ಬಂದ ತಕ್ಷಣವೇ ಜಾರಿ ಮಾಡುವ ಭರವಸೆ ಕೊಟ್ಟು ಮುಷ್ಕರಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸಿದ್ದಾರೆ.

ಇನ್ನು ಎನ್‌ಪಿಎಸ್(NPS) ರದ್ದು ಮಾಡುವ ಬಗ್ಗೆ ಸಮಿತಿ ರಚನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಅಂತ ಹೇಳಿ ಮುಖ್ಯಮಂತ್ರಿ ಚುನಾವಣಾ ಸಂದರ್ಭದಲ್ಲಿ ಬೀಸೋ (government employees salary hike) ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಮುಖ್ಯಮಂತ್ರಿಗಳ ಆಫರ್‌ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರು, ಸರ್ಕಾರದಿಂದ ಈ ಬಗ್ಗೆ ಸ್ಪಷ್ಟ ಆದೇಶ (government employees salary hike) ಬರುವವರೆಗೂ ಮುಷ್ಕರ ಪ್ರಶ್ನೆಯೇ ಇಲ್ಲ.


ಆದ್ರೆ ಸಿಎಂ ಬೊಮ್ಮಾಯಿ (Bommai) ಅವರು ಇಲ್ಲಿ ಬಹಳ ಜಾಣ್ಮೆಯ ನಡೆಯನ್ನಿಟ್ಟು ಸರ್ಕಾರಿ ನೌಕರರ ವೇತನದಲ್ಲಿ ಶೇ. 17 ಏರಿಕೆ ಮಾಡಿ ಮೂಗಿಗೆ ತುಪ್ಪ ಸವರಿದ್ರು. ಸಿಎಂ ಒಂದು ಕೊಟ್ಟು ಇನ್ನೊಂದು ಕಸಿದು ಕೊಂಡ್ರಾ

ಅನ್ನೋ ಅನುಮಾನ ಈಗ ಸ್ವತ: ಸರ್ಕಾರಿ ನೌಕರರಿಗೇ ಮೂಡಲಾರಂಭಿಸಿದೆ.

ಏಳನೇ ವೇತನ ಆಯೋಗದ ವರದಿ ಬಂದ ಬಳಿಕ ಸರ್ಕಾರ ಅದನ್ನು ಜಾರಿ ಮಾಡಲೇ ಬೇಕಾಗಿದೆ. ಆದ್ರೆ ಆ ಸಂದರ್ಭದಲ್ಲಿ ಬೊಮ್ಮಾಯಿ ಸರ್ಕಾರ ಇರುತ್ತೋ ಇಲ್ವೋ.

ಆದ್ರೆ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಇದ್ದಿದ್ದು ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ,

ಇದನ್ನು ಓದಿ: ಇನ್ನೆಷ್ಟು ಶಿಕ್ಷಕರ ಬಲಿ ಬೇಕು? ಕೋಮು ಬಲಿಗೆ ಮಾತ್ರ ನೀವು ಬೆಲೆ ಕೊಡೋದಾ? ಸಿದ್ದರಾಮಯ್ಯ ಪ್ರಶ್ನೆ

ಹಳೇ ಪಿಂಚಣಿ ಯೋಜನೆಯನ್ನೇ ಮತ್ತೆ ಜಾರಿ ತರಬೇಕು ಅನ್ನೋದು. ರಾಜ್ಯಾದ್ಯಂತ ಈ ಬೇಡಿಕೆಯನ್ನು ಮುಂದಿಟ್ಟು ಉಗ್ರ ಹೋರಾಟ ನಡೆಯಿತು. ಅಷ್ಟೇ ಅಲ್ಲ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ (Freedom Park) ಸರ್ಕಾರಿ ನೌಕರರು ಧರಣಿ ಸತ್ಯಾಗ್ರಹವನ್ನೂ ಮಾಡಿದ್ರು.

ಹಳೇ ಪಿಂಚಣಿ ಯೋಜನೆಯನ್ನು ಜಾರಿ ಮಾಡಲೇ ಬೇಕು ಅನ್ನೋ ಒತ್ತಾಯ ಹೆಚ್ಚಾಗಿ ಅದು ಬೊಮ್ಮಾಯಿ ಸರ್ಕಾರದ ಕುತ್ತಿಗೆಗೆ ಉರುಳಾಗಿ ಕಾಡಿತ್ತು. ಸರ್ಕಾರಿ ನೌಕರರ ಸಂಘದೊಳಗಿನ ಬಣರಾಜಕೀಯವನ್ನು ಅರಿತುಕೊಂಡ

ರಾಜ್ಯ ಸರ್ಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈಗ ತುರ್ತಾಗಿ ಶೇ. 17 ವೇತನ ಹೆಚ್ಚಳದ ಘೋಷಣೆ ಮಾಡಿದೆ ಅನ್ನೋದು ಹೋರಾಟಗಾರರ ಮಾತಾಗಿದೆ.

Exit mobile version