ಐಪಿಎಲ್‌ 2023 : ಪ್ಲೇಆಫ್‌ಗೆ ಎಂಟ್ರಿ ಕೊಟ್ಟ ಗುಜರಾತ್ ಟೈಟಾನ್ಸ್

ಐಪಿಎಲ್‌ 2023: ಐಪಿಎಲ್‌ನಲ್ಲಿ ನಿನ್ನೆ ನಡೆದ 62ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans entered playoffs) ತಂಡವು ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad)

ವಿರುದ್ಧ 34 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಪಡೆ ಈ ಭರ್ಜರಿ ಗೆಲುವಿನೊಂದಿಗೆ ಪ್ಲೇಆಫ್ ಪ್ರವೇಶಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ.

ಗುಜರಾತ್ ಟೈಟಾನ್ಸ್ ತಂಡವು ಇದುವರೆಗೆ ಆಡಿರುವ ಒಟ್ಟು 13 ಪಂದ್ಯಗಳಲ್ಲಿ 9 ಪಂದ್ಯ ಜಯ ಸಾಧಿಸಿದೆ, ಒಟ್ಟು 18 ಅಂಕಗಳನ್ನು ಪಡೆಯುವ ಮೂಲಕ ನೇರವಾಗಿ ಪ್ಲೇಆಫ್ ಪ್ರವೇಶಿಸಿದೆ.

ಇನ್ನು ಈ ತಂಡ ಒಂದು ವೇಳೆ ಕೊನೆಯ ಮ್ಯಾಚ್‌ನಲ್ಲಿ ಸೋತರೂ ಟಾಪ್-2 ನಲ್ಲಿ (Gujarat Titans entered playoffs) ಕಾಣಿಸಿಕೊಳ್ಳುವುದು ಖಚಿತ.

ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧದ ಸೋಲಿನೊಂದಿಗೆ ಪ್ಲೇಆಫ್ (Playoff) ರೇಸ್‌ನಿಂದ ಹೊರಬಿದ್ದಿದೆ. ಈ ತಂಡವು ಆಡಿರುವ 12 ಪಂದ್ಯಗಳಲ್ಲಿ ಕೇವಲ 4 ಮ್ಯಾಚ್‌ನಲ್ಲಿ ಮಾತ್ರ ಗೆದ್ದಿದೆ

ಇದನ್ನು ಓದಿ: RTO ಖತರ್ನಾಕ್ ದಂಧೆ ! ಕದ್ದ ಅಥವಾ ಗುಜರಿ ಹಾಕಬೇಕಾದ ಗಾಡಿಗಳು ಹೊಸ ಮಾಡೆಲ್‌ ಆಗಿ ರಿಜಿಸ್ಟ್ರೇಷನ್‌

ಅಂಕಪಟ್ಟಿಯಲ್ಲಿ ಈಗಾಗಲೇ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ (18 ಅಂಕಗಳು), ಸಿಎಸ್‌ಕೆ (CSK) (15 ಅಂಕಗಳು), ಮುಂಬೈ ಇಂಡಿಯನ್ಸ್ (Mumbai Indians) (14 ಅಂಕಗಳು)

ಹಾಗೂ ಲಕ್ಟೋ ಸೂಪರ್ ಜೈಂಟ್ಸ್ 13 ಅಂಕಗಳನ್ನು ಹೊಂದಿದೆ ಈ ಕಾರಣಕ್ಕಾಗಿ ಕೊನೆಯ 2 ಪಂದ್ಯಗಳಲ್ಲಿ ಜಯ ಸಾಧಿಸಿದರೂ ಸನ್‌ರೈಸರ್ಸ್‌ ತಂಡಕ್ಕೆ ಪ್ಲೇಆಫ್‌ಗೆ ಪ್ರವೇಶಿಸಲಾಗುವುದಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್ (Delhi Captians) ತಂಡವು ಇದಕ್ಕೂ ಮುನ್ನ 12 ಪಂದ್ಯಗಳಲ್ಲಿ 4 ಜಯ ಸಾಧಿಸಿ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿತ್ತು. ಇದೀಗ ಸನ್‌ರೈಸರ್ಸ್ ಹೈದರಾಬಾದ್ ಅಂತಿಮ

ಸುತ್ತಿಗೆ ಪ್ರವೇಶಿಸುವ ಪಟ್ಟಿಯಿಂದ ಹೊರಬಿದ್ದ 2ನೇ ತಂಡವಾಗಿ (Gujarat Titans entered playoffs) ಗುರುತಿಸಿಕೊಂಡಿದೆ.

ಸದ್ಯ ಅಂಕಪಟ್ಟಿಯಲ್ಲಿ 2ನೇ, 3ನೇ ಹಾಗೂ 4ನೇ ಸ್ಥಾನಕ್ಕಾಗಿ ಒಟ್ಟು 7 ತಂಡಗಳ ನಡುವೆ ಪೈಪೋಟಿ ಇದೆ.ಮುಖ್ಯವಾಗಿ ಇದರಲ್ಲಿ ಮುಂಬೈ ಇಂಡಿಯನ್ಸ್,ಸಿಎಸ್‌, ಲಕ್ಕೋ ಸೂಪರ್ ಜೈಂಟ್ಸ್,

ಪಂಜಾಬ್ ಕಿಂಗ್ಸ್ (Punjab Kings) ಹಾಗೂ ಆರ್‌ಸಿಬಿ ನಡುವೆ ನೇರ ಪೈಪೋಟಿ ಇರುವುದು ವಿಶೇಷ.

ಇನ್ನು ಈ ವಾರದಲ್ಲಿ ನಡೆಯುವ ಪಂದ್ಯಗಳ ಫಲಿತಾಂಶಗಳು ಟಾಪ್-4 (Top-4) ನಲ್ಲಿ ಕಾಣಿಸಿಕೊಳ್ಳುವ ತಂಡಗಳನ್ನು ಮುಖ್ಯವಾಗಿ ನಿರ್ಧರಿಸಲಿದೆ.

ಹಾಗಾಗಿ ರಣರೋಚಕ ಹೋರಾಟವನ್ನು ಮುಂದಿನ ಪಂದ್ಯಗಳಲ್ಲಿ ನಿರೀಕ್ಷಿಸಬಹುದಾಗಿದೆ.

ರಶ್ಮಿತಾ ಅನೀಶ್

Exit mobile version