ಬಿಬಿಎಂಪಿಯಲ್ಲಿ ಮತ್ತೊಂದು ಕಮೀಷನ್ ದಂಧೆ ಬಗ್ಗೆ ಎಚ್ಡಿಕೆ ಆರೋಪ

Bengaluru: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು (HDK about BBMP scam) ರಾಜ್ಯ ಸರ್ಕಾರದ ವಿರುದ್ಧ ಒಂದೊಂದಾಗಿಯೇ ಆರೋಪ ಮಾಡುತ್ತಿದ್ದು, ಆ. 5ರಂದು ಸಹ ತಮ್ಮ

ಆರೋಪಗಳನ್ನು ಮುಂದುವರಿಸಿದ್ದಾರೆ. ಈ ಸಲ ಇವರು ಬಿಬಿಎಂಪಿಯಲ್ಲಿ(BBMP) ಶೇ.10 ರಿಂದ 15ರಷ್ಟು ಕಮೀಷನ್ ಬಗ್ಗೆ ಆರೋಪಿಸಿದ್ದಾರೆ. ಬಿಲ್ ಗಳನ್ನು ಗುತ್ತಿಗೆದಾರರು ಬಾಕಿ ಇಟ್ಟುಕೊಂಡಿದೆ.

ಆ ಬಿಲ್ ಗಳನ್ನು ಪಾಸ್ ಮಾಡಲು ಇಷ್ಟು ಮೊತ್ತ ಕೊಡಬೇಕೆಂದು ಕಮೀಷನ್ (Commission) ಕೇಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿಯವರು (Kumaraswamy) ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಮತ್ತಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ಬಾರಿ ಸಿಎಂ ಸಿದ್ದರಾಮಯ್ಯ (Siddaramaiah) ಡಿಸಿಎಂ ಡಿ.ಕೆ.ಶಿವಕುಮಾರ್,

ಗೃಹ ಸಚಿವ ಜಿ.ಪರಮೇಶ್ವರ್ ವಿರುದ್ಧವೂ ಗುಡುಗಿದ್ದಾರೆ. ಜೊತೆಗೆ, ಗುತ್ತಿಗೆದಾರರ ಬಿಲ್ (Bill) ಪಾಸ್ ಮಾಡಲು ಶೇ.10ರಿಂದ 15ರಷ್ಟು ಕಮೀಷನ್ ಕೇಳಲಾಗುತ್ತಿದೆ ಎಂದು ಬಿಬಿಎಂಪಿಯಲ್ಲಿ ಮತ್ತೊಂದು ಬಾಂಬ್

(Bomb) ಹಾಕಿದ್ದಾರೆ.

ಸ್ಪಂದನಾಘಾತ : ಕೀಟೋ ಡಯೆಟ್‌ ಎಂದರೇನು? ದಿಢೀರ್‌ ತೂಕ ಇಳಿಸುವುದರಿಂದ ದೇಹದ ಮೇಲಾಗುವ ಪರಿಣಾಮವೇನು?

ಬೆಂಗಳೂರಿನಲ್ಲಿ(Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಇವರು ನನ್ನನ್ನು ಸಿಎಂ ಸಿದ್ದರಾಮಯ್ಯ ಅವರು ಹಿಟ್ ಆ್ಯಂಡ್ ರನ್ (Hit and Run) ಮನುಷ್ಯ ಎಂದು ಹೇಳಿದ್ದಾರೆ. ನಾನು ಹಿಟ್

ಆ್ಯಂಡ್ ರನ್ ಜಾಯಮಾನದವನಲ್ಲ. ನಾನು ಸಾಕ್ಷಿಗಳನ್ನು ಇಟ್ಟುಕೊಂಡು ಮಾತನಾಡುವವನು (HDK about BBMP scam) ಎಂದು ಹೇಳಿದ್ದಾರೆ.

ಹುಬ್ಲೋ ವಾಚ್ ಪ್ರಕರಣ
ಇದೇ ಸಮಯದಲ್ಲಿ ಮಾತನಾಡಿದ ಎಚ್.ಡಿ.ಕೆಯವರು (HDK) ಸಿದ್ದರಾಮಯ್ಯನವರು ಹಿಂದೆ ಸಿಎಂ ಆಗಿದ್ದಾಗ ಸೃಷ್ಟಿಯಾಗಿದ್ದ ಹುಬ್ಲೋ ವಾಚ್ (Hublo Watch) ಪ್ರಕರಣವನ್ನು ಪ್ರಸ್ತಾಪಿಸಿದ್ದು, ಈ ಹಿಂದೆ

ಸಿದ್ದರಾಮಯ್ಯನವರ ವಿರುದ್ಧ ಹುಬ್ಲೋ ವಾಚ್ ಪ್ರಕರಣ ದೊಡ್ಡ ಸುದ್ದಿಯಾದಾಗ ನಾನು ಅವರನ್ನು ಸಮಾಜವಾದಿಯಲ್ಲ, ಮಜಾವಾದಿ ಅಂತ ಲೇವಡಿ ಮಾಡಿದ್ದೆ. ಆಗ ಮಾಧ್ಯಮಗಳಲ್ಲಿ ಅವರ ವಾಚ್ (Watch)

ದೊಡ್ಡ ಸುದ್ದಿ ಯಾಗಿತ್ತು. ಆಗ ಸಿದ್ದರಾಮಯ್ಯನವರು (Siddaramaiah) ಯಾರೋ ಒಬ್ಬ ವ್ಯಕ್ತಿಯನ್ನು ಕರೆತಂದು ಅವನು ದುಬೈನಲ್ಲಿ (Dubai) ವಾಚ್ ತಂದು ಸಿದ್ದರಾಮಯ್ಯನವರಿಗೆ ಗಿಫ್ಟ್ ಕೊಟ್ಟಿರುವಂತೆ ಮಾಡಿದ್ದರು.

ನಕಲಿ ಬಿಲ್ ಕೂಡ ಸೃಷ್ಟಿ ಮಾಡಿದ್ದರು. ಆದರೆ ನಾನು ಆ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಲ್ಲ ಎಂದು ಟಾಂಗ್ ಕೊಟ್ಟರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಇದೇ ವೇಳೆ ಕುಮಾರಸ್ವಾಮಿ ಅವರು ಶೇ.10 ರಿಂದ 15 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು. ಗುತ್ತಿಗೆದಾರರ ಬಿಲ್ ಪಾಸ್ ಮಾಡಲು

ಗುತ್ತಿಗೆಯ ಒಟ್ಟು ಮೊತ್ತದ ದುಡ್ಡಿನ ಮೇಲೆ ಶೇ.10 ರಿಂದ 15 ರಷ್ಟು ಕಮೀಷನ್ ಕೇಳಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.

ಭವ್ಯಶ್ರೀ ಆರ್.ಜೆ

Exit mobile version