ಬದನೆಕಾಯಿ ತಿಂದ್ರೆ ಬೊಜ್ಜು ಕರಗುತ್ತೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಗೊತ್ತಾ?

ಬದನೆಕಾಯಿ ಅಂದ್ರೆ ಹೆಚ್ಚಿನವರ ಮುಖ ಸುಟ್ಟ ಬದನೆಕಾಯಿ ಥರಾ ಆಗುತ್ತೆ. ಅದ್ರಲ್ಲೂ ಈಗಿನ ಜನರೇಷನ್ ಮಕ್ಕಳಿಗೆ ಬದನೆಕಾಯಿಯನ್ನು ದುಷ್ಮನ್‌ ಥರಾ ನೋಡ್ತಾರೆ. ಆದ್ರೆ ಈ ಬದನೆಕಾಯಿ(Egg plant) ದೇಹಕ್ಕೆ ಎಷ್ಟೊಂದು ಪ್ರಯೋಜನಕಾರಿ ಅಂತ (Health benefits of eggplant) ಹೆಚ್ಚಿನವರಿಗೆ ಗೊತ್ತೇ ಇಲ್ಲ.

ಬದನೆ ದೇಹಕ್ಕೆ ಒಳ್ಳೆಯದು ಅಂತ ತಿಳಿದೇ ನಮ್ಮ ಪೂರ್ವಿಜರು ಇದನ್ನು ತಮ್ಮ ಆಹಾರದಲ್ಲಿ ವಿಪುಲವಾಗಿ ಬಳಸುತ್ತಿದ್ದರು. ಅಷ್ಟೇ ಅಲ್ಲ ಬದನೆಕಾಯಿಯ ಹತ್ತಾರು ತಳಿಗಳನ್ನ ಬೆಳೆಸಿದ್ರು.

ಪ್ರಪಂಚದಲ್ಲಿ ಒಟ್ಟು 18 ಬಗೆಯ ಬದನೆಕಾಯಿಗಳಿವೆ ಗೊತ್ತಾ? ಬದನೆ ಕಾಯಿ ಸೇವನೆಯಿಂದ ನಾನಾ ಪ್ರಯೋಜನಗಳಿವೆ. ಅವುಗಳು ಯಾವುವು ಅಂತ ಒಂದೊಂದಾಗಿಯೇ ತಿಳ್ಕೊಳ್ಳೋಣ ಬನ್ನಿ

ಬದನೆಕಾಯಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು(Immunity power) ಹೆಚ್ಚಿಸುತ್ತೆ. ಬದನೆಕಾಯಿಯಲ್ಲಿ ವಿಪುಲವಾದ ವಿಟಮಿನ್‌(Vitamin) ಹಾಗೂ ಮಿನರಲ್‌ಗಳಿವೆ(Mineral).

ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್(Anti oxident) ಅಂಶಗಳು ಹೆಚ್ಚಾಗಿ ಇರೋದ್ರಿಂದ ಇದು ನಮ್ಮನ್ನು ನಾನಾ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸುತ್ತೆ.

ಬದನೆಕಾಯಿಯನ್ನು ತರಕಾರಿಗಳ ರಾಜ ಅಂತ ಕರೀತಾರೆ. ಇದಕ್ಕೆ ಕಾರಣ ಇಲ್ಲದೇ ಇಲ್ಲ. ಬದನೆಯಲ್ಲಿದೆ ಭರಪೂರ ಪೌಷ್ಟಿಕಾಂಶಗಳು. ಏನೆಲ್ಲಾ ಪೌಷ್ಟಿಕಾಂಶಗಳು ಎಷ್ಟು ಪ್ರಮಾಣದಲ್ಲಿವೆ ಅನ್ನೋದನ್ನು ಒಮ್ಮೆ ನೋಡಿ. ಒಂದು ಕಪ್ ಬದನೆಕಾಯಿಯಲ್ಲಿ…..

ಕ್ಯಾಲೋರಿ: 20 ಗ್ರಾಂ

ಕಾರ್ಬೋಹೈಡ್ರೇಡ್‌: 5 ಗ್ರಾಂ

ನಾರಿನಂಶ: 3 ಗ್ರಾಂ

ಪ್ರೋಟೀನ್‌; 1 ಗ್ರಾಂ

ಮ್ಯಾಂಗನೀಸ್‌: 10 %

ಫೋಲೇಟ್‌: 5%

ಪೊಟ್ಯಾಶಿಯಂ: 5%

ವಿಟಮಿನ್‌ ಕೆ: 4%

ವಿಟಮಿನ್‌ ಸಿ: 3%

ಇಷ್ಟು ಮಾತವಲ್ಲದೆ ಮೆಗ್ನೇಶಿಯಂ, ನಿಯಾಸಿನ್‌ ಮುಂತಾದ ಅನೇಕ ಪೌಷ್ಟಿಕಾಂಶಗಳು ಸಣ್ಣ ಪ್ರಮಾಣದಲ್ಲಿವೆ.

ಬದನೆಕಾಯಿ ಹೃದ್ರೋಗವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದು ಕೊಲೆಸ್ಟ್ರಾಲ್‌(Cholestrol) ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡ(Blood pressure) ನಿರ್ವಹಿಸಲು ಸಹ ಸಹಾಯ ಮಾಡುತ್ತದೆ.

ಅಧ್ಯಯನದ ಪ್ರಕಾರ ಬದನೆಕಾಯಿ ತಿನ್ನುವವರ ಹೃದಯ ಚೆನ್ನಾಗಿ ಕಾರ್ಯನಿರ್ವಹಿಸುತ್ತೆ.

ಇನ್ನು ಪ್ರಾಯೋಗಿಕವಾಗಿ ಹೃದ್ರೋಗಿಗೆ ಎರಡು ವಾರಗಳ ಕಾಲ 10 ಮಿಲಿ ಲೀಟರ್‌ ಬದನೆ ಕಾಯಿ ಜ್ಯೂಸನ್ನು ಕುಡಿಸಿದಾಗ ಆತನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲಾಯಿತು.

ಬದನೆಕಾಯಿಯನ್ನು ನಿಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಸೇವನೆ ಮಾಡಿದಾಗ ದೇಹದಲ್ಲಿನ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರುತ್ತೆ.

ಯಾಕಂದ್ರೆ ಬದನೆಯಲ್ಲಿ ನಾರಿನಂಶ ಹೆಚ್ಚು ಇರೋದ್ರಿಂದ ಇದು ನಮ್ಮ ನಮ್ಮ ಜೀರ್ಣಾಂಗವನ್ನು(Health benefits of eggplant) ಆರೋಗ್ಯಕರವಾಗಿ ಇಡುತ್ತೆ. ಹಾಗಾಗಿ ಡಯಾಬಿಟೀಸ್(Diabetes) ಇರುವವರು ಹೆಚ್ಚೆಚ್ಚು ಬದನೆಕಾಯಿ ತಿಂದರೆ ಒಳ್ಳೆಯದು.

ಇದನ್ನೂ ಓದಿ: ಮಂಡ್ಯ ಬೈಪಾಸ್ ಸಾರ್ವಜನಿಕರ ಓಡಾಟಕ್ಕೆ ಸಿದ್ಧವಾಗಿದೆ : ಸಂಸದ ಪ್ರತಾಪ್ ಸಿಂಹ

ಬದನೆಕಾಯಿಯಲ್ಲಿ ನಾರಿನಂಶ ಹೆಚ್ಚಿದ್ದು, ಕ್ಯಾಲೋರಿ(Calory) ಕಡಿಮೆ ಇದೆ. ಇದು ದೇಹದ ಬೊಜ್ಜನ್ನು ಕರಗಿಸಲು ಬಹಳ ಸಹಕಾರಿಯಾಗಿದೆ. ಬದನೆಕಾಯಿಯಲ್ಲಿರುವ ನಾರಿನಾಂಶ ನಮಗೆ ಹೊಟ್ಟೆ ತುಂಬಿದ ಅನುಭವ ಕೊಡುತ್ತೆ.

ಆಗ ಆಹಾರದ ಸೇವನೆ ಕಡಿಮೆಯಾಗಿ ದೇಹದ ತೂಕ ನಿಯಂತ್ರಣದಲ್ಲಿರುತ್ತೆ. ತೂಕ ಇಳಿಸಿಕೊಳ್ಳಲು ಬಯಸುವವರು ವಾರಕ್ಕೆ ಎರಡು ಬಾರಿ ಬದನೆ ತಿನ್ನಲು ಅಭ್ಯಾಸ ಮಾಡಿಕೊಳ್ಳಬೇಕು.

ಬದನೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದು ಕ್ಯಾನ್ಸರ್(Cancer) ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಅನೇಕ ಅಂಶಗಳು ಕ್ಯಾನ್ಸರ್‌ ಕಣಗಳ ವಿರುದ್ಧ ಹೋರಾಡಲು ಸಹಕಾರಿಯಾಗಿವೆ.

ಬದನೆಯಲ್ಲಿರುವ SRG ಅನ್ನೋ ಅಂಶ ಕ್ಯಾನ್ಸರ್‌ ಕಣದ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಅದ್ರಲ್ಲೂ ಇದರಲ್ಲಿರುವ SRG ಅಂಶ ಚರ್ಮದ ಕ್ಯಾನ್ಸರ್‌(Skin cancer) ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಬದನೆಯಲ್ಲಿ ನಾರಿನ ಅಂಶ ಅಧಿಕವಾಗಿರುವುದರಿಂದ  ಅದು ಮನುಷ್ಯನ ದೇಹದಲ್ಲಿ ಜೀರ್ಣ ಪ್ರಕ್ರಿಯೆಯನ್ನು ಸುಸ್ಥಿತಿಯಲ್ಲಿ ಇರಿಸುತ್ತೆ. 

ನೋಡಿದ್ರಾ ಬದನೆ ಮ್ಯಾಜಿಕ್‌. ಹಾಗಾಗಿ ಇನ್ನು ಮುಂದೆ ನೀವು ಬದನೆ ಕಂಡ್ರೆ ಮೂಖ ಸಿಂಡರಿಸಬೇಡಿ. ಅದನ್ನು ಖುಷಿ ಖುಷಿಯಾಗಿಯೇ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

Exit mobile version