ಹಿರೇಕಾಯಿಯಲ್ಲಿನ ಆರೋಗ್ಯಕರ ಗುಣಗಳನ್ನು ತಿಳಿದರೆ ಅಚ್ಚರಿಗೊಳ್ತೀರಾ! ; ಓದಿ ಈ ಉಪಯುಕ್ತ ಮಾಹಿತಿ

Ridge Gourd: ರುಚಿ ರುಚಿಯಾದ ಅಡುಗೆಗೆ ಬೇಕಾದ ತರಕಾರಿಗಳಲ್ಲಿ, ನಾರುಗಳು, (Health Benefits Of Ridge Gourd) ನೀರಿನಾಂಶ, ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ6 ನಂತಹ ಅಗತ್ಯ ಅಂಶಗಳಿಂದ ಸಮೃದ್ಧವಾಗಿರುತ್ತವೆ.

ಇಂತಹ ತರಕಾರಿಗಳಲ್ಲಿ ಒಂದು ಹಿರೇಕಾಯಿ (Health Benefits Of Ridge Gourd).

ಇದು ನೈಸರ್ಗಿಕವಾಗಿ ಕ್ಯಾಲೋರಿ ಅಂಶ, ಅನಾರೋಗ್ಯಕರ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್ ಅಂಶಗಳನ್ನು ಕಡಿಮೆ ಮಾಡುತ್ತದೆ.

ಇದಲ್ಲದೆ, ಇದು ಉತ್ಕರ್ಷಣ ನಿರೋಧಕಗಳು ಮತ್ತು ಆಲ್ಕಲಾಯ್ಡ್ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಹೀಗಾಗಿ ದೇಹದಲ್ಲಿನ ಅನೇಕ ಸಮಸ್ಯೆಗಳ ನಿಯಂತ್ರಣಕ್ಕೆ ಹಿರೇಕಾಯಿ ಉತ್ತಮ ಮನೆ ಮದ್ದಾಗಿದೆ(Home Remedies).


ಮಧುಮೇಹ ನಿಯಂತ್ರಣ : ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆಯಿಂದ ನರಳದ ಜನರೇ ಇಲ್ಲ. ಎಷ್ಟೇ ಜಾಗೃತರಾಗಿದ್ದರೂ ನಾವು ಸೇವನೆ ಮಾಡುವ ಆಹಾರ ಹಾಗೂ ನಮ್ಮ ಜೀವನ ಕ್ರಮದಿಂದ ಸಕ್ಕರೆ ಕಾಯಿಲೆ(Diabities) ಎನ್ನುವುದು ನಮ್ಮನ್ನ ಕಾಡತೊಡಗಿದೆ.

ಅತ್ಯಂತ ಕಡಿಮೆ ಕ್ಯಾಲೋರಿಗಳನ್ನ ಹೊಂದಿರುವ ಹೀರೆಕಾಯಿ, ಹಲವು ಉತ್ಕರ್ಷಣ ನಿರೋಧಕ ಗುಣಗಳನ್ನ ಹೊಂದಿದೆ, ಹೀಗಾಗಿ ಹೀರೆಕಾಯಿ ಸೇವನೆ ಮಾಡುವುದರಿಂದ ಮಧುಮೇಹಿಗಳು ಮಧುಮೇಹವನ್ನ ನಿಯಂತ್ರಣ ಮಾಡಬಹುದು.

https://youtu.be/sfkpJuX5qVs ಸಿಹಿ-ಕಹಿ ಸತ್ಯ! ಸ್ವೀಟ್ ಅಲ್ಲ ರೋಗಗಳ ಕೂಟ.


ದೃಷ್ಟಿ ದೋಷ ನಿವಾರಣೆ : ರಿಡ್ಜ್ ಸೋರೆಕಾಯಿಯಲ್ಲಿನ ವಿಟಮಿನ್ ಎ ಅಂಶವು ಗಮನಾರ್ಹವಾಗಿದೆ. ಇದು ದೃಷ್ಟಿಯನ್ನು ಸುಧಾರಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ.

ಮ್ಯಾಕ್ಯುಲರ್ ಡಿಜೆನರೇಶನ್, ಭಾಗಶಃ ಕುರುಡುತನ ಮತ್ತು ಇತರ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಸಹ ಹೀರೆಕಾಯಿ ಸಹಾಯ ಮಾಡುತ್ತದೆ.


ತೂಕ ನಷ್ಟಕ್ಕೆ ಸಹಕಾರಿ : ಇತ್ತೀಚಿನ ದಿನಗಳಲ್ಲಿ ತೂಕ ಇಳಿಕೆ ಮಾಡಲು ಪ್ರತಿಯೊಬ್ಬರೂ ಏನೇನೋ ಸರ್ಕಸ್ ಮಾಡುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು, ಜಿಮ್, ವ್ಯಾಯಾಮ ಅಂತೆಲ್ಲಾ ಮಾಡೋ ಜನರು ಡಯೆಟ್ ಕೂಡ ಮಾಡಿ, ಕೆಲವು ನಿರ್ದಿಷ್ಟ ಆಹಾರಗಳನ್ನ ಮಾತ್ರ ಸೇವನೆ ಮಾಡುತ್ತಾರೆ.

ಹೀಗೆ ಡಯೆಟ್ ಮಾಡಿ ತೂಕ ಇಳಿಕೆ ಮಾಡಿಕೊಳ್ಳಬೇಕು ಎಂದುಕೊಳ್ಳುವ ಜನರು ಹೀರೆಕಾಯಿ ಸೇವನೆ ಮಾಡುವುದು ಅಗತ್ಯ. ಹೀರೆಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದ್ದು, ತೂಕ ಇಳಿಕೆಗೆ ಸಹಕಾರಿಯಾಗಿದೆ.


ಮಲಬದ್ಧತೆ ನಿವಾರಣೆ : ಹಿರೇಕಾಯಿಯಲ್ಲಿ ಸೆಲ್ಯುಲೋಸ್ ಎಂಬ ನೈಸರ್ಗಿಕ ನಾರಿನ ಅಂಶವಿದ್ದು, ಇದು ಆಹಾರವನ್ನ ಸರಿಯಾಗಿ ಜೀರ್ಣ ಮಾಡುವಂತೆ ಮಾಡುತ್ತದೆ.

ಜೊತೆಗೆ ಹೀರೆಕಾಯಿ ಸೇವನೆ ಮಾಡುವುದು ದೇಹದಲ್ಲಿ ನಿರ್ಜಲಿಕರಣದ ಸಮಸ್ಯೆಯನ್ನ ತಪ್ಪಿಸುತ್ತದೆ. ನಾವು ಸೇವಿಸುವ ಆಹಾರವನ್ನ ಸೂಕ್ತ ಪ್ರಮಾಣದಲ್ಲಿ ಜೀರ್ಣ ಮಾಡುವಷ್ಟು ನೀರಿನ ಪ್ರಮಾಣವನ್ನ ಹೀರೆಕಾಯಿ ಸೇವನೆ ನಮ್ಮ ದೇಹಕ್ಕೆ ಒದಗಿಸುತ್ತದೆ.


ಕಬ್ಬಿಣದ ಕೊರತೆ ನೀಗಿಸಲು ಸಹಕಾರಿ : ಪ್ರತಿನಿತ್ಯ ಹೀರೆಕಾಯಿ ಸೇವನೆ ಮಾಡುವುದರಿಂದ ಹೀರೆಕಾಯಿಯಲ್ಲಿನ ಕಬ್ಬಿಣದ ಅಂಶ ನಮ್ಮ ದೇಹ ಸೇರುತ್ತದೆ.

ಹೀಗಾಗಿ ದೇಹದಲ್ಲಿ ಕಬ್ಬಿಣದ ಕೊರತೆಯಿಂದ ಬಳಲುವರು ಹೀರೆಕಾಯಿಯನ್ನ ತಪ್ಪದೆ ಬಳಸುವುದು ಸೂಕ್ತ.


ರಕ್ತದ ವೃದ್ಧಿ : ಹೀರೆಕಾಯಿಯಲ್ಲಿ ವಿಟಮಿನ್ ‘ಬಿ6’ ಅಂಶವು ಹೆಚ್ಚಾಗಿದ್ದು, ಇದು ದೇಹದಲ್ಲಿರುವ ಕೆಂಪು ರಕ್ತ ಕಣಗಳ(Red Blood Cells) ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ : https://vijayatimes.com/doctors-saved-electrician-life/

ಇಡೀ ದೇಹದ ಎಲ್ಲಾ ಅಂಗಾಂಗಗಳಿಗೆ ಸರಿಯಾಗಿ ರಕ್ತ ಸಂಚಾರ ನಿಯಂತ್ರಣ ಮಾಡುವುದರಿಂದ ಹಿಡಿದು ದೇಹದ ಯಾವುದೇ ಬಗೆಯ ನೋವು ಮತ್ತು ಆಯಾಸವನ್ನು ದೂರ ಮಾಡುತ್ತದೆ.

Exit mobile version