Heart : ಹೃದಯದ ಆರೋಗ್ಯಕ್ಕಾಗಿ ಏಳು ಸೂತ್ರಗಳು ; ತಪ್ಪದೇ ಓದಿ

Heart

Home Remedies : ಹೃದಯದ ಆರೋಗ್ಯ(Heart Health) ಇಡೀ ದೇಹದ ಆರೋಗ್ಯವನ್ನು ನಿಯಂತ್ರಿಸುತ್ತದೆ. ಹೀಗಾಗಿ ಹೃದಯದ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅತಿಮುಖ್ಯ. ಆಧುನಿಕ ಜೀವನ ಪದ್ದತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಹೀಗಾಗಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಕೆಳಗಿನ ಏಳು ಸೂತ್ರಗಳನ್ನು ಅನುಸರಿಸುವುದು ಉತ್ತಮ. ನೀವು ಈ ಕ್ರಮಗಳನ್ನು ಅನುಸರಿಸಿಕೊಂಡು ಹೋದರೆ, ಹೃದಯದ ಆರೋಗ್ಯ ಕಾಪಾಡಬಹುದು.

ಒತ್ತಡ ತಗ್ಗಿಸಿ : ಆಧುನಿಕ ಜೀವನ ಶೈಲಿಯಿಂದಾಗಿ ಅನೇಕರು ಒತ್ತಡಗಳಿಗೆ ಸಿಲುಕುತ್ತಾರೆ. ಇದು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಒತ್ತಡವನ್ನು ನಿರ್ವಹಿಸಲು ಯೋಗ ಮತ್ತು ಧ್ಯಾನವನ್ನು ನೀವು ಅಭ್ಯಾಸ ಮಾಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ.

https://fb.watch/fn2VVfekD5/

ಆರೋಗ್ಯಕಾರಿ ತೂಕ : ಅಧಿಕ ದೇಹ ತೂಕವು ಹೃದಯದ ಕಾಯಿಲೆಯ ಅಪಾಯವನ್ನು ವೃದ್ಧಿಸುತ್ತದೆ. ಹೀಗಾಗಿ ದೇಹದ ತೂಕವನ್ನು ನಿರ್ವಹಿಸಬೇಕು. ದೇಹದ ಎತ್ತರಕ್ಕೆ ಅನುಗುಣವಾಗಿ ದೇಹದ ತೂಕ ಕಾಪಾಡಬೇಕು. ಆಗ ರಕ್ತನಾಳಗಳು ಆರೋಗ್ಯವಾಗಿ ಇರುವುದು. ಹೃದಯದ ಕಾರ್ಯನಿರ್ವಹಣೆಗೆ ಸಹಕಾರಿಯಾಗುತ್ತವೆ.

ನಿದ್ರೆ : ಹೃದಯದ ಆರೋಗ್ಯಕ್ಕಾಗಿ ಪ್ರತಿದಿನ ಎಂಟು ಗಂಟೆಗಳ ಕಾಲ ಸರಿಯಾಗಿ ನಿದ್ರೆ ಮಾಡಬೇಕು. ನಿದ್ರಾಹೀನತೆಯು ಬೇರೆ ಬೇರೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ನಿದ್ರೆಯೂ ಅತ್ಯಂತ ಮುಖ್ಯವಾಗಿದೆ. ಅದರಿಂದ ದೇಹವು ಸೆರೊಟೊನಿನ್ ಹಾರ್ಮೋನ್ ನ್ನು ಹೆಚ್ಚು ಬಿಡುಗಡೆ ಮಾಡಿ, ಒತ್ತಡ ಕಡಿಮೆ ಮಾಡುತ್ತದೆ.

ವ್ಯಾಯಾಮ : ಹೃದಯದ ಆರೋಗ್ಯಕ್ಕಾಗಿ ಪ್ರತಿದಿನ ವ್ಯಾಯಾಮ ಮಾಡುವುದು ಉತ್ತಮ. ಇದು ಅಧಿಕ ಕೊಲೆಸ್ಟ್ರಾಲ್, ರಕ್ತದಲ್ಲಿನ ಅಧಿಕ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಆರೋಗ್ಯಕಾರಿ ತೂಕ ಕಾಪಾಡಬಹುದು. ಇದರಿಂದ ಹೃದಯದ ಮೇಲೆ ಯಾವುದೇ ಒತ್ತಡ ಉಂಟಾಗುವುದಿಲ್ಲ.

ಕಡಿಮೆ ​ಸೋಡಿಯಂ ಸೇವನೆ : ಹೆಚ್ಚು ಉಪ್ಪನ್ನು ಬಳಸಬೇಡಿ. ಆಹಾರ ಕ್ರಮದಲ್ಲಿ ಉಪ್ಪು ಕಡಿಮೆ ಮಾಡಿಕೊಳ್ಳಿ. ಅತಿಯಾದ ​ಸೋಡಿಯಂ ಸೇವನೆ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

https://vijayatimes.com/manipur-election-nithish-kumar-drops/

ಆರೋಗ್ಯಕಾರಿ ಆಹಾರ : ಹೃದಯದ ಆರೋಗ್ಯದಲ್ಲಿ ಆಹಾರವು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಬೇಯಿಸಿದ ಆಹಾರ ಮತ್ತು ಹಣ್ಣುಗಳು ಹೃದಯಕ್ಕೆ ಉತ್ತಮ. ಜೀರಿಗೆ, ಕೊತ್ತಂಬರಿ, ಶುಂಠಿಯಂತಹ ಪದಾರ್ಥಗಳನ್ನು ಮನೆಯಲ್ಲೇ ಮಾಡಿಕೊಂಡು ಸೇವಿಸುವುದು ಹೃದಯಕ್ಕೆ ತುಂಬಾ ಒಳ್ಳೆಯದು. ಯಾವುದೇ ಕಾರಣಕ್ಕೂ ಎಣ್ಣೆಯಲ್ಲಿ ಕರಿದ ಮತ್ತು ಜಂಕ್‌ಪುಡ್‌ಗಳನ್ನು ಸೇವಿಸಬಾರದು.

ತಾಜಾ ಆಹಾರ : ತಾಜಾ ಹಣ್ಣುಗಳು, ತರಕಾರಿಗಳನ್ನು ಸೇವನೆ ಮಾಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ, ಹೃದಯದ ಕಾಯಿಲೆಯನ್ನು ದೂರವಿಡುವುದು. ಅದೇ ರೀತಿ ಆರೋಗ್ಯಕಾರಿ ತೂಕ ಕಾಪಾಡಲು ಇದು ಸಹಕಾರಿ.

– ಮಹೇಶ್‌ ಪಿ.ಎಚ್

Exit mobile version