ಹಲವು ರೋಗಗಳಿಗೆ ರಾಮ ಬಾಣ ಖರ್ಜುರ ; ಖರ್ಜುರದ ಮಹತ್ವ ಏನು ಗೊತ್ತಾ? ಇಲ್ಲಿದೆ ಮಾಹಿತಿ

Dates

ಖರ್ಜುರ(Dates) ಹಣ್ಣಿನಲ್ಲಿ ಎ ವಿಟಮಿನ್(Vitamin A) ಹೇರಳವಾಗಿ ಲಭ್ಯವಿರುತ್ತದೆ. ಇದರ ಸೇವನೆಯಿಂದ ಮೂತ್ರ ಕಟ್ಟದೆ ಸರಾಗವಾಗಿ ಹೋಗುವುದು. ಖರ್ಜುರ (Health Benefits of dates)ಸೇವನೆಯೂ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ.

ಪ್ರದಿದಿನ ಊಟ ಆದ ನಂತರ ಒಂದೊಂದು ಖರ್ಜುರ(Benefits of dates)ಸೇವನೆ ಮಾಡುವುದರಿಂದ ನೀವು ಸೇವಿಸುವ ಆಹಾರ ಸುಲಭವಾಗಿ ಜೀರ್ಣಾವಾಗುವುದು.

ಮಕ್ಕಳಿಗೆ ಹಾಲುಣಿಸುವ ತಾಯಂದಿರು ಈ ಖರ್ಜುರ ಹಣ್ಣನ್ನು ತಿನ್ನುವುದರಿಂದ ಸ್ತನಗಳಲ್ಲಿ ಹೆಚ್ಚಾಗಿ ಹಾಲು ಉತ್ಪಾದನೆಯಾಗುತ್ತದೆ.

ರಕ್ತ ಶುದ್ದಿ ಆಗುವುದಲ್ಲದೆ, ಚರ್ಮರೋಗಕ್ಕೆ ಸಂಬಂಧಪಟ್ಟ ಕೆಲ ಖಾಯಿಲೆಯನ್ನು ನಿವಾರಿಸುತ್ತದೆ. ಖರ್ಜುರ ಹಣ್ಣಿನ ಬೀಜಗಳನ್ನು ನುಣ್ಣಗೆ ಅರೆದು ಜೇನುತುಪ್ಪದೊಂದಿಗೆ ಸೇರಿಸಿ ಪ್ರತಿನಿತ್ಯ ಸೇವಿಸುವುದರಿಂದ ಪುರಷರಲ್ಲಿ ವೀರ್ಯಾಣು ಹೆಚ್ಚುತ್ತದೆ. https://vijayatimes.com/this-video-grabbed-netizens-heart/

ಉಪ್ಪು ಹಾಗು ಕಾಳುಮೆಣಸಿನ ಪುಡಿಯೊಂದಿಗೆ ಬಳಸುವುದು ಆರೋಗ್ಯಕ್ಕೆ ಉತ್ತಮ ಲಾಭ. ಖರ್ಜುರವನ್ನು ಅಡುಗೆಗಳಲ್ಲಿ ಬಳಸಿ ನಾನಾ ತರಹದ ರೆಸಿಪಿಗಳನ್ನು ಮಾಡುತ್ತೇವೆ ಹಾಗೂ ಕೆಲವೊಂದು ಸಾರಿ ಬರಿ ಖರ್ಜುರವನ್ನು(Health Benefits of dates) ಸೇವಿಸುತ್ತಿರುತ್ತೇವೆ ಆದರೆ ಅದರಲ್ಲಿರುವ ಲಾಭದಾಯಕ ಅಂಶಗಳನ್ನು ತಿಳಿದಿರುವುದಿಲ್ಲ. ಹಾಗಾಗಿ ಈ ಮೂಲಕ ತಿಳಿದು ಇದರ ಲಾಭಗಳನ್ನು ಪಡೆದುಕೊಳ್ಳಿ.

ಪ್ರತಿದಿನ ಖರ್ಜುರವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ, ಇದರಲ್ಲಿ ಪೊಟ್ಯಾಶಿಯಮ್, ಕಬ್ಬಿಣದಂಶ ಇರುವುದರಿಂದ ದೇಹದಲ್ಲಿನ ಹಲವು ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ. 
https://vijayatimes.com/atthiveri-bird-sanctuary-karwar/

ಇದನ್ನು ಪ್ರತಿದಿನ ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಪಡೆಯಬಹುದಾಗಿದೆ. ರಕ್ತ ಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ರಕ್ತದ ಚಲನೆಗೆ ಹೆಚ್ಚು ಸಹಾಯಕಾರಿ.

ಮೆದುಳಿನ ಹಾಗೂ ಹೃದಯದ ಆರೋಗ್ಯಕ್ಕೆ ಖರ್ಜುರ ಹೆಚ್ಚು ಲಾಭದಾಯಕ. ದೇಹದಲ್ಲಿನ ನಿಶಕ್ತಿ ಹಾಗು ಮಲಬದ್ಧತೆ ನಿವಾರಣೆಗೂ ಖರ್ಜುರ ಉತ್ತಮವಾಗಿದೆ.
Exit mobile version