ಕುಟುಂಬಕ್ಕೆ ಒಂದು ಟಿಕೆಟ್‌ ಎಂದು ಘೋಷಿಸಲಿ, ನನ್ನ ಮಕ್ಕಳಿಂದ ರಾಜೀನಾಮೆ ಕೊಡಿಸ್ತೀನಿ: ಹೆಚ್.ಡಿ ರೇವಣ್ಣ

Hassan : ದಿನೇ ದಿನೇ ಗೌಡರ ಕುಟುಂಬದಲ್ಲಿ ಕಲಹಗಳು ಭುಗಿಲೇಳುತ್ತಿವೆ. ಭವಾನಿ ರೇವಣ್ಣ(Bhavani Revanna) ಅವರಿಗೆ ಹಾಸನ ಟಿಕೆಟ್‌(HDRevanna statement about ticket) ಅನ್ನೋ ಬಾಂಬ್‌ ಜೆಡಿಎಸ್(JDS) ಪಾಳಯದಲ್ಲಿ ಭಾರೀ ಕಂಪನವನ್ನೇ ಸೃಷ್ಟಿಸಿದೆ.

ಜೆಡಿಎಸ್‌ ಪ್ರಮುಖ ನಾಯಕರ ಹೇಳಿಕೆಗಳು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಅದ್ರಲ್ಲೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ(HD Kumaraswamy) ಅವರ ಸಹೋದರ ಮಾಜಿ ಸಚಿವ,

ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ಅವರ ‘ಕುಟುಂಬಕ್ಕೆ ಒಂದು ಟಿಕೆಟ್‌ ಎಂದು ಘೋಷಿಸಲಿ, ನನ್ನ ಮಕ್ಕಳಿಂದ ರಾಜೀನಾಮೆ ಕೊಡಿಸ್ತೀನಿ’ ಅನ್ನೋ ಹೇಳಿಕೆ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.

ಕಳೆದ ಒಂದು ವಾರದಿಂದ ಹಾಸನ(Hassan) ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ ಪಕ್ಷದಲ್ಲಿ ಟಿಕೆಟ್‌ಗಾಗಿ ಕುಟುಂಬ ಕಾಳಗ ತೀವ್ರಗೊಂಡಿದ್ದು,

ಹೆಚ್‌.ಡಿ ಕುಮಾರಸ್ವಾಮಿ ಅವರ ಸಹೋದರ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ (Bhavani Revanna)ಅವರು ಹಾಸನ ವಿಧಾನಸಭಾ ಕ್ಷೇತ್ರದಿಂದ ಈ ಬಾರಿಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸ್ವಯಂ ಘೋಷಣೆ ಮಾಡಿಕೊಂಡಿದ್ದರು!

ಸದ್ಯ ಈ ಒಂದು ಸ್ವಯಂ ಘೋಷಣೆಗೆ ಸಮ್ಮತಿ ಸೂಚಿಸದ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್‌(JDS) ಪಕ್ಷದ ವಿರುದ್ಧ ಇದೀಗ ದೇವೇಗೌಡರ ಕುಟುಂಬದಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ!

ಇದನ್ನೂ ಓದಿ: ಕುಮಾರಸ್ವಾಮಿ ಹೇಳಿದ್ರು ಅಂಥ ನಾನು ಹೊಸ ಪಕ್ಷ ಕಟ್ಟಕಾಗುತ್ತಾ , ಕಟ್ಟಿದ್ರೆ…: ಸಿದ್ದರಾಮಯ್ಯ

ಹಾಸನ ವಿಧಾನಸಭಾ ಕ್ಷೇತ್ರ ಹಲವು ವರ್ಷಗಳಿಂದ ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಜೆ.ಪ್ರೀತಂ ಗೌಡ(Preetham Gowda) ಅವರು 2018ರ ಚುನಾವಣೆಯಲ್ಲಿ ಜೆಡಿಎಸ್ ಏಕಸ್ವಾಮ್ಯವನ್ನು ಮುರಿಯುವಲ್ಲಿ ಯಶಸ್ವಿಯಾದರು.

ಕರ್ನಾಟಕದಲ್ಲಿ(Karnataka) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಜನತಾ ದಳ ಪಕ್ಷದ ಟಿಕೆಟ್‌ಗಾಗಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಈ ಚರ್ಚೆ ತೀವ್ರಗೊಂಡಿದೆ.

ಜನವರಿ 23 ರಂದು ಹಾಸನ ತಾಲೂಕಿನ ಕೆಕ್ಕನಳ್ಳಿಯಲ್ಲಿ ನಡೆದ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭವಾನಿ ರೇವಣ್ಣ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ,

ನನ್ನನ್ನು ಹಾಸನ ಕ್ಷೇತ್ರದಿಂದ ಕಣಕ್ಕಿಳಿಸಲು ಪಕ್ಷದ ಮುಖಂಡರು ನಿರ್ಧರಿಸಿದ್ದು, ಶೀಘ್ರದಲ್ಲೇ ನನ್ನ ಹೆಸರನ್ನು ಘೋಷಿಸಲಾಗುವುದು ಎಂದು ಹೇಳಿದರು.

ಭವಾನಿ ರೇವಣ್ಣ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ, ಮತ್ತೊಬ್ಬ ಪ್ರಮುಖ ಟಿಕೆಟ್ ಆಕಾಂಕ್ಷಿಯಾದ ಹೆಚ್.ಎಸ್ ಸ್ವರೂಪ್(HS Swaroop) ಅವರು ಇದನ್ನು ವಿರೋಧಿಸಿದ್ದಾರೆ.

ಇನ್ನು ಜೆಡಿಎಸ್‌ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ಅಭ್ಯರ್ಥಿಯ ಆಯ್ಕೆಯನ್ನು ನಿರಾಕರಿಸಿದ್ದು, ಪಕ್ಷದ ಹೈಕಮಾಂಡ್ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಿರ್ಧರಿಸಲಿದೆ.

ಭವಾನಿ ರೇವಣ್ಣ ಅವರಿಗೆ ಇನ್ನೂ ಟಿಕೆಟ್ ಅಂತಿಮಗೊಳಿಸಿಲ್ಲ, ಅವರಿಗೆ ಟಿಕೆಟ್‌ ನೀಡುವುದು ಅನಿವಾರ್ಯವಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ಹಾಸನದ ಅಭ್ಯರ್ಥಿಯನ್ನು ನಾನೇ ನಿರ್ಧರಿಸುತ್ತೇನೆ ಎಂದು ಜೆಡಿಎಸ್‌ ಪಕ್ಷದ ವರಿಷ್ಠ ಹೆಚ್‌.ಡಿ ದೇವೇಗೌಡರ ಹೇಳಿಕೆಗೆ(HDRevanna statement about ticket) ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು,

ದಯವಿಟ್ಟು ದೇವೇಗೌಡರ ಹೆಸರನ್ನು ಇಲ್ಲಿಗೆ ತರಬೇಡಿ. ಅವರು ದೀರ್ಘಾಯುಷ್ಯವನ್ನು ಹೊಂದಬೇಕೆಂದು ನಾನು ಬಯಸುತ್ತೇನೆ.

ದೇವೇಗೌಡರಿಗೆ ಉಡುಗೊರೆಯಾಗಿ ರಾಜ್ಯದಲ್ಲಿ 120 ಸ್ಥಾನ ಗೆಲ್ಲುವ ಆಸೆ ಹೊಂದಿದ್ದೇನೆ. ಪಕ್ಷ 4-5 ಮಹಿಳೆಯರಿಗೆ ಟಿಕೆಟ್ ನೀಡಿದ್ದು, ಹಾಸನಕ್ಕೆ ಭವಾನಿ ಅನಿವಾರ್ಯವಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕಳಪೆ ಆಹಾರ ವಿರೋಧಿಸಿದ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರನೂಕಿದ ಅಧಿಕಾರಿ

ಇನ್ನು ಈ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಕುತೂಹಲದ ಸಂಗತಿಯೆಂದರೆ,

ಹಾಸನ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಅವರು ತಮ್ಮ ತಾಯಿ ಭವಾನಿ ರೇವಣ್ಣ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದಾರೆ.

ನಮ್ಮ ತಾಯಿ ಗೆಲ್ಲುವ ಸಾಧ್ಯತೆ ಹೆಚ್ಚು ಇದೆ ಎಂದು ಹೇಳಿದ್ದಾರೆ.

ಭವಾನಿ ಅವರ ಮತ್ತೋರ್ವ ಪುತ್ರ ಎಂ.ಎಲ್‌.ಸಿ ಸೂರಜ್ ರೇವಣ್ಣ(Sooraj Revanna) ಅವರು ಅನಿವಾರ್ಯವಲ್ಲದಿದ್ದರೂ 2018 ರಲ್ಲಿ ಕಳೆದುಕೊಂಡಿದ್ದ ಕ್ಷೇತ್ರವನ್ನು ನಾವೀಗ ಮರಳಿ ಪಡೆಯಬೇಕು ಎಂದು ಹೇಳುವ ಮುಖೇನ ತಮ್ಮ ತಾಯಿಗೆ ಬೆಂಬಲ ಸೂಚಿಸಿದ್ದಾರೆ.

ಸದ್ಯ ಭವಾನಿ ರೇವಣ್ಣ ಅವರು ವಿಧಾನಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಉದ್ಭವಗೊಂಡಿರುವ ಚರ್ಚೆ ದೇವೇಗೌಡರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ!

ಭವಾನಿ ರೇವಣ್ಣ ಅವರು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೇಳಿದ್ದೇ ಈ ಎಲ್ಲಾ ಗೊಂದಲಗಳಿಗೂ ಇದೀಗ ಪ್ರಮುಖ ಕಾರಣವಾಗಿದೆ ಎಂಬುದು ಬಿಂಬಿತವಾಗಿದೆ ಎಂದೇ ಹೇಳಬಹುದು.

Exit mobile version