ಮನೆ ಮದ್ದು: ಮಲಬದ್ಧತೆಯಿಂದ ಹಿಡಿದು ನಾನರೋಗಗಳಿಗೆ ರಾಮಬಾಣ ವೀಳ್ಯದೆಲೆ

ನಮ್ಮ ಆರೋಗ್ಯ ಪಾಲನೆಗೆ ನಮ್ಮ ಸುತ್ತಮುತ್ತಲು ಸರಳವಾದ ಮದ್ದುಗಳು ಇರ್ತವೆ. ಆದ್ರೆ ಹಿತ್ತಲ ಗಿಡ ಮದ್ದಲ್ಲ ಅನ್ನೋ (health benefits of betel leaf) ಹಾಗೆ ನಮ್ಮ ಹಿತ್ತಲಲ್ಲೇ ಇರುವ ಅದೆಷ್ಟೋ

ಗಿಡಮೂಲಿಕೆಗಳು ನಮ್ಮ ಆರೋಗ್ಯ (Health) ರಕ್ಷಣೆಗೆ ಸಹಕಾರಿಯಾಗುತ್ತವೆ, ಅಂಥಾ ಒಂದು ಸರಳ ಮತ್ತು ಪ್ರಮುಖವಾದ ಗಿಡ ಅಂದ್ರೆ ವಿಳ್ಯದೆಲೆ. ಮನೆಯ ಕುಂಡಗಳಲ್ಲೇ ಬೆಳಯಬಲ್ಲ ಈ ವೀಳ್ಯದೆಲೆ

ಅದೆಷ್ಟೋ ರೋಗಗಗಳಿಗೆ ರಾಮಬಾಣವಾಗಿದೆ. ಪುರಾತನ ಕಾಲದಿಂದಲೂ ಭಾರತೀಯ ಆಹಾರ (Indian Food) ಹಾಗೂ ಔಷಧ ಪದ್ಧತಿಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ.

ಪುರಾತನ ಗ್ರಂಥಗಳಲ್ಲೂ ವೀಳ್ಯದೆಲೆಯ ಸೇವನೆ ಹಾಗೂ ಅದರ ಮಹತ್ವದ ಕುರಿತು ಉಲ್ಲೇಖ ಇದೆ. ಅಲ್ಲದೆ ವೀಳ್ಯದೆಲೆಗೆ ಆಧ್ಯಾತ್ಮಿಕ ನೆಲಗಟ್ಟು ಕೂಡ ಇದ್ದು, ನಮ್ಮಲ್ಲಿ ಸಾಮಾನ್ಯವಾಗಿ ಜನರು

ಇದನ್ನು ಪೂಜೆಗೆ ಯೋಗ್ಯವಾದಂತಹ ಎಲೆ ಎಂದು ವೀಳ್ಯದೆಲೆಯನ್ನು ಪೂಜಾ ಕಾರ್ಯ ಕ್ರಮಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಆದ್ರೆ ವೀಳ್ಯದೆಲೆ ಔಷಧೀಯ ಗುಣಗಳನ್ನು ಹೊಂದಿರುವ ಎಲೆಯಾಗಿದ್ದು,

ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳು ಇವೆ.

ಕೆಲವರು ವೀಳ್ಯದೆಲೆಯನ್ನು ನಿತ್ಯ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದ್ರೆ ಹೆಚ್ಚಿನವರು ಇದರ ಜೊತೆಗೆ ಹೊಗೆ ಸೊಪ್ಪು ಸೇರಿಸಿ ತಿಂತಾರೆ. ಈ ರೀತಿ ತಿನ್ನುವುದರಿಂದ ಎಲೆಯ ಔಷದೀಯ

ಗುಣ ಸಿಗುವ ಬದಲು ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹಾಗಾದ್ರೆ ಆರೋಗ್ಯ ಪೂರ್ಣವಾಗಿ ವೀಳ್ಯದೆಲೆಯನ್ನು ಹೇಗೆ ಸೇವಿಸಬಹುದು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ

ವೀಳ್ಯದೆಲೆಗಳನ್ನು ಅಗಿಯುವ ಮೂಲಕ ತಿನ್ನಬಹುದು.ಇದರ ಜೊತೆಗೆ ವೀಳ್ಯದೆಲೆಯನ್ನು ಕಷಾಯ, ತರಕಾರಿಗಳು ಹಾಗೂ ಸಲಾಡ್ ಗಳಲ್ಲಿ ಕೂಡ ಸೇರಿಸಿ ತಿನ್ನಬಹುದು.

ಮಲಬದ್ಧತೆ ನಿವಾರಣೆ:
ಮಲಬದ್ಧತೆಯು ಬಂದ ಸಂದರ್ಭದಲ್ಲಿ ವೀಳ್ಯದೆಲೆಯನ್ನು ಸೇವಿಸಬಹುದು. ವೀಳ್ಯದೆಲೆಗಳ ಕಾಂಡಕ್ಕೆ ಹರಳೆಣ್ಣೆಯನ್ನು ಹಚ್ಚಿ ಗುದನಾಳದೊಳಗೆ ಸೇರಿಸುವುದರ ಮೂಲಕ ಮಲಬದ್ಧತೆ (Constipation)

ಸಮಸ್ಯೆಯನ್ನು ಕಡಿಮೆಮಾಡಬಹುದು. ಇದಷ್ಟೇ ಅಲ್ಲದೆ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ನಾವು ತಿನ್ನುವ ಆಹಾರಗಳಲ್ಲಿ ವೀಳ್ಯದೆಲೆಯನ್ನು ಕೂಡ ಸೇರಿಸಿಕೊಳ್ಳಬಹುದು.

ಮಧುಮೇಹಕ್ಕೆ ಒಳ್ಳೆಯದು:
ಮಧುಮೇಹಿಗಳಿಗೆ ವೀಳ್ಯದೆಲೆಯ ಸೇವನೆಯು ತುಂಬಾ ಉಪಯೋಗಕಾರಿಯಾಗಿದ್ದು, ವೀಳ್ಯದೆಲೆಯಲ್ಲಿ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುವ ಗುಣವಿದೆ. ಆದ್ದರಿಂದ ಮಧುಮೇಹಿಗಳು

ಕೂಡ ವೀಳ್ಯದೆಲೆಯ ಸೇವನೆಯನ್ನು (health benefits of betel leaf) ಮಾಡಬಹುದು.

ಬಾಯಿಯ ದುರ್ವಾಸನೆಗೆ:
ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ವೀಳ್ಯದೆಲೆಯಲ್ಲಿ ಇರುವುದರಿಂದ ಬಾಯಿಯ ದುರ್ವಾಸನೆಗೆ ಮುಜುಗರ ಪಡುತ್ತಿರುವವರು ಈ ವೀಳ್ಯದೆಲೆಯನ್ನು ತಿನ್ನುವುದರಿಂದ ಈ ಸಮಸ್ಯೆಯನ್ನು

ಹೋಗಲಾಡಿಸಬಹುದಾಗಿದ್ದು, ಬಾಯಿಯ ದುರ್ವಾಸನೆಯನ್ನು ಹಾಗೂ ಬಾಯಿ ಕೊಳೆತವನ್ನು ತೆಗೆದುಹಾಕುವಲ್ಲಿ ವೀಳ್ಯದೆಲೆಗಳು ಬಹಳ ಸಹಾಯಕಾರಿಯಾಗಿದೆ.

ಗಾಯವನ್ನು ಗುಣಪಡಿಸಲು ಸಹಾಯಕ;
ಇನ್ನು ಗಾಯವನ್ನು ಗುಣಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದ್ದು, ಅಧ್ಯಯನಗಳ ವರದಿ ಪ್ರಕಾರ ಎಪಿತೀಲಿಯಲೈಸೇಶನ್‌ ಅಂಶದಿಂದ ಗಾಯಗಳನ್ನು ಗುಣಪಡಿಸಲು ವೀಳ್ಯದೆಲೆಯು

ಬಹಳ ಸಹಾಯಕಾರಿಯಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಗುಣಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.

ಹೊಟ್ಟೆಯ ಹುಣ್ಣುಗಳಿಗೆ ರಾಮಬಾಣ:
ಗ್ಯಾಸ್ಟ್ರೋಪ್ರೊಟೆಕ್ಟಿವ್ ಗುಣಲಕ್ಷಣಗಳಿಂದಾಗಿ ವೀಳ್ಯದೆಲೆಗಳನ್ನು ಗ್ಯಾಸ್ಟ್ರಿಕ್ ಅಲ್ಸರ್‌ನಲ್ಲಿ ಬಳಸಬಹುದಾಗಿದ್ದು, ಇವುಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ವೀಳ್ಯದೆಲೆಗಳು ಕಿಣ್ವಕ

ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಅಲ್ಲದೆ ಇದು ಗ್ಯಾಸ್ಟ್ರಿಕ್ ಅಲ್ಸರ್‌ಗೆ ಸಹಕಾರಿಯಾಗಿರುತ್ತದೆ. ವೀಳ್ಯದೆಲೆಗಳು ಹೊಟ್ಟೆಯ ಒಳಪದರದ ಮೇಲೆ ಲೋಳೆಯ ಅಂಶವನ್ನು ಹೆಚ್ಚಿಸುವುದಲ್ಲದೆ ಗ್ಯಾಸ್ಟ್ರಿಕ್

ಆಮ್ಲದ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ.

ಅಲರ್ಜಿ:
ಅಲರ್ಜಿಯ ಸಂದರ್ಭದಲ್ಲಿ ವೀಳ್ಯದೆಲೆಗಳನ್ನು ಸಹ ಉಪಯೋಗಿಸಬಹುದಾಗಿದೆ. ಅಲ್ಲದೆ ಇದು ಬಯೋಆಕ್ಟಿವ್ ಸಂಯುಕ್ತ ಹೈರಾಕ್ಸಿಚಾವಿಕೋಲ್ ಅನ್ನು ಒಳಗೊಂಡಿದ್ದು, ಶಿಲೀಂಧ್ರಗ ಸೋಂಕಿಗೂ ಕೂಡ

ಇದನ್ನು ಬಳಸಬಹುದಾಗಿದೆ. ಅಲ್ಲದೆ ಶಿಲೀಂಧ್ರದ ಬೆಳವಣಿಗೆಯನ್ನು ಸಹ ತಡೆಯುವಂತ ಶಕ್ತಿ ಇದಕ್ಕಿದ್ದು, ವೀಳ್ಯದೆಲೆಯು ಅಲರ್ಜಿ ಸೋಂಕುಗಳಿಗೆ ಆಂಟಿಫಂಗಲ್ ಏಜೆಂಟ್ ಆಗಿ ಕಾರ್ಯವನ್ನು ನಿರ್ವಹಿಸುತ್ತದೆ.

ಇದನ್ನು ಓದಿ: ಗೃಹಲಕ್ಷ್ಮಿ ಸ್ಥಗಿತ: ಗೃಹಲಕ್ಷ್ಮೀ ಯೋಜನೆಯ ನೋಂದಣಿ ತಾತ್ಕಾಲಿಕ ಸ್ಥಗಿತ, ಮಹಿಳೆಯರಿಗೆ ಬಿಗ್‌ ಶಾಕ್‌ !

Exit mobile version