ಮೊಸರು ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳು ದೊರೆಯಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

Health tips : ನಾವೆಲ್ಲಾ ತಿಳಿದಿರುವ ಹಾಗೆ ಮೊಸರು (curd) ಹೆಚ್ಚಾಗಿ ಬಳಕೆಯಾಗುವುದು ಮೊಸರನ್ನ ಅಥವಾ ಮಧ್ಯಾಹ್ನದ ಊಟಕ್ಕೆ ಎಂಬುದು. ಕೆಲವರು ಮೊಸರನ್ನು ಸಕ್ಕರೆಯೊಂದಿಗೆ ಬೆರಸಿ, ಕುಡಿಯುತ್ತಾರೆ, ಈ ಪ್ರವೃತ್ತಿಯು ಇಂದಿಗೂ ನಮ್ಮಲ್ಲಿ ಇದೆ. ಮೊಸರು ಸೇವನೆ (Health Benefits Of Curd) ದೇಹದ ತೂಕವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಮೊಸರನ್ನು ಸೇವಿಸಬಾರದು ಎಂದು ಹಲವರು ಹೇಳುತ್ತಾರೆ. ಯಾಕೆ? ಮೊಸರು ನಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನಗಳನ್ನು ನೀಡುತ್ತದೆ ಎಂಬ ಮಾಹಿತಿಯನ್ನು ತಿಳಿಯೋಣ ಬನ್ನಿ.

ಮೊಸರು ಬಲವಾದ ರೋಗನಿರೋಧಕ ಶಕ್ತಿಯನ್ನು (Immunity power) ಒದಗಿಸುತ್ತದೆ.

ರೋಗ ಉಂಟುಮಾಡುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ : ಪ್ರೋಬಯಾಟಿಕ್ (Probiotic) ಹಾಲಿನ ಉತ್ಪನ್ನವಾಗಿರುವುದರಿಂದ,

ಮೊಸರು ಕರುಳಿನ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಅಸಿಡಿಟಿ ಸಮಸ್ಯೆಯನ್ನು ಶಮನಗೊಳಿಸುತ್ತದೆ.

ಇದನ್ನೂ ಓದಿ : https://vijayatimes.com/health-tips-for-women-2/

ತೂಕ ಇಳಿಸಲು ಸಹಾಯ ಮಾಡುತ್ತದೆ : ಸಾಮಾನ್ಯವಾಗಿ ಮೊಸರಿನ ಸೇವನೆ ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂದು ಹೇಳುವ (Health Benefits Of Curd) ಅನೇಕರ ಪೈಕಿ ಮೊಸರು ದೇಹದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

ಮೊಸರು ಸೇವನೆಯು ತೂಕ ನಷ್ಟಕ್ಕೆ ಒಳ್ಳೆಯದು. ಇದು ಸ್ಟೆರಾಯ್ಡ್ ಹಾರ್ಮೋನುಗಳು ಅಥವಾ ಕಾರ್ಟಿಸೋಲ್‌ನ ಬೆಳವಣಿಗೆಯನ್ನು ತಡೆಯುತ್ತದೆ, ಇದರಿಂದಾಗಿ ಬೊಜ್ಜು ಅಪಾಯವನ್ನು ನಿಯಂತ್ರಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ : ಮೊಸರಿನಲ್ಲಿ ಮೆಗ್ನೀಸಿಯಮ್ (Magnesium) ಅಂಶವು ಅಧಿಕ ರಕ್ತದೊತ್ತಡವನ್ನು (blood pressure) ಕಡಿಮೆ ಮಾಡಲು ಸೂಕ್ತವಾಗಿದೆ.

ಮೊಸರನ್ನು ಅನ್ನದ ಜೊತೆಗೆ ಮಿಶ್ರಣ ಮಾಡಿ ತಿನ್ನುವುದರಿಂದ ಕೂಡ ಉತ್ತಮ ಪ್ರಯೋಜನಗಳು ನಮ್ಮ ದೇಹಕ್ಕೆ ಲಭಿಸುತ್ತದೆ.

ಆಯಾಸವನ್ನು ನಿವಾರಿಸುತ್ತದೆ : ಮೊಸರಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು (Antioxidant), ಉತ್ತಮ ಕೊಬ್ಬುಗಳು ಮತ್ತು ಪ್ರೋಬಯಾಟಿಕ್‌ (Probiotic) ಅಂಶಗಳು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

ಒಣ ತ್ವಚೆಯನ್ನು ಗುಣಪಡಿಸುತ್ತದೆ : ಮೊಸರು ಸೇವನೆಯು ತ್ವಚೆಯನ್ನು ತೇವಾಂಶದಿಂದ ಇಡಲು ಸಹಾಯ ಮಾಡುತ್ತದೆ. ಮೊಸರು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಮಹಿಳೆಯರು ಮೊಸರನ್ನು ಫೇಸ್‌ ಪ್ಯಾಕ್‌ ತಯಾರಿಕೆಯಲ್ಲಿ ಬಳಸಿಕೊಳ್ಳುತ್ತಾರೆ.

ಇದನ್ನೂ ಓದಿ : https://vijayatimes.com/oscar-award-list/

ಚರ್ಮದ ಪೋಷಣೆಯನ್ನು ಖಚಿತಪಡಿಸುತ್ತದೆ : ಮೊಸರಿನಲ್ಲಿ ಸತು, ವಿಟಮಿನ್ ಸಿ (Vitamin C) ಮತ್ತು ಕ್ಯಾಲ್ಸಿಯಂನಂತಹ (Calcium) ಅಗತ್ಯ ಪೋಷಕಾಂಶಗಳು ಚರ್ಮಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ, ಚರ್ಮವನ್ನು ಇದು ಪೋಷಿಸುತ್ತದೆ.

ವಿಶೇಷ ಸೂಚನೆ : ಈ ಮಾಹಿತಿ ಅನ್ನು ಮೂಲಗಳಿಂದ ಕಲೆಹಾಕಿ ನಿಮಗೆ ತಿಳಿಸಿದ್ದೇವೆ. ಇನ್ನು ಹೆಚ್ಚಿನ ಮಾಹಿತಿಗೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

Exit mobile version