`ನಿಂಬೆ’ಯಲ್ಲಿದೆ ಎಷ್ಟೊಂದು ಚಮತ್ಕಾರ!

lime

ನಿಂಬೆ ಎಂಬುವುದು ಕೇವಲ ಹಣ್ಣಲ್ಲ, ಇದರಲ್ಲಿ ಚರ್ಮಕ್ಕೆ ಸಂಬಂಧಿಸಿದ ಹಾಗೂ ದೇಹಕ್ಕೆ ಸಂಬಂಧಿಸಿದ ಹಲವು ಕಾಯಿಲೆಗಳನ್ನು ನಿವಾರಿಸುವಂತಹ ಹಲವು ಶಕ್ತಿ ನಿಂಬೆಯಲ್ಲಿ ಅಡಗಿದ್ದು, ಮನೆಯಲ್ಲೇ ಸಿಗುವ ನಿಂಬೆಯಿಂದ ನಿಮ್ಮ ಸೌಂದರ್ಯ ವರ್ಧನೆಗೆ ಇಲ್ಲಿದೆ ಹಲವು ಟಿಪ್ಸ್ಗಳು. ವಯಸ್ಸು ಹೆಚ್ಚಾದಂತೆ ಬರುವ ಸುಕ್ಕು ಮತ್ತು ಕಲೆಗಳನ್ನ ತಡೆಯುವ ಶಕ್ತಿ ನಿಂಬೆಗಿದೆ. ಆಂಟಿ ಆಕ್ಸಿಡೆಂಟ್ಗಳು ನಿಂಬೆಯಲ್ಲಿ ಹೆಚ್ಚಾಗಿದ್ದು, ತ್ವಚೆಯಲ್ಲಿ ಸುಕ್ಕು ಆಗದಂತೆ ನೋಡಿಕೊಳ್ಳುತ್ತೆ. ಅಲ್ಲದೆ ನಿಮ್ಮ ಎಣ್ಣೆ ಮುಖವನ್ನೂ ದೂರ ಮಾಡುತ್ತದೆ. ಮನೆಯಲ್ಲಿ ನೀವೇ ಕಲೆ ಮತ್ತು ಸುಕ್ಕು ನಿರೋಧಕ ಫೇಸ್ ಫ್ಯಾಕ್ ತಯಾರಿಸಿಕೊಳ್ಳಬುದು.


ಫೇಸ್ ಪ್ಯಾಕ್ ತಯಾರಿಸುವ ವಿಧಾನ : ನಿಂಬೆ ಹಣ್ಣಿನ ರಸವನ್ನ, ಸಿಹಿಯಾದ ಬಾದಾಮಿ ಎಣ್ಣೆಯಲ್ಲಿ ಬೆರೆಸಬೇಕು. ಅದನ್ನ ಮುಖಕ್ಕೆ ಹಚ್ಚಿ 15 ರಿಂದ 20 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಬೇಕು. ಜೊತೆಗೆ ನಿಂಬೆಹಣ್ಣಿನ ರಸ ತೆಗೆದುಕೊಂಡು, ಸೇಬಿನ ವಿನೆಗರ್ಗೆ ಬೆರೆಸಿ ಮುಖದ ಕಲೆಗಳಿಗೆ ಹಚ್ಚಿದ್ರೆ, ಕಲೆಗಳು ಮಾಯವಾಗುತ್ತವೆ.

ತುಟಿಗಳ ಹೊಳಪಿಗೆ : ಒಣಗಿದ, ನಿಸ್ತೇಜನಗೊಂಡ ಮತ್ತು ಒಡೆದ ತುಟಿಗಳಿಗೆ ನಿಂಬೆ ರಸ ಹಚ್ಚಿ. ನಿಂಬೆ ಹಣ್ಣಿನ ರಸಕ್ಕೆ ಹಾಲಿನ ಕೆನೆ, ಜೇನು ತುಪ್ಪ ಸೇರಿಸಿ ಮನೆಯಲ್ಲಿ ಲಿಪ್ ಬಾಮ್ ಮಾಡಿಕೊಳ್ಳಬಹುದು.

ಮೃದು ತ್ವಜೆಗಾಗಿ : ನಿಂಬೆ ಹಣ್ಣು ನಿಮ್ಮ ತ್ವಚೆಯನ್ನು ಮೃದುತ್ವ ಮತ್ತು ತಾಜಾತನದಿಂದ ಇರುವಂತೆ ಮಾಡುತ್ತೆ. ನಿಂಬೆಹಣ್ಣಿನ ರಸ ಅಥವಾ ಸಿಪ್ಪೆಯಿಂದ ನಿಮ್ಮ ಮುಖ, ಮೊಣಕಾಲುಗಳು, ಮೊಣಕೈಗಳಿಗೆ ಹಚ್ಚುವುದರಿಂದ ತ್ವಚೆ ಮೃದುವಾಗಿ, ಹೊಳಪಿನಿಂದ ಕಂಗೊಳಿಸುತ್ತದೆ. ನಿಂಬೆ ಹಣ್ಣು, ನಿರ್ಜೀವ ತ್ವಚೆ ಮತ್ತು ಒಣ ತ್ವಚೆಗೆ ಜೀವ ಬರುವಂತೆ ಮಾಡುತ್ತದೆ.

ನಿಂಬೆಯ ಇನ್ನಿತರ ಉಪುಯೋಗಗಳು :


• ಪುದೀನಾ ರಸದೊಂದಿಗೆ ನಿಂಬೆರಸ ಬೆರಸಿ ತಿಕ್ಕಿದರೆ ಮೊಡವೆ ನಿವಾರಕ.
• ನಿಂಬೆರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ತಿಕ್ಕುವುದರಿಂದ ತಲೆ ಹೊಟ್ಟು ನಿವಾರಣೆಯಾಗುವುದು.
• ನಿಂಬೆ ರಸ ಜೇನು ಬೆರಸಿ ಚಾನಕದಂತೆ ಕುಡಿದರೆ ಚರ್ಮ ಕೂದಲುಗಳಿಗೆ ಉತ್ತಮ.
• ನಿಂಬೆಯ ಸಿಪ್ಪೆಯನ್ನು ಸಣ್ಣಗೆ ಹಚ್ಚಿ ಒಣಗಿಸಿ ಪುಡಿ ಮಾಡಿ ಕಡಲೆ ಹಿಟ್ಟಿನೊಂದಿಗೆ ಬೆರಸಿಡಬೇಕು ಇದನ್ನು ನಿತ್ಯವು ಹಾಲಿನ ಕೆನೆಯೊಂದಿಗೆ ಮುಖಕ್ಕೆ ಲೇಪಿಸಿ ಸ್ನಾನ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.
• ಊಟದ ಬಳಿಕ ನಿಂಬೆರಸಯುಕ್ತ ಬಿಸಿ ನೀರಲ್ಲಿ ಕೈ ತೊಳೆದರೆ ಕೈಯ ಜಿಡ್ಡು ನಿವಾರಣೆಯಾಗುತ್ತದೆ.


• ಬಾಯಿ ಹುಣ್ಣಿಗೆ ನೀರಿನಲ್ಲಿ ನಿಂಬೆ ರಸ, ಉಪ್ಪು ಬೆರಸಿ ಬಾಯಿ ಮುಕ್ಕಳಿಸಿದರೆ ಹುಣ್ಣುಗಳು ನಿವಾರಣೆಯಾಗುವುದು.
• ಕೈಕಾಲಿನ ಚರ್ಮ ಒಡೆದು ಬಿರುಕು ಬಿಟ್ಟಿದರೆ ನಿಂಬೆಯ ಹೋಳಿನಿಂದ ತಿಕ್ಕಿ ಸುಮಾರು 25 ರಿಂದ 30 ನಿಮಿಷದ ಬಳಿಕ ತೊಳೆದು ಹಾಲಿನ ಕೆನೆ ಲೇಪಿಸಿ ತಿಕ್ಕಬೇಕು.
• ನಿಂಬೆ ರಸ ಈರುಳ್ಳಿ ರಸ ಮತ್ತು ಜೇನು ಬೆರಸಿ ಕುಡಿದರೆ ವಾಂತಿ ಹತೋಟಿಗೆ ಬರುತ್ತದೆ.
• ನೆಗಡಿ, ಕೆಮ್ಮು, ಕಫ ಇರುವಾಗ ಬಿಸಿ ನೀರಿಗೆ ನಿಂಬೆ ಹಿಂಡಿ, ಕರಿ ಮೆಣಸು ಬೆರಸಿ ಕುಡಿಯುವುದರಿಂದ ನೆಗಡಿ, ಕೆಮ್ಮು, ಕಫ ನಿವಾರಣೆಯಾಗುವುದು.
• ನಿಂಬೆ ರಸ,ಉಪ್ಪು ಬೆರಸಿ ಹಲ್ಲು ವಸಡುಗಳನ್ನು ತಿಕ್ಕುವುದರಿಂದ ಹಲ್ಲು ಶುಭ್ರವಾಗುವುದು.
• ತುರಿಕೆ ,ಕಜ್ಜಿ ಇರುವ ಭಾಗದಲ್ಲಿ ನಿಂಬೆರಸ, ಅರಸಿನ ಪುಡಿ,ಉಪ್ಪು ಬೆರಸಿ ತಿಕ್ಕಿದರೆ ಪರಿಹಾರ.

Exit mobile version