ಡಾ.ರಾಜ್ ಕುಮಾರ್ ಅವಮಾನಿಸಿದ ಶಾಂತಿ ನಗರ ಶಾಸಕ ಹ್ಯಾರಿಸ್

ಬೆಂಗಳೂರು,ಫೆ.18: ಕನ್ನಡದ ಮೇರು ನಟ  ವರನಟ ಡಾ.ರಾಜ್​ಕುಮಾರ್​ ಅಂದ್ರೆ ಕನ್ನಡಿಗರು  ದೇವರಂತೆ ಕಾಣುತ್ತಾರೆ. ಅಂತದ್ದರಲ್ಲಿ ಅವರ ಪ್ರತಿಮೆ ಬಗ್ಗೆ ಮಾತಾಡಿದರೆ ಸುಮ್ಮನಿರುತ್ತಾರಾ?  ಅವರ ಪ್ರತಿಮೆ ವಿಚಾರದಲ್ಲಿ ಮಾತನಾಡಿದ್ದ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ವಿರುದ್ದ ಜನ  ಕೆಂಡಾಮಂಡಲರಾಗಿದ್ದಾರೆ. ರಾಜ್​​ಕುಮಾರ್​ ಪ್ರತಿಮೆ ನೋಡಲು ಶಾಸಕ ಹ್ಯಾರಿಸ್ ಅವರು ಹೋಗಿದ್ದರು. ಈ ವೇಳೆ ಮಾತನಾಡಿದ್ದ ಹ್ಯಾರಿಸ್, ಸ್ಟ್ಯಾಚ್ಯು ಇಡುವುದೇ ದೊಡ್ಡ ಕತೆ. ಅದರಲ್ಲಿ ಆಫೀಸ್ ಬೇರೆ ಮಾಡಿಕೊಡುವುದಕ್ಕೆ ಆಗುತ್ತಾ? ಈ ಪ್ರತಿಮೆಗೆ ಕವರ್​ ಏನು ಬೇಕಾಗುವುದಿಲ್ಲ. ಓಪನ್ ಆಗಿ ಇಡಿ ಎಂದಿದ್ದರು.

ಮುಂದುವರೆದು ಮಾತನಾಡಿದ್ದ ಅವರು, ಸ್ಟ್ಯಾಚ್ಯುಗೆಲ್ಲಾ ಕವರ್ ಯಾಕ್ ಬೇಕು? ಪ್ರೊಟೆಕ್ಷನ್ ಬೇಕಿದ್ದರೆ ಮನೆಯಲ್ಲೇ ಇಟ್ಟಿದ್ದರೆ ಆಗಿರುತ್ತಿತ್ತು. ರೋಡಲ್ಲಿ ಯಾಕೆ ಇಡುತ್ತಾರೆ? ಬುದ್ಧಿ ಇಲ್ಲ, ಏನ್ ಮಾಡೋದು? ಏನಾದರೂ ಹೇಳಿದರೆ ಅದನ್ನು ಬೇರೆ ರೀತಿಯಲ್ಲೇ ತೆಗೆದುಕೊಳ್ಳುತ್ತಾರೆ ಎಂದಿದ್ದರು.

ಅವರು ಆಡಿದ ಈ  ಅವಹೇಳನಕಾರಿ ಹೇಳಿಕೆ ಖಂಡಿಸಿ, ರಾಜ್ಯಾಧ್ಯಂತ ಶಾಸಕ ಹ್ಯಾರಿಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈಗ ಶಾಸಕ ಹ್ಯಾರೀಸ್ ಅವರು ತಾವು  ಮಾತಾಡಿದ್ದನ್ನು ಅಲ್ಲಗಳೆಯುತ್ತಾರೆ. ನಾನು ಹಾಗೆ ಮಾತನಾಡೇ ಇಲ್ಲ. ಯಾರೋ ವಿಡಿಯೋವನ್ನು ಎಡಿಟ್​ ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.. ಅಲ್ಲದೇ ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಕ್ಷಮೆ  ಕೂಡ ಕೇಳಿದ್ದರು.

ಇದೀಗ ಶಾಂತಿನಗರದ ಅವರ ಮನೆಯ ಮುಂದೆ ಹ್ಯಾರೀಸ್ ಹೇಳಿಕೆ ಖಂಡಿಸಿ, ರಾಜ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ ಕುಮಾರ್ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿದ್ದಾರೆ.

Exit mobile version