New Delhi: ಲೋಕಸಭಾ ಚುನಾವಣೆ (Loksabha Election) ಹಿನ್ನೆಲೆ ಪ್ರಧಾನಿ ಮೋದಿ ಹೇಳಿಕೆಯ ಕಾರಣ ತಮಿಳುನಾಡಿನ ಕಚ್ಚತೀವು ದ್ವೀಪ ಭಾರಿ ವಿವಾದ ಸೃಷ್ಟಿಸಿತ್ತು. 1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ನೀಡಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ತಮಿಳುನಾಡಿನ ಮೀನುಗಾರರ ಬದುಕನ್ನೇ ದುಸ್ತರ ಮಾಡಿದ್ದಾರೆ ಎನ್ನುವ ಆರೋಪ ಕೂಡಾ ಕೇಳಿಬಂದಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಮಾಡಿದ ಗ್ವಾದರ್ ಬಂದರು ವಿವಾದ ಭುಗಿಲೆದ್ದಿದೆ.

ಮನೆ ಬಾಗಿಲಿಗೆ ಬಂದ ಲಕ್ಷ್ಮಿಯನ್ನು ಒದ್ದೊಡಿಸಿದ ಮಾತು ಕೇಳಿಬರುತ್ತಿದೆ. ಈ ಮೊದಲು ಗ್ವಾದರ್ ಬಂದರು ಖರೀದಿಸುವ ಆವಕಾಶ ಭಾರತಕ್ಕೆ ಬಂದಿತ್ತು . ಆದರೆ ಭಾರತಕ್ಕೆ ಬೇಡ ಎಂದು ನಿರಾಕರಿಸಿದ ಹಿನ್ನೆಲೆ ಇದು ಪಾಕಿಸ್ತಾನದ ಪಾಲಾಗಿ ಅಲ್ಲಿಯ 3ನೇ ಅತೀ ದೊಡ್ಡ ಬಂದರು ಎಂದೇ ಗುರುತಿಸಿ ಕೊಂಡಿದೆ. ಇದೇ ಬಂದರನ್ನು ಇದೀಗ ಚೀನಾ (China) ಕೂಡ ಬಳಸುತ್ತಿದೆ. ಇದರಿಂದ ಪಾಕಿಸ್ತಾನ ಹಾಗೂ ಚೀನಾ ಮೀನುಗಾರಿಗೆ, ವ್ಯಾಪಾರ ವಹಿವಾಟುಗಳು ಸೂಸೂತ್ರವಾಗಿ ನಡೆಯುತ್ತಿದೆ.
ಪಾಕಿಸ್ತಾನದ (Pakistan) ಆಡಳಿತದಲ್ಲಿರುವ ಈ ಗ್ವಾದರ್ ಬಂದರು ನೆಲೆ 1950ರ ವರೆಗೆ ಪಾಕಿಸ್ತಾನದ್ದಾಗಿರಲಿಲ್ಲ. ಬರೋಬ್ಬರಿ 200 ವರ್ಷಗಳ ಕಾಲ ಇದು ಒಮಾನಿ ಆಡಳಿತಕ್ಕೊಳಪಟ್ಟಿತ್ತು. 1783ರಲ್ಲಿ ಒಮನ್ ಸುಲ್ತಾನ್ ಬಳಿ ಇದ್ದ ಗ್ವಾದರ ಬಂದರನ್ನು 1950ರಲ್ಲಿ ಒಮನ್ ಮಾರಾಟಕ್ಕೆ ಮುಂದಾಯಿತು. ಒಮನ್ ಮೊದಲು ಭಾರತದ ಪ್ರಧಾನಿ ಜವಾಹರ್ಲಾಲ್ ನೆಹರು (Jawaharlal Nehru) ಸಂಪರ್ಕಿಸಿ ಈ ಬಂದರು ನೆಲೆ ಖರೀದಿಸುವಂತೆ ಆಫರ್ ನೀಡಿದ್ದರು.

ಆದರೆ ಈ ಬಂದರು ನಮಗ್ಯಾಕೆ ಎಂದು ನೆಹರೂ ಆಫರ್ ತಿರಸ್ಕರಿಸಿದ್ದರು ಎಂದು ವರದಿಯಾಗಿದೆ. ಒಟ್ನಲ್ಲಿ ಈ ಬಂದರು ನೆಲೆಯನ್ನು ಭಾರತ ಖರೀದಿಸಲಿಲ್ಲ. ಉತ್ತಮ ಆದಾಯ ನೀಡುವ ಈ ನೆಲೆಯನ್ನು ಭಾರತ ಖರೀದಿಸಬಹುದು ಎಂದು ಕಾದ ಒಮನ್ ಸುಲ್ತಾನ್ಗೆ ಭಾರತದಿಂದ ಯಾವುದೇ ಸ್ಪಂದನೆ ಸಿಗಲಿಲ್ಲ.
ಹಾಗಾಗ 8 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಗ್ವಾದರ್ ಬಂದರನ್ನು (Gwadar Port) ಮಾರಾಟ ಮಾಡಲಾಯಿತು. ಭಾರತದ ಆರ್ಥಿಕ ನೆರವಿನಲ್ಲಿ ಉಸಿರಾಡುತ್ತಿದ್ದ ಪಾಕಿಸ್ತಾನ ಈ ಬಂದರು ಖರೀದಿಸಿ ಐತಿಹಾಸಿಕ ಹಾಗೂ ಅತ್ಯಂತ ಮಹತ್ವದ ನಿರ್ಣಯ ಕೈಗೊಂಡಿತ್ತು ರಾಜಕೀಯ ಇಚ್ಚಾಶಕ್ತಿ ಹಾಗೂ ದೂರದೃಷ್ಟಿಯ ಕೊರತೆಯಿಂದ ಭಾರತ ಈ ಬಂದರು ನೆಲೆಯನ್ನು ಕಳೆದುಕೊಂಡಿತ್ತು ಎಂಬ ಆರೋಪ ಇದೀಗ ಎಲ್ಲೆಡೆ ಕೇಳಿ ಬರುತ್ತಿದೆ.