ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ನಾಳೆ ವಿವರವಾಗಿ ಹೇಳುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

Bengaluru: ಜೆಡಿಎಸ್ (JDS) ಮತ್ತು ಬಿಜೆಪಿ (BJP) ಮೈತ್ರಿ ವಿಚಾರವಾಗಿ ನಾಳೆ ಮಾತನಾಡುತ್ತೇನೆ. ಎಷ್ಟು ಸೀಟ್ ಅಂತಾ ನಾವು ಚರ್ಚಿಸಿಲ್ಲ ಮತ್ತು ಬಿಜೆಪಿಯೂ ಚಿಂತನೆ ಮಾಡಿಲ್ಲ. 28 ಕ್ಷೇತ್ರದ ಇಂದಿನ ಪರಿಸ್ಥಿತಿ ಅವಲೋಕಿಸಿ ಚರ್ಚೆ ಮಾಡುತ್ತೇವೆ ಮತ್ತು ಮೈತ್ರಿ ಇಂದು ಸಂಜೆ ಅಮಿತ್ ಶಾ (Amit Shah), ಜೆಪಿ ನಡ್ಡಾ ಜೊತೆ ಚರ್ಚೆ ಮಾಡಿ ನಾಳೆ ನಿಮಗೆ ವಿವರವಾಗಿ ಹೇಳುತ್ತೇನೆ. ಅವಕಾಶ ಸಿಕ್ಕರೆ ಪ್ರಧಾನಿ ಮೋದಿ (Modi) ಅವರೊಂದಿಗೆ ದೇವೇಗೌಡರು ಚರ್ಚಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೆಹಲಿಗೆ ಹೊರಡುವ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ವಿವರಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್- ಬಿಜೆಪಿಯೊಂದಿಗೆ ಮೈತ್ರಿ ಮಾತುಕತೆ ಹಿನ್ನೆಲೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (H D Kumaraswamy) ದೆಹಲಿಗೆ ಹೊರಟಿದ್ದಾರೆ. ಅವರ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರಿಗೆ ಸಾಥ್ ನೀಡಿದ್ದಾರೆ. ಲೋಕಸಭೆ ಚುನಾವಣೆ 2024ಕ್ಕೆ ಜೆಡಿಎಸ್ ನಾಲ್ಕು ಕ್ಷೇತ್ರಗಳಾದ ಹಾಸನ, ಮಂಡ್ಯ, ತುಮಕೂರು (Tumakur), ಕೋಲಾರದ ಬೇಡಿಕೆ ಮುಂದಿಟ್ಟಿದ್ದು, ತುಮಕೂರು ಲೋಕಸಭಾ ಕ್ಷೇತ್ರದ ವಿಚಾರ ಇನ್ನೂ ಅಂತಿಮವಾಗಿಲ್ಲ.

ಇಂದಿನ ಚರ್ಚೆ ವೇಳೆ ಸೀಟು ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದ್ದು, ನಾಳೆ ಅಥವಾ ನಾಡಿದ್ದು ಉಭಯ ಪಕ್ಷಗಳಿಂದ ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ ಎಂದು ತಿಳಿಸಿದರು. ಕಾವೇರಿ ನೀರು ಪ್ರಾಧಿಕಾರ ಕೇಳಿರುವುದಕ್ಕೆ ತಮಿಳು ನಾಡಿಗೆ ನೀರು ಬಿಟ್ಟಿದ್ದೇವೆ ಎಂದು ಹೇಳಿರುವುದನ್ನು ಮಾಧ್ಯಮದ ಮೂಲಕ ತಿಳಿದುಕೊಂಡೆ ಆದರೆ ಸರ್ಕಾರ ನಾವು ನೀರು ಬಿಟ್ಟಿಲ್ಲ ಎಂದು ಜನರ ಹಾದಿ ತಪ್ಪಿಸುತ್ತಿದ್ದಾರೆ. ಕೋರ್ಟ್ ನಲ್ಲಿ ನೀರು ಬಿಟ್ಟಿದ್ದೇವೆ ಎನ್ನುತ್ತಾರೆ. ಮುಂದೆ ಏನೇನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಗುಡುಗಿದ್ದಾರೆ.

ದೆಹಲಿಗೆ ಹೊರಟ ಜಾರಕಿಹೊಳಿ: ಕೆಂಪೇಗೌಡ ಏರ್ ಪೋರ್ಟ್ #KempegowdaAirport ನಿಂದ ಹೆಚ್ ಡಿ ಕುಮಾರಸ್ವಾಮಿ ದೆಹಲಿಗೆ ಹೊರಟ ಬೆನ್ನಲ್ಲೇ ಮಾಜಿ ಸಚಿವ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarakiholi) ಕೂಡ ದೆಹಲಿಗೆ ಹೊರಟಿರುವುದು ಜನರಿಗೆ ಕುತೂಹಲ ಮೂಡಿಸಿದೆ.ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ರಮೇಶ್ ಜಾರಕಿಹೊಳಿಯವರು ಯಾವುದೇ ಮಾಹಿತಿ ನೀಡದೆ ನಿರಾಕರಿಸಿದ್ದಾರೆ.

ಮೇಘಾ ಮನೋಹರ ಕಂಪು

Exit mobile version