vijaya times advertisements
Visit Channel

ಮಸಾಲೆಯುಕ್ತ ಆಹಾರ ಪದಾರ್ಥಗಳ ಸೇವನೆ ಎಷ್ಟು ಪ್ರಯೋಜನಕಾರಿ ಗೊತ್ತಾ?

masala products

Health Tips : ಮಸಾಲೆಯುಕ್ತ ಆಹಾರ ಪದಾರ್ಥಗಳು ಆರೋಗ್ಯವನ್ನು (Health Facts Of Masala Items) ಹಾನಿಗೊಳಿಸುತ್ತವೆ ಎಂದು ನೀವು ಭಾವಿಸಿದ್ದರೆ ನಿಮ್ಮ ಊಹೆ ಸಂಪೂರ್ಣ ಸರಿಯಲ್ಲ.

ಮಸಾಲೆಯುಕ್ತ ಆಹಾರವನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ, ಕೆಲವು ಅರೋಗ್ಯ ಪ್ರಯೋಜನಗಳೂ ಇವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

Health Facts Of Masala Items

ಹೌದು, ಮಸಾಲೆಯುಕ್ತ ಆಹಾರವು ಆರೋಗ್ಯಕ್ಕೆ ಹಾನಿಕಾರಕ ಎಂದು ಹೆಚ್ಚು ಯೋಚಿಸಬೇಕಾಗಿಲ್ಲ. ಏಕೆಂದರೆ ವಿಜ್ಞಾನವು ಕೂಡ ಮಸಾಲೆ ಪ್ರಿಯರ ಪರವಾಗಿದೆ.

ಹೌದು, ನೀವು ಮಸಾಲೆಯುಕ್ತ ಆಹಾರವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ದೊರಕಲಿವೆ.

ಜೀರಿಗೆ, ದಾಲ್ಚಿನ್ನಿ, ಅರಿಶಿನ, ಬೆಳ್ಳುಳ್ಳಿ, ಶುಂಠಿ ಮತ್ತು ಮೆಣಸಿನಕಾಯಿಯಂತಹ ಕೆಲವು ಮಸಾಲೆಗಳು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ.

ಹೌದು, ಮಸಾಲೆಯುಕ್ತ ಆಹಾರ ಅನೇಕ ಪ್ರಯೋಜನಗಳನ್ನು (Health Facts Of Masala Items) ಹೊಂದಿವೆ.

Health Facts Of Masala Items


ತೂಕ ನಷ್ಟಕ್ಕೆ ಸಹಕಾರಿ : ಹಸಿರು ಮತ್ತು ಕೆಂಪು ಮೆಣಸಿನಕಾಯಿ, ಕಾಳುಮೆಣಸು, ಅರಿಶಿನ, ದಾಲ್ಚಿನ್ನಿ ಈ ಮಸಾಲೆಗಳು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.

ಹಾಗಾಗಿ, ಇದು ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ತೂಕ ಇಳಿಕೆಗೂ ನೆರವಾಗಲಿದೆ.

ಇದನ್ನೂ ಓದಿ : https://vijayatimes.com/namma-metro-bengaluru/

ಇನ್ನು, ಅರಿಶಿನದ (Turmeric) ಬಗ್ಗೆ ನಡೆಸಿದ ಅಧ್ಯಯನದಲ್ಲಿ, ಅರಿಶಿನದಲ್ಲಿರುವ ಕೊಬ್ಬು ಅಂಗಾಂಶಗಳ ಬೆಳವಣಿಗೆಯನ್ನು ನಿಗ್ರಹಿಸಲು ಸಹಕಾರಿ ಎಂದು ಸಾಬೀತಾಗಿದೆ.

ಇನ್ನೂ ಕೆಲವು ಮಸಾಲೆಗಳನ್ನು ಸೇವಿಸುವುದರಿಂದ ಬೇಗನೆ ಹಸಿವಾಗುವುದಿಲ್ಲ. ಜೊತೆಗೆ, ಈ ಮಸಾಲೆಗಳಲ್ಲಿರುವ ಕೊಬ್ಬು ಹಾಗೂ ಕ್ಯಾಲೊರಿಗಳ ಪ್ರಮಾಣವೂ ತುಂಬಾ ಕಡಿಮೆಯಾಗಿರುವ ಕಾರಣ ತೂಕ ಇಳಿಕೆಗೂ ಸಹಾಯ ಮಾಡುತ್ತವೆ.

chilli powder - Health Facts Of Masala Items


ಕ್ಯಾನ್ಸರ್(Cancer) ಹರಡುವುದನ್ನು ತಡೆಯಲು ಸಹಕಾರಿ : ಮೆಣಸಿನಕಾಯಿಯಲ್ಲಿ ಕ್ಯಾಪ್ಸೇಸಿನ್ ಎಂಬ ಸಕ್ರಿಯ ಘಟಕವಿದೆ. ಇದು ಕ್ಯಾನ್ಸರ್ ಕೋಶಗಳನ್ನು ನಿಷ್ಕ್ರಿಯ ಮಾಡಲು ಹಾಗೂ ನಾಶ ಮಾಡಲು ಸಹ ಸಹಾಯ ಮಾಡುತ್ತವೆ.

ಹಾಗಾಗಿ, ಕ್ಯಾನ್ಸರ್ ಬೆಳೆಯುವುದು ಮತ್ತು ಹರಡುವುದನ್ನು ತಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : https://vijayatimes.com/couples-invite-indian-army/

ಆರೋಗ್ಯಕರ ಕೋಶಗಳಿಗೆ ಯಾವುದೇ ರೀತಿ ಹಾನಿ ಮಾಡದೇ, ಕ್ಯಾಪ್ಸೈಸಿನ್ ಪ್ರಾಸ್ಟೇಟ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಯುಸಿಎಲ್ಎ ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ವಿಷಯವು ಬಹಿರಂಗವಾಗಿದೆ.


ಕೆಲವು ಸೋಂಕಿನಿಂದಲೂ ಮಸಾಲೆಗಳು ರಕ್ಷಣೆ ನೀಡುತ್ತವೆ : ಜೀರಿಗೆ ಮತ್ತು ಅರಿಶಿನದಂತಹ ಕೆಲವು ಮಸಾಲೆಗಳು ಆಂಟಿಆಕ್ಸಿಡೆಂಟ್, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿ ಮೈಕ್ರೊಬಿಯಲ್ ಗುಣಗಳನ್ನು ಹೊಂದಿರುವ ಕಾರಣ,

ದೇಹದಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಹಾಗಾಗಿ, ಇದು ಸೋಂಕು ಮತ್ತು ರೋಗಗಳಿಂದ ದೂರವಿರಲು ಸಹಕರಿಸುತ್ತದೆ.

jeera


ಖಿನ್ನತೆಯನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ : ಮಸಾಲೆಯುಕ್ತ ಆಹಾರದ ಸೇವನೆಯಿಂದ ದೇಹದಲ್ಲಿ ಸಿರೊಟೋನಿನ್ ಎಂದರೆ ಫೀಲ್ ಗುಡ್ ಹಾರ್ಮೋನ್ ನ ಉತ್ಪಾದನೆಯು ಹೆಚ್ಚಾಗುತ್ತದೆ. ಇದು ಒತ್ತಡ ಹಾಗೂ ಖಿನ್ನತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಜೊತೆಗೆ, ಮಸಾಲೆಭರಿತ ಆಹಾರವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹ ಸಹಾಯ ಮಾಡುತ್ತದೆ. ಆದರೆ ಮಸಾಲೆಯನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಪ್ರಯೋಜನ ಸಿಗುತ್ತದೆ.

https://youtu.be/ZWQ_rEdzKjQ ಈ ಅಂಡರ್ ಪಾಸ್ ಕಳಪೆ ಕಾಮಗಾರಿಯನ್ನು ನೀವೇ ನೋಡಿ!


ಮಸಾಲೆ ಪದಾರ್ಥಗಳು ಉರಿಯೂತದ ವಿರುದ್ಧವೂ ಹೋರಾಡುತ್ತವೆ : ಅರಿಶಿನ, ಶುಂಠಿ ಮತ್ತು ಬೆಳ್ಳುಳ್ಳಿಯಂತಹ ಮಸಾಲೆ ಪದಾರ್ಥಗಳು ಉರಿಯೂತಕ್ಕೆ ಉಪಶಮನ ನೀಡುವ ಗುಣಲಕ್ಷಣಗಳನ್ನು ಹೊಂದಿವೆ.

ಹಾಗಾಗಿ ಆಯುರ್ವೇದದಲ್ಲಿ ಸಂಧಿವಾತ, ತಲೆನೋವು, ವಾಕರಿಕೆಯಂತಹ ಹಲವು ರೋಗಗಳಿಗೆ ಚಿಕಿತ್ಸೆ ನೀಡಲು ಈ ಮಸಾಲೆಗಳನ್ನು ಬಳಸಲಾಗುತ್ತದೆ.

Latest News

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,

ರಾಜಕೀಯ

‘ಇದು ನನ್ನ ಸವಾಲು, ಕಾಂಗ್ರೆಸ್ಸಿಗರೇ ನಿಮ್ಮ ರಾಹುಲ್ ಗಾಂಧಿಯ ಒಂದೇ ಒಂದು ಸಾಧನೆಯನ್ನು ಹೇಳಿ ನೋಡೋಣ’ : ಸಿ.ಟಿ ರವಿ

ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaih) ಅವರ ವಿರುದ್ಧ ಸಿಡಿದೇಳುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(C.T.Ravi),

ದೇಶ-ವಿದೇಶ

ಭಾರತ್ ಜೋಡೋ ಯಾತ್ರೆಯಲ್ಲಿ ‘ಮೋದಿ, ಮೋದಿ’ ಎಂದು ಕೂಗಿದವರಿಗೆ ಮುತ್ತು ಕೊಟ್ಟ ರಾಹುಲ್ ಗಾಂಧಿ

ಜನ ಸಮೂಹ ಕೂಗುತ್ತಿದ್ದ ಜೈಕಾರಗಳನ್ನು ಆಲಿಸಿದ ರಾಹುಲ್ ಗಾಂಧಿ ಅವರ ಬಳಿ ಮೊದಲು ಕೈಬೀಸುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.