Bengaluru: ಸುಮಾರು ಹನ್ನೊಂದು ವರ್ಷಗಳ ಹಿಂದೆ ಬೆಳ್ತಂಗಡಿಯಲ್ಲಿ ನಡೆದಿದ್ದ ಕುಮಾರಿ ಸೌಜನ್ಯ (HC reject Soujanya reinvestigation) ಅತ್ಯಾಚಾರ ಮತ್ತು ಕೊಲೆ
ಪ್ರಕರಣದಲ್ಲಿಆರೋಪಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ
ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ (High Court) ವಜಾಗೊಳಿಸಿದೆ.

ಮರು ತನಿಖೆಗೆ ಆಗ್ರಹಿಸಿ ಬೆಂಗಳೂರಿನ ಶೇಷಾದ್ರಿಪುರದ ಗಿರೀಶ್ (Girish) , ನವೀನ್ ಕುಮಾರ್ ನೆರಿಯಾ ಬೆಳ್ತಂಗಡಿ ಮತ್ತು ಪುತ್ತೂರಿನ ವಿನಾಯಕ ಫ್ರೆಂಡ್ಸ್ ಟ್ರಸ್ಟ್ ಮತ್ತಿತರರು ಸಲ್ಲಿಸಿದ್ದ
ಪಿಐಎಲ್ ಕುರಿತು ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾ.ಕೃಷ್ಣ ಎಸ್.ದೀಕ್ಷಿತ್ (Krishna S. Dixit) ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಮೂಲ ದೂರುದಾರರು ಅಥವಾ
ಸಂತ್ರಸ್ತ ಕುಟುಂಬ ಮಾತ್ರ ಆರೋಪಿಯನ್ನು ದೋಷಮುಕ್ತಗೊಳಿಸಿದ ಸಿಬಿಐ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿಅವಕಾಶವಿದೆ ಎಂದು ಅರ್ಜಿದಾರರ ವಾದ ಆಲಿಸಿದ
ಬಳಿಕ ನ್ಯಾಯಪೀಠವು ಅಭಿಪ್ರಾಯಪಟ್ಟಿತು. ಅಲ್ಲದೆ ಅರ್ಜಿ ಸಂಬಂಧದ ಇತರೆ ಕಾನೂನು ವಿಧಾನ ಅನುಸರಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿತು.
ಹಿರಿಯ ವಕೀಲ ಅರುಣ್ ಶ್ಯಾಮ್ (Arun Sharma) ಅವರು ಇದಕ್ಕೂ ಮುನ್ನವೇ ಅರ್ಜಿದಾರರ ಪರ ವಾದ ಮಂಡಿಸಿ, ಆರೋಪಿ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇಲ್ಲವೆಂಬ ಕಾರಣಕ್ಕೆ ಆತನನ್ನು
ವಿಚಾರಣಾ ಕೋರ್ಟ್ ಖುಲಾಸೆಗೊಳಿಸಿದ್ದು, ಘಟನೆ ನಡೆದಿರುವುದು ನಿಜವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ನಿಜವಾದ ದೋಷಿ ತಪ್ಪಿಸಿಕೊಂಡಿದ್ದು, ಪ್ರಕರಣದ ನಂತರದ ಮಹತ್ವದ ಅವಧಿಯಲ್ಲಿ
ತನಿಖಾಧಿಕಾರಿ, ವೈದ್ಯರಿಂದ ಕೆಲ ಲೋಪಗಳು ನಡೆದಿವೆ. ಹಾಗಾಗಿ ಮರುತನಿಖೆ ನಡೆಸಬೇಕೆಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದ್ದು, ಸಿಬಿಐ ಇಲ್ಲವೇ ಸ್ವತಂತ್ರ ತನಿಖಾ ಸಂಸ್ಥೆ ಅಥವಾ ಎಸ್‌ಐಟಿಯಿಂದ
ಹೊಸದಾಗಿ ಮರು ತನಿಖೆ ನಡೆಸುವಂತೆ (HC reject Soujanya reinvestigation) ಆದೇಶಿಸಬೇಕು ಎಂದು ಕೋರಿದರು.

ಇನ್ನು ಸರ್ಕಾರ, ಮೂಲ ದೂರುದಾರರು ಅಥವಾ ಸಂತ್ರಸ್ತ ಕುಟುಂಬಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದು, ಮೇಲ್ಮನವಿಯಲ್ಲಿ ತನಿಖಾ ಲೋಪ ಪರಿಗಣಿಸಬಹುದಾಗಿದೆ ಮತ್ತು ಈ ಅರ್ಜಿಯಲ್ಲಿ
ಮಾಡಿರುವ ಮನವಿಗಳನ್ನು ವ್ಯವಹರಿಸಬಹುದಾಗಿದೆ’ ಎಂದು ಹೇಳಿತು. ತದ ನಂತರ ವಕೀಲರು ‘ಸಂತ್ರಸ್ತ ಕುಟುಂಬವು ಮೇಲ್ಮನವಿ ಸಲ್ಲಿಸಿಲ್ಲ’ ಎಂದರು. ಆಗ ನ್ಯಾಯಪೀಠವು ಮೇಲ್ಮನವಿ ಸಲ್ಲಿಸಲು
ಸಂತ್ರಸ್ತ ಕುಟುಂಬಕ್ಕೆ ನೀವು ಸಹಾಯ ಮಾಡಿ ಎಂದು ಸಲಹೆ ನೀಡಿರುವುದಲ್ಲದೆ ಅರ್ಜಿದಾರರ ಉದ್ದೇಶ ಒಳ್ಳೆಯದಿದ್ದರೂ ಪಿಐಎಲ್ ಅನ್ನು ಕಾನೂನಿನ ಮಿತಿ ವ್ಯವಹರಿಸಬೇಕಾಗುತ್ತದೆ. ಅದರಂತೆ ಅರ್ಜಿ
ಹಿಂಪಡೆದು ನಿಮ್ಮ ಮನವಿಗಳ ಕುರಿತು ಕಾನೂನಿನಡಿ ಲಭ್ಯವಿರುವ ಪರ್ಯಾಯ ವಿಧಾನಗಳ ಮೂಲಕ ಪರಿಹಾರ ಪಡೆದು ಕೊಳ್ಳಬಹುದು ಎಂದು ನ್ಯಾಯಪೀಠವು ತಿಳಿಸಿದೆ.
ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆಯಲು ನಿರಾಕರಿಸಿದ್ದು, ಅರ್ಜಿ ಸಂಬಂಧ ಮೆರಿಟ್ ಮೇಲೆ ಆದೇಶ ಮಾಡಬೇಕು ಎಂದು ಕೋರಿದ್ದರು. ಅದಕ್ಕೆ ಒಪ್ಪಿದ ನ್ಯಾಯಪೀಠವು ಅರ್ಜಿಯನ್ನು
ವಜಾಗೊಳಿಸಲಾಗಿದೆ ಮತ್ತು ಆ ಕುರಿತು ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ತಿಳಿಸಿತು.
ಏನಿದು ಪ್ರಕರಣ?
ಸುಮಾರು ಹನ್ನೊಂದು ವರ್ಷಗಳ ಹಿಂದೆ ಅಂದರೆ 2012 ರಲ್ಲಿಉಜಿರೆಯ ಎಸ್‌ಡಿಎಂ (SDM) ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಕುಮಾರಿ ಸೌಜನ್ಯ ಮೇಲೆ ಲೈಂಗಿಕ
ದೌರ್ಜನ್ಯವೆಸಗಿ ತದ ನಂತರ ಭೀಕರವಾಗಿ ಕೊಲೆ ಮಾಡಲಾಗಿದ್ದು, ಈ ಪ್ರಕರಣದ ಸಂಬಂಧ ಮೊದಲಿಗೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದರು. ಕೆಲವು ಪ್ರಮುಖ ವ್ಯಕ್ತಿಗಳು ನಂತರ ಈ ಪ್ರಕರಣದಲ್ಲಿ
ಭಾಗಿಯಾಗಿದ್ದಾರೆಂಬ ಒತ್ತಡದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರಿಗೆ ವಹಿಸಲಾಗಿದ್ದು, ಸಿಐಡಿ ಪೊಲೀಸರು ಸಮಗ್ರ ತನಿಖೆ ನಡೆಸಿ ಸಂತೋಷ್ ರಾವ್ (Santhosh Rao) ಎಂಬ
ಆರೋಪಿಯನ್ನು ಬಂಧಿಸಿದ್ದರು. ಹಾಗೂ ಸಿಬಿಐ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿಆರೋಪಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿ ಕಳೆದ ಜೂನ್‌ನಲ್ಲಿಆದೇಶ ನೀಡಿತ್ತು.
ಇದನ್ನು ಓದಿ: ಚಂದ್ರಬಾಬು ನಾಯ್ದು ಅರೆಸ್ಟ್ ! ಭ್ರಷ್ಟಾಚಾರ ಪ್ರಕರಣದಲ್ಲಿ ಆಂಧ್ರ ಮಾಜಿ ಸಿಎಂ ಸಿಐಡಿ ವಶಕ್ಕೆ
- ಭವ್ಯಶ್ರೀ ಆರ್.ಜೆ