ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಮಾಡಲು ಹಿಂದೂಗಳಿಗೆ ಅವಕಾಶ ನೀಡಿದ ವಾರಣಾಸಿ ನ್ಯಾಯಾಲಯ

Varanasi: ವಿವಾದಿತ ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ (Gyanvapi Mosque) ಮುಚ್ಚಿದ ಪ್ರದೇಶವಾದ ‘ವ್ಯಾಸ್ ಕಾ ತೆಖಾನಾ’ ಒಳಗೆ ಪೂಜೆ ಮಾಡಲು ಹಿಂದೂ ಭಕ್ತರಿಗೆ ವಾರಣಾಸಿಯ ನ್ಯಾಯಾಲಯವು ಅನುಮತಿ ನೀಡಿದೆ. ಮುಂದಿನ 7 ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ವಾರಣಾಸಿ (Varanasi) ನ್ಯಾಯಾಲಯವು ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯೊಳಗೆ ಪೂಜೆ ಮಾಡಲು ಅನುಮತಿ ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ಮುಚ್ಚಿದ ಪ್ರದೇಶವಾದ ‘ವ್ಯಾಸ್ ಕಾ ತೆಖಾನಾ’ (Vyasa Ka Tekhana)ದಲ್ಲಿ ಹಿಂದೂ ಭಕ್ತರು ಈಗ ಪ್ರಾರ್ಥನೆ ಸಲ್ಲಿಸಬಹುದು. ಇದೇ ಸಂದರ್ಭದಲ್ಲಿ ನ್ಯಾಯಾಲಯವು ಮುಂದಿನ ಏಳು ದಿನಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂಪರ ವಕೀಲ ವಿಷ್ಣು ಶಂಕರ್ ಜೈನ್ (Vishnu Shankar Jain), ‘ವ್ಯಾಸ್ ಕಾ ತೆಖಾನಾ’ದಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ನೀಡಲಾಗಿದೆ. ವಾರಣಾಸಿ ಜಿಲ್ಲಾಡಳಿತವು 7 ದಿನಗಳಲ್ಲಿ ವ್ಯವಸ್ಥೆ ಮಾಡಬೇಕಾಗಿದೆ. ಈಗ ಎಲ್ಲರಿಗೂ ಅಲ್ಲಿ ಪೂಜೆ ಮಾಡುವ ಹಕ್ಕು ಇದೆ. ನಮಗೆ ಮೊದಲ ಜಯ ಸಿಕ್ಕಿದ್ದು, ಹಿಂದೂಗಳಿಗೆ 31 ವರ್ಷದ ಬಳಿಕ ಪೂಜೆ ಮಾಡಲು ಅವಕಾಶ ಸಿಕ್ಕಿದೆ ಎಂದು ಹೇಳಿದ್ದಾರೆ.

ಇನ್ನು ವಾರಣಾಸಿಯ ಪ್ರಸಿದ್ದ ಕಾಶಿ ವಿಶ್ವನಾಥ (Kashi Vishwanatha Temple) ಮಂದಿರಕ್ಕೆ ತಾಗಿಕೊಂಡಿದ್ದ ಆದಿ ವಿಶ್ವೇಶ್ವರ ದೇವಸ್ಥಾನವ್ನು ದ್ವಂಸಗೊಳಸಿ, ಜ್ಞಾನವ್ಯಾಪಿ ಮಸೀದಿ ಕಟ್ಟಲಾಗಿದೆ. ಹಿಂದೂ ಮಂದಿರವನ್ನೇ ಮಸೀದಿಯಾಗಿ ಪರಿವರ್ತಿಸಲಾಗಿದೆ. ಹೀಗಾಗಿ ಹಿಂದೂಗಳ ಮುಖ್ಯ ಭಕ್ತಿಯ ಕೇಂದ್ರವಾಗಿರುವ ಹಾಗೂ ಹಿಂದೂಗಳ ಮೂಲ ಆಗಿರುವ ಈ ಧಾರ್ಮಿಕ ಕೇಂದ್ರದಲ್ಲಿರುವ ಮಸೀದಿಯನ್ನು ತೆರವು ಮಾಡಿ, ದೇವಸ್ಥಾನ ಪುನರ್ ನಿರ್ಮಾಣ ಮಾಡಬೇಕು ಎಂದು ಕೋರಿ 1991ರಲ್ಲಿ ಕಾನೂನು ಹೋರಾಟ ಆರಂಭಗೊಂಡಿತ್ತು.

ಇಂದಿಗೂ ಹೋರಾಟ ಮುಂದುವರೆದಿದೆ. ಇತ್ತೀಚೆಗೆ ಭಾರತೀಯ ಪುರಾತತ್ವ ಇಲಾಖೆ ಈ ಮಸೀದಿಯೊಳಗೆ ಸಮೀಕ್ಷೆ ನಡೆಸಿದಾಗ, ಅನೇಕ ಹಿಂದೂ ದೇವರುಗಳ ವಿಗ್ರಹಳು, ಕನ್ನಡ ಶಾಸನ ಸೇರಿದಂತೆ ಮಂದಿರದ ಕುರುಹುಗಳ ಪತ್ತೆಯಾಗಿದ್ದವು.

Exit mobile version