ದಿನಕ್ಕೊಂದು ಸೇಬು ವೈದ್ಯರಿಂದ ದೂರವಿಡುತ್ತದೆ!

ಸೇಬು ಆರೋಗ್ಯವನ್ನ ವೃದ್ಧಿಸುವಲ್ಲಿ ಬಹಳ ಮಹತ್ತರವಾದ ಪಾತ್ರ ವಹಿಸುತ್ತೆ ಅನ್ನೋದು ಎಲ್ಲರಿಗೂ ತಿಳಿದಿದೆ. ಆದರೇ, ಸೇಬಿನ ಬಗ್ಗೆ ನಿಮಗೆ ಗೊತ್ತಿರದ ವಿಶೇಷ ಮಾಹಿತಿಯನ್ನು ನಾವು ನಿಮಗೆ ನೀಡ್ತೀವಿ. ದಿನಕ್ಕೊಂದು ಸೇಬು, ಡಾಕ್ಟರ್ ನಿಂದ ದೂರವಿಡುತ್ತದೆ. ಇದು ಎಲ್ಲರಿಗೂ ಗೊತ್ತಿದೆ. ಅಂದರೆ ಪ್ರತಿದಿನ ಸೇಬನ್ನ ತಿನ್ನೋದ್ರಿಂದ ನೀವು ಎಲ್ಲಾ ರೋಗಗಳಿಂದ ದೂರವಿರುತ್ತೀರಿ. ಯಾಕಂದ್ರೇ, ಸೇಬು ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಸೇಬನ್ನು ಸರಿಯಾಗಿ, ಸರಿಯಾದ ರೀತಿಯಲ್ಲಿ ಸೇವಿಸಿದರೆ ಬಹಳಷ್ಟು ಲಾಭವಿದೆ. ಅದರಲ್ಲಿ ವಿಟಮಿನ್ಗಳು, ಪ್ರೋಟಿನ್ಗಳು ಬಹಳ ಇದೆ.

ಸೇಬು ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳನ್ನ ತಡೆಗಟ್ಟಬಹುದು. ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಶಕ್ತಿಯಿದೆ. ಹಾಗೆ ಅಸ್ತಮಾ ಇದ್ದವರಿಗೂ ಕೂಡ ಆಪಲ್ ಸಹಕಾರಿಯಾಗಿದೆ. ಅದೇ ರೀತಿ ಹಲ್ಲುಗಳು ಹಳದಿಯಾಗದಂತೆ ತಡೆದು ಗಟ್ಟಿಯಾಗಿರುವಂತೆ ಮಾಡುತ್ತದೆ. ದೇಹದಲ್ಲಿರುವ ಟಾಕ್ಸಿನ್‍ ಅನ್ನು
ಕಡಿಮೆ ಮಾಡಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಸೌಂದರ್ಯ ವರ್ಧಕವೂ ಹೌದು. ನಿಮಗೆ ಗೊತ್ತಿರದ ವಿಶೇಷ ಮಾಹಿತಿ ಅಂದ್ರೆ, ಪ್ರತಿದಿನಕ್ಕೊಂದರಂತೆ ತಿನ್ನುವುದಕ್ಕೆ ಪ್ರಾರಂಭಿಸಿದರೂ ಕೂಡ 20 ವರ್ಷಗಳೇ ಬೇಕಂತೆ ತಿಂದು ಮುಗಿಸೋಕೆ.

*ಕಿಡ್ನಿಯಲ್ಲಿ ಕಲ್ಲು ನಿವಾರಣೆ:
ಸೇಬಿನ ಸೇವನೆಯಿಂದ ಕಿಡ್ನಿಯಲ್ಲಿನ ಕಲ್ಲು ನಿವಾರಣೆಯಾಗುತ್ತದೆ. ಆದ್ದರಿಂದ ವೈದ್ಯರು ಕಿಡ್ನಿಯಲ್ಲಿ ಕಲ್ಲಿರುವ ರೋಗಿಗಳಿಗೆ ಆಪಲ್‍ ಅನ್ನು ಶಿಫಾರಸ್ಸು ಮಾಡುತ್ತಾರೆ.

*ಅಸ್ತಮಕ್ಕೆ ರಾಮಬಾಣ:
ಅಸ್ತಮಾ ರೋಗಿಗಳು ಆಪಲ್ ಅಥವಾ ಆಪಲ್ ಜ್ಯೂಸ್ನಿಂದ ಸಾಕಷ್ಟು ಲಾಭವನ್ನ ಪಡೆಯುತ್ತಾರೆ. ಅಸ್ತಮದ ದಾಳಿಯನ್ನ ತಡೆಗಟ್ಟುವಲ್ಲಿ ಆಪಲ್ ಪರಿಣಾಮಕಾರಿಯಾಗಿದೆ. ಅವುಗಳಲ್ಲಿ ಕಂಡುಬರುವ ಫ್ಲೇವೊನೈಡ್ಗಳು ಶ್ವಾಸಕೋಶಗಳನ್ನ ಬಲಪಡಿಸುತ್ತವೆ.

*ಎಲುಬುಗಳು ಬಲಗೊಳ್ಳುತ್ತವೆ:
ಸೇಬುಗಳಲ್ಲಿ ಕ್ಯಾಲ್ಸಿಂ ಅಪಾರವಾಗಿರುವುದರ ಕಾರಣ ಪ್ರತಿದಿನ ಸೇವಿಸುವುದರಿಂದ ಮೂಳೆಗಳು ಬಲವಾಗಿರುತ್ತವೆ. ಆಯಾಸಗೊಳ್ಳುವುದು ಕಡಿಮೆಯಾಗುತ್ತದೆ.

*ಸೌಂದರ್ಯ ಹೆಚ್ಚಿಸುತ್ತದೆ:
ಪ್ರತಿದಿನ ನೀವು ಸೇವಿಸುವ ಸೇಬುಗಳು ನಿಮ್ಮ ಮುಖದ ಮೇಲೆ ಹೊಳಪು ತರುತ್ತದೆ. ಅದೇ ರೀತಿ ಕ್ರಮೇಣವಾಗಿ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬನ್ನ ಕರಗಿಸಿ, ನಿಮ್ಮನ್ನ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಮೆದುಳಿಗೆ ಸಂಬಂಧಿಸಿದ ಅಪಾಯಕಾರಿ ಕಾಯಿಲೆಯಿಂದ ದೂರವಿರಲು ಸಹಾಯ ಮಾಡುತ್ತದೆ.

Exit mobile version