ಮಾನವನ ಆರೋಗ್ಯ ಸಂಜೀವಿನಿ – ‘ಸ್ಪಿರುಲಿನಾ’

ಸ್ಪಿರುಲಿನಾ (health benefits of spirulina) ಸಮುದ್ರದಲ್ಲಿ ಸಿಗುವ ವಿಶೇಷ ಬಗೆಯ ಪಾಚಿ. ಇದು ನೀಲಿ ಹಸಿರಿನ ಬಣ್ಣದಿಂದ ಕೂಡಿದ ಪಾಚಿಯಾಗಿದೆ. ಇದರ ವಿಶೇಷತೆ ಏನಂದ್ರೆ ಇದು ಮನುಷ್ಯರಲ್ಲಿ ಯಾವುದೇ

ಗಮನಾರ್ಹ ಅಡ್ಡಪರಿಣಾಮಗಳಿಲ್ಲದೆ ಪ್ರೋಟೀನ್ ಮತ್ತು ವಿಟಮಿನ್ (Vitamin) ಪೂರಕಗಳ ಮೂಲದ ರೂಪದಲ್ಲಿ ಬಳಸಲಾಗುತ್ತದೆ.ಸ್ಪಿರುಲಿನಾವು ತೇವಾಂಶವುಳ್ಳ ಮಣ್ಣು, ಮಿಶ್ರಲೋಹ ಲವಣಯುಕ್ತ

ನೀರು, ಮರಗಳ ತೊಗಟೆ ಮತ್ತು ತೇವಾಂಶವುಳ್ಳ ಗೋಡೆಗಳ ಮೇಲೆ ಹಸಿರು, ಕಂದು ಅಥವಾ ಕೆಲವು ಕಪ್ಪು ಪದರಗಳ ರೂಪದಲ್ಲಿ ಕಂಡುಬರುತ್ತದೆ.


ಇದು ಕ್ಷಾರೀಯ (Alkaline) ಸರೋವರಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ ಮತ್ತು ಸಮುದ್ರದ ತುಂಬಾ ತಳಭಾಗದಲ್ಲಿ ದೊರೆಯುತ್ತದೆ. ಇದು ಭಾರತ,ಅಮೆರಿಕ, ಸ್ಪೇನ್, ಜಪಾನ್ ಹಾಗೂ

ಇದನ್ನು ಓದಿ: ಸಿದ್ದರಾಮಯ್ಯ ಸಂವಿಧಾನಕ್ಕೆ ಗೌರವ ನೀಡುತ್ತಿರುವ ಪರಿ ಇದು – ಬಿಜೆಪಿ ಲೇವಡಿ

ವಿಶ್ವದಾದ್ಯಂತ ಕೆಲವು ದೇಶಗಳಲ್ಲಿ ಮಾತ್ರ ಬೆಳೆಯುತ್ತಾರೆ. ಸ್ಪಿರುಲಿನಾದಲ್ಲಿ ಶೇ. 60 ರಿಂದ 70 ರಷ್ಟು ಪ್ರೋಟೀನ್ (Protein) ಇರುತ್ತದೆ. ಇದರಲ್ಲಿ ವಿಟಮಿನ್ ಬಿ 12, ಖನಿಜಗಳು, ಪ್ರೊ ವಿಟಮಿನ್ ಎ,

ಕಬ್ಬಿಣದ ಅಂಶಗಳು ಅತ್ಯಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ ಮತ್ತು ಅನೇಕ ರೋಗಗಳ ಲಕ್ಷಣಗಳನ್ನು (health benefits of spirulina) ಸುಧಾರಿಸುತ್ತದೆ.

ಇದನ್ನು ಓದಿ: ಒಂದೇ ದಿನದಲ್ಲಿ 5 ಹತ್ಯೆ ! ಬೆಂಗಳೂರಲ್ಲಿ ಹದಗೆಟ್ಟಿದೆಯಾ ಕಾನೂನು ಸುವ್ಯವಸ್ಥೆ?


ಉದಾಹರಣೆ : ಸಮುದ್ರದಲ್ಲಿ ಆಮೆಯು ಇದನ್ನು ತಿನ್ನುವುದರ ಮೂಲಕ ಶೇಕಡ 150 ರಿಂದ 200 ವರ್ಷ ತನ್ನ ಜೀವಾವಧಿ ಕಳೆಯುತ್ತದೆ, ಇದರ ಮೂಲಕ ತಂತ್ರಜ್ಞಾನಿಗಳು ಸ್ಪೀರೂಲಿನವನ್ನು ಜನರಿಗೆ

ಪರಿಚಯಿಸಿದ್ದಾರೆ.
ಆರೋಗ್ಯ ಪ್ರಯೋಜನಗಳು : 1)ಆಂಟಿಅಲರ್ಜಿಕ್ (Antiallergic),
2)ಆಂಟಿಕ್ಯಾನ್ಸರ್ (Anti Cancer), 3) ಆಂಟಿವೈರಲ್,3)ಆಂಟಿಟ್ಯೂಮರ್
4)ಅಂಟಿಡೈಯಾಬಿಬಿಟಿಕ್ ಹಾಗೂ ಜೀವಾಣುವಿರೋಧಿ ಗುಣಗಳಿವೆ

ಅಂಟಿಆಕ್ಸಿಡೆಂಟ್ ಹಾಗೂ ಅಂಟಿಇನ್ಫ್ಲೇಮೆಟರಿಗಳ ಆಗರ ಸ್ಪಿರುಲಿನಾ
ಸ್ಪಿರುಲಿನಾದಲ್ಲಿ ಫೈಕೊಸೈನಿನ್ (Phycocyanin) ಎಂಬ ಉತ್ಕರ್ಷಣ ನಿರೋಧಕವಿದೆ. ಇದರಿಂದಲೇ ಸ್ಪಿರುಲಿನಾಗೆ ನೀಲಿ-ಹಸಿರು ಬಣ್ಣವನ್ನು ಇರುತ್ತದೆ. ಅಷ್ಟೇ ಅಲ್ಲ, ಫೈಕೋಸೈನಿನ್ ನಮ್ಮ

ದೇಹದಲ್ಲಿ ಇರುವ ರಾಡಿಕಲ್ಗಳೊಂದಿಗೆ ಹೋರಾಡುತ್ತದೆ ಮತ್ತು ನಮ್ಮ ದೇಹಕ್ಕೆ ಆಗುವ ಹಾನಿಯನ್ನು ಸರಿದೂಗಿಸುತ್ತದೆ.

ಬಾಯಿಯ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುತ್ತದೆ
ಕೆಲವು ಅಧ್ಯಯನಗಳು, ಸ್ಪಿರುಲಿನಾದಲ್ಲಿ ವಿಶೇಷವಾಗಿ ಬಾಯಿಯ ಕ್ಯಾನ್ಸರ್ನಲ್ಲಿ ಕ್ಯಾನ್ಸರ್ (Cancer) ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎಂದು ಹೇಳಿವೆ. ಬಾಯಿಯ ಸಬ್‌ಮ್ಯೂಕಸ್

(Submucous) ಫೈಬ್ರೋಸಿಸ್ ಅನ್ನು ಎದುರಿಸಲು ಸ್ಪಿರುಲಿನಾದ ಸೇವನೆ ಸಹಾಯ ಮಾಡುತ್ತದೆ ಎಂಬ ಅಂಶವನ್ನು ವಿವಿಧ ಪ್ರಯೋಗಗಳು ಸೂಚಿಸುತ್ತವೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ


ಹಲವು ಅಧ್ಯಯನಗಳ ಪ್ರಕಾರ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸ್ಪಿರುಲಿನಾ ಅತ್ಯುತ್ತಮ ಆಹಾರಗಳಲ್ಲಿ ಒಂದಾಗಿದೆ. ಟೈಪ್-2 ಡಯಾಬಿಟಿಸ್ (Diabetes) ರೋಗಿಗಳ ಮೇಲೆ ನಡೆಸಿದ

ಅಧ್ಯಯನಗಳು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸ್ಪಿರುಲಿನಾ ಸಹಾಯಕವಾಗಿದೆ ಎಂದು ದೃಢಪಡಿಸಿವೆ. ಇದರ ಸೇವನೆಯಿಂದ ರಕ್ತದೊತ್ತಡ ಮತ್ತು ರಕ್ತಹೀನತೆಯನ್ನೂ ನಿವಾರಿಸಿಕೊಳ್ಳಬಹುದು.


Kushal.N

Exit mobile version