Lucknow (ಉತ್ತರ ಪ್ರದೇಶ): ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (Gyanvapi Masjid survey today) ವಾರಣಾಸಿಯ ವಿವಾದಿತ ಜ್ಞಾನವಾಪಿ ಮಸೀದಿಯ
(Gyanvapi Masjid) ಕಾರ್ಬನ್ ಡೇಟಿಂಗ್(Carbon Dating) ಸೇರಿದಂತೆ ವೈಜ್ಞಾನಿಕ ಸರ್ವೇಯನ್ನು ಇಂದು ಪ್ರಾರಂಭಿಸಿದೆ. ವೈಜ್ಞಾನಿಕ ತನಿಖೆಗೆ ಅವಕಾಶ ನೀಡಿರುವ ವಾರಣಾಸಿ
ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ(Supreme Court) ಈಗಾಗಲೇ ಅರ್ಜಿ ಸಲ್ಲಿಸಿದೆ. ಈ ಮಧ್ಯೆ ಭಾರತೀಯ ಪುರಾತತ್ವ
ಸರ್ವೇಕ್ಷಣಾ ಇಲಾಖೆ (ಎಎಸ್ಐ) ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯನ್ನು (Gyanvapi Masjid survey today) ಪ್ರಾರಂಭಿಸಿದೆ.

ಇಂದು ಸೋಮವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿರುವ ತನಿಖೆಯು ಶಿವಲಿಂಗ ರಚನೆ ಇರುವ ವುಜುಖಾನಾ (Wuzu KHana) ಹೊರತುಪಡಿಸಿ ಮಸೀದಿಯ ಎಲ್ಲಾ ಪ್ರದೇಶಗಳಲ್ಲಿ ನಡೆಯಲಿದೆ.
2022 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ವುಜುಖಾನಾ ಪ್ರದೇಶದಲ್ಲಿ ಶಿವಲಿಂಗದ ರೂಪದಲ್ಲಿ ರಚನೆ ಕಂಡುಬಂದಿದೆ. ಅಂದಿನಿಂದ ಆ ಸ್ಥಳಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಎಎಸ್‌ಐ (ASI) ತಂಡವು ತನ್ನ
ವರದಿಯನ್ನು ವಾರಣಾಸಿ(Varanasi) ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಲು ಆಗಸ್ಟ್ 4 ರವರೆಗೆ ಕಾಲಾವಕಾಶ ನೀಡಿದೆ.
ವಾರಣಾಸಿ ಜಿಲ್ಲಾ ನ್ಯಾಯಾಲಯ ಶುಕ್ರವಾರ ನೀಡಿದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲು ಪುರಾತನ ಹಿಂದೂ ದೇವಾಲಯವನ್ನು
ನೆಲಸಮ ಮಾಡಲಾಗಿದೆ ಮತ್ತು ಸಂಪೂರ್ಣ ಸತ್ಯವನ್ನು ಕಂಡುಹಿಡಿಯಲು ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ ಎಂದು ನಾಲ್ಕು ಮಹಿಳಾ ಭಕ್ತರು ನ್ಯಾಯಾಲಯದಲ್ಲಿ (Court) ಈ ಹಿಂದೆ ಅರ್ಜಿ ಸಲ್ಲಿಸಿದರು.
ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ವೈಜ್ಞಾನಿಕ ತನಿಖೆಗೆ ಆದೇಶಿಸಿದೆ.

ಆದೇಶವನ್ನು ಅಂಗೀಕರಿಸುವಾಗ, ಸತ್ಯ ಸಂಗತಿಗಳನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ತನಿಖೆ ಅಗತ್ಯ ಎಂದು ನ್ಯಾಯಾಲಯವು ಪರಿಗಣಿಸಿದೆ. ಅರ್ಜಿದಾರರು ಈ ಹಿಂದೆ 2021 ರಲ್ಲಿ ಜ್ಞಾನವಾಪಿ
ಮಸೀದಿಗೆ ಅರ್ಜಿ ಸಲ್ಲಿಸಿದ್ದರು. ಮಸೀದಿಯೊಳಗೆ ಶೃಂಗಾರ ಗೌರಿ ದೇಗುಲಕ್ಕೆ ವರ್ಷಪೂರ್ತಿ ಪ್ರವೇಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳನ್ನು
(Hindu) ಪ್ರತಿನಿಧಿಸಿದ್ದ ಸುಭಾಷ್ ನಂದನ್ ಚತುರ್ವೇದಿ (Subhash Nandan Chathurvedi), ಎಎಸ್‌ಐಗೆ ವೈಜ್ಞಾನಿಕ ತನಿಖೆ ನಡೆಸಲು ಅನುಮತಿ ನೀಡಿದ ನ್ಯಾಯಾಲಯದ ನಿರ್ಧಾರವು
ಒಂದು ಮಹತ್ವದ ತಿರುವು ಎಂದು ಕರೆದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಬಾಂಬ್ ದಾಳಿಗೆ ಪ್ಲ್ಯಾನ್ : ಐವರು ಶಂಕಿತ ಭಯೋತ್ಪಾದಕರು ಅರೆಸ್ಟ್ !
ಕಳೆದ ವರ್ಷ ನಡೆಸಿದ ವಿಡಿಯೋ ಸಮೀಕ್ಷೆಯಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗದಂತಹ ರಚನೆ ಕಂಡುಬಂದಿದೆ. ಮೇ ತಿಂಗಳಲ್ಲಿ, ಕಾರ್ಬನ್ ಡೇಟಿಂಗ್ ಸೇರಿದಂತೆ
ಶಿವಲಿಂಗದ ವೈಜ್ಞಾನಿಕ ತನಿಖೆಯನ್ನು ಸುಪ್ರೀಂ ಕೋರ್ಟ್ ವಿಳಂಬಗೊಳಿಸಿತು. ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗ ರಚನೆಯ ವೈಜ್ಞಾನಿಕ ತನಿಖೆ ನಡೆಸುವಂತೆ ಅಲಹಾಬಾದ್
(Allahabad) ಹೈಕೋರ್ಟ್ (High Court)ಎಎಸ್‌ಐಗೆ ನಿರ್ದೇಶನ ನೀಡಿದ ನಂತರ ಸುಪ್ರೀಂ ಕೋರ್ಟ್ ಕಾರ್ಬನ್ ಡೇಟಿಂಗ್ ಅನ್ನು ನಡೆಸುವುದನ್ನು ಮುಂದೂಡಿತ್ತು.

ಶಿವಲಿಂಗ ರೂಪದ ರಚನೆಯು ವಝುಖಾನಾದಲ್ಲಿರುವ ಕಾರಂಜಿಯ ಒಂದು ಭಾಗವಾಗಿದೆ ಎಂದು ಜ್ಞಾನವಾಪಿ ಮಸೀದಿ ಸಮಿತಿಯ ಅಧಿಕಾರಿಗಳು ಹೇಳಿದ್ದಾರೆ.ಇನ್ನು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ
ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಮಹಿಳೆಯರು ಸಲ್ಲಿಸಿದ ಅರ್ಜಿಯಲ್ಲಿ ಯಾವುದೇ ಕಾನೂನು ಅಂಶ ಇಲ್ಲ ಎಂದು ಮಸೀದಿ ಸಮಿತಿಯ ಅರ್ಜಿಯನ್ನು ವಜಾಗೊಳಿಸಿದ್ದರು. ವಾರಣಾಸಿಯ ಜ್ಞಾನವಾಪಿ
ಮಸೀದಿ ಪ್ರಕರಣವೂ 1980 ಮತ್ತು 1990ರಲ್ಲಿ ಹೆಚ್ಚು ಸುದ್ದಿ ಮಾಡಿದ್ದ ಅಯೋಧ್ಯೆ(Ayodhya), ಮಥುರಾ ದೇವಾಲಯ-ಮಸೀದಿ ವಿವಾದದ ಜೊತೆಗೆ ನಿಲ್ಲುತ್ತದೆ.
ರಶ್ಮಿತಾ ಅನೀಶ್