ಬಾಳೆಹಣ್ಣು ಮತ್ತು ಸಿಪ್ಪೆ ನಮ್ಮಆರೋಗ್ಯಕ್ಕೆ ಎಷ್ಟು ಲಾಭದಾಯಕ ಗೊತ್ತಾ? ; ತಪ್ಪದೇ ಈ ಮಾಹಿತಿ ಓದಿ

Health

“ದಿನಕ್ಕೊಂದು ಸೇಬು ವೈದ್ಯರನ್ನು ದೂರವಿರಿಸುತ್ತದೆ” ಎನ್ನಲಾಗುತ್ತದೆ ಆದರೆ ಅದರ ಸ್ಥಾನವನ್ನು ನಿಧಾನವಾಗಿ ಬಾಳೆಹಣ್ಣು(Banana) ಆಕ್ರಮಿಸುತ್ತಿದೆ.

ಸಹಜವಾಗಿ ಹಿಂದುಗಳು ತಮ್ಮ ಎಲ್ಲ ಹಬ್ಬದ ಆಚರಣೆಗಳಲ್ಲಿ ಬಾಳೆಹಣ್ಣಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ದೇವರ ನೈವೇದ್ಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ಎಲ್ಲ ಸರ್ವ ಋತುಗಳಲ್ಲೂ ಲಭ್ಯವಾಗುವ ಏಕೈಕ ಫಲವೆಂದರೆ ಅದು ಕೇವಲ ಬಾಳೆಹಣ್ಣು ಮಾತ್ರ.

ಬಾಳೆ ಎಲೆಯು ಊಟಕ್ಕೆ ಸರ್ವ ಶ್ರೇಷ್ಠ ಮತ್ತು ಅದರ ದಿಂಡುಗಳನ್ನು ತರಕಾರಿಯಂತೆ ಬಳಸುವುದರಿಂದ ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಕರಗಿಸಲು ಸಹಾಯಕವಾಗಿದೆ.

ಇನ್ನು ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಬಾಳೆಹಣ್ಣಿನಿಂದ ನಮ್ಮ ದೇಹಕ್ಕೆ ದೊರೆಯುವ ಲಾಭಾಂಶಗಳು ಹೀಗಿವೆ ತಿಳಿಯಿರಿ. ದಿನಕ್ಕೆ 2 ಬಾಳೆಹಣ್ಣು ಮಾತ್ರ ಸೇವಿಸಬೇಕು ಅದು ಊಟದ ನಂತರ. ಬಾಳೆಹಣ್ಣಿನಲ್ಲಿ ವಿಶೇಷವಾದ ಗುಣವಿದೆ.

ಬಾಳೆ ಹಣ್ಣಿನಲ್ಲಿ ಮೂರು ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್, ಪ್ರೂಕ್ಟಸ್, ಗ್ಲೂಕೋಸ್ ಎಂಬ ಪೈಬರ್ ಸಮ್ಮಿಳಿತವಾಗಿ ತ್ವರಿತವಾಗಿ ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಬಾಳೆ ಹಣ್ಣಿನಲ್ಲಿ ಅನೇಕ ಸತ್ವಗಳು ಥಿಯಾಮೈನ್ (ಬಿ1) 0.031 ಮಿ.ಗ್ರಾಂ, .ರಿಬೋಫ್ಲಾವಿನ್ (ಬಿ2) 0.073 ಮಿಗ್ರಾಂ. ನಿಯಾಸಿನ್ (ಬಿ3) 0.665 ಮಿಗ್ರಾಂ, ಪಾಂಟೋಥೆನಿಕ್ ಆಮ್ಲ (ಬಿ5) 0.334 ಮಿಗ್ರಾಂ. ಜೀವಸತ್ವ (ಬಿ6) 0.4ಮಿಗ್ರಾಂ, ಪೋಲೇಟ್ (ಬಿ9) 20 ಮಿಕ್ರೋಗ್, ಕೋಲೀನ್ 9.8 ಮಿಗ್ರಾಂ, ಮತ್ತು ವಿಟಮಿನ್ ಸಿ 8.7 ಮಿ.ಗ್ರಾಂ ಕಾರ್ಬೊಹೈಡ್ರೇಟ್ಗಳು, ಪ್ರೋಟೀನನಂತಹ ವಿಟಮಿನ್ಗಳು ಹೇರಳವಾಗಿದೆ. ಭಾರತದಲ್ಲಿ ಬಾಳೆಹಣ್ಣನ್ನು ಅತಿ ಹೆಚ್ಚು ರೈತರು ಬೆಳೆಯುತ್ತಾರೆ.

ಹಾಗೂ 20 ಕ್ಕಿಂತ ಹೆಚ್ಚು ವರ್ಗ ಮತ್ತು ತಳಿಯ ಬಾಳೆಹಣ್ಣು ಸಿಗುತ್ತವೆ. ನಿಯಮಿತವಾಗಿ ಬಾಳೆಹಣ್ಣನ್ನು ತಿನ್ನುತ್ತ ಬಂದರೆ ಮಾನಸಿಕ ಖಿನ್ನತೆ, ಮಲಬದ್ಧತೆ ದೂರಮಾಡುತ್ತದೆ ಹಾಗೂ ಪಚನ ಕ್ರಿಯೆಯನ್ನು ಹೆಚ್ಚಿಸುತ್ತದೆ.

ರಕ್ತದಲ್ಲಿನ ಹಿಮೋಗ್ಲೋಬಿನ್ ನಿಯಂತ್ರಿಸಿ ರಕ್ತ ಹೀನತೆ ಬರದಂತೆ ತಡೆಯುತ್ತದೆ. ರಕ್ತದೊತ್ತಡ ಜಡತೆ ಮತ್ತು ಆಲಸ್ಯ, ಒತ್ತಡವನ್ನು ನಿವಾರಿಸುತ್ತದೆ. ಉಷ್ಣನಿಯಂತ್ರಕ ವನ್ನು ನಿಯಮಿತ ಕ್ರಮದಲ್ಲಿ ನಿಯಂತ್ರಿಸುತ್ತದೆ.

ಅತಿಸಾರ ಬೇದಿ , ಆಮಶಂಕೆ, ಉಬ್ಬಸದಂತಹ ಸಮಸ್ಯೆಗಳಿದ್ದರು ನಿವಾರಿಸುತ್ತದೆ ಹಾಗೂ ಹೃದಯ ರೋಗ, ಮೂತ್ರಪಿಂಡ ಸಮಸ್ಯೆಗಳಿದ್ದರು ನಿಯಂತ್ರಣದಲ್ಲಿಡುತ್ತದೆ.

ಹಸಿರು ಬಣ್ಣದ ಬಾಳೆಹಣ್ಣಿನ ವಿಶೇಷತೆ : ಇದರಲ್ಲಿ ಕಡಿಮೆ ಸಕ್ಕರೆ ಅಂಶವಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ, ಇದನ್ನು ಅಡುಗೆಗೆ, ಸಾಂಬಾರ ಮತ್ತು ಪಲ್ಯ ರೂಪದಲ್ಲಿ ಬಳಸಬಹುದು.
 ಅತಿ ಹೆಚ್ಚು ಬಳಸುವುದು ಅಪಾಯಕಾರಿ! ಮಧುಮೇಹಿಗಳು ಕೂಡ ಸೇವಿಸಬಹುದು, ಆದರೆ ಹೊಟ್ಟೆಯ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದವರು ಸ್ಥೂಲಕಕಾಯ ಮತ್ತು ಶ್ವಾಸಕೋಶ ಸಂಬಂಧಿಸಿದ ಕಾಯಿಲೆ ಇದ್ದವರು ಈ ರೀತಿ ಇರುವ ಬಾಳೆ ಹಣ್ಣು ಸೇವಿಸಬಾರದು.

ಹಳದಿ ಬಣ್ಣದ ಹಣ್ಣು ಮತ್ತು ಕಂದು ಮಚ್ಚೆ ಹಣ್ಣಿನ ವಿಶೇಷತೆ :
ಇದರಲ್ಲಿ ಸ್ವಲ್ಪ ಸಕ್ಕರೆ ಪ್ರಮಾಣ ಜಾಸ್ತಿ ಇರುತ್ತದೆ ಹಾಗೂ ಮೃದುವಾಗಿರುತ್ತದೆ. ಇದರಲ್ಲಿ ರೋಗನಿರೊಧಕ ಶಕ್ತಿ ತುಂಬಾ ಹೇರಳವಾಗಿರುವದರಿಂದ ಎಲ್ಲರು ಸೇವಿಸಬಹುದು.

ಆದರೆ ಮಧುಮೇಹದ ರೋಗಿಗಳು ಮತ್ತು ಅಸ್ತಮಾ ಶ್ವಾಸಕೋಶದ ಸಂಬದ ವ್ಯಾದಿಗಳಿದ್ದರೆ ಸೇವಿಸುವಾಗ ಸ್ವಲ್ಪ ಜಾಗ್ರತೆ ವಹಿಸುವುದು ಒಳಿತು.

ಪೂರ್ತಿ ಮಾಗಿದ ಬಾಳೆ ಹಣ್ಣಿನ ವಿಶೇಷತೆ :
ಇದು ಸಂಪೂರ್ಣವಾಗಿ ಮೃದುವಾಗಿರುತ್ತದೆ. ಇದರಲ್ಲೂ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ, ಬಹಳ ಮಾಗಿದ ಹಣ್ಣನ್ನು ಜನರು ತಿನ್ನಲು ಇಷ್ಟಪಡುವುದಿಲ್ಲ. ಅದರಲ್ಲಿ ತುಂಬಾ ಹೇರಳವಾಗಿ ರೋಗ ನಿರೋಧಕ ಶಕ್ತಿ ಇರುತ್ತದೆ. ಇದನ್ನು ಪಾನೀಯವಾಗಿ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ.

https://vijayatimes.com/jds-party-janatha-mithra/

ಬಾಳೆಹಣ್ಣಿನ ಸಿಪ್ಪೆಯ ವಿಶೇಷತೆ : ಪ್ರತಿ ದಿನ ಹಲ್ಲುಜ್ಜುವ ಮೊದಲು, ಬಾಳೆ ಹಣ್ಣಿನ ಸಿಪ್ಪೆಯಿಂದ ಹಲ್ಲುಗಳಿಗೆ ತಿಕ್ಕಿದರೆ ಹಲ್ಲುಗಳ ಮೇಲೆ ಇರುವ ಕಲೆಗಳನ್ನು ಹೊಗಲಾಡಿಸುತ್ತದೆ. ಬಾಳೆ ಹಣ್ಣಿನ ಒಳ ಸಿಪ್ಪೆಯ ತಿರುಳು ಐದು ನಿಮಿಷಗಳ ಕಾಲ ಮುಖದ ಚರ್ಮಕ್ಕೆ ತಿಕ್ಕಿದರೆ ಮೊಡವೆಗಳನ್ನು ಹೊಗಲಾಡಿಸುತ್ತದೆ. ಸೊಳ್ಳೆ ಕಚ್ಚಿದ ಗಾಯದ ಮೇಲೆ ತಿಕ್ಕಿದರೆ ಗಾಯಗಳು ವಾಸಿಯಾಗುವುದು. ಬಾಳೆಹಣ್ಣಿನ ಸಿಪ್ಪೆಯನ್ನು ಸೇವಿಸಿದರೆ ಕ್ಯಾನ್ಸರ್ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ಅದರಲ್ಲಿ ತುಂಬಾ ಹೇರಳವಾಗಿ ರೋಗ ನಿರೋಧಕ ಶಕ್ತಿ ಮತ್ತು ಕ್ಯಾನ್ಸರ್ ವಿರೋಧಿ ಗುಣ ಲಕ್ಷಣ ಇರುವುದರಿಂದ ಅಪಾಯದ ಮಟ್ಟವನ್ನು ಕಡಿಮೆಮಾಡಬಹುದು. ಸಿಪ್ಪೆಯನ್ನು ಸೇವಿಸಿದರೆ ಮಲಬದ್ದತೆ ಮತ್ತು ಕ್ರೋನ್ಸ್ ಕಾಯಿಲೆಯನ್ನು ದೂರಮಾಡುತ್ತದೆ.


– ರಾಘವೆಂದ್ರ ಬೆಂಡ್ಲಗಟ್ಟಿ, ಮುಂಡಗೋಡ (ಉ.ಕ)

Exit mobile version