BF.7 ರೂಪಾಂತರವು ಕಡಿಮೆ ವೈರಲೆನ್ಸ್ ಹೊಂದಿದೆ, ಆದರೂ ಎಚ್ಚರಿಕೆ ! : ಸಚಿವ ಸುಧಾಕರ್

ಬೆಂಗಳೂರು : COVID-19 ನ BF.7 ರೂಪಾಂತರವು ಕಡಿಮೆ ವೈರಲೆನ್ಸ್ ನೊಂದಿಗೆ ಹರಡುತ್ತಿದೆ. ಆದರೂ ಹಿರಿಯ ನಾಗರಿಕರು, ಮಕ್ಕಳು ಮತ್ತು ಗರ್ಭಿಣಿಯರು ಜಾಗರೂಕರಾಗಿರಬೇಕು ಎಂದು ಆರೋಗ್ಯ ಸಚಿವ ಕೆ ಸುಧಾಕರ್(Health Minister statement) ಹೇಳಿದ್ದಾರೆ.

BF.7 ರೂಪಾಂತರವು ದೇಶಕ್ಕೆ ಕಾಲಿಟ್ಟಿರುವುದರಿಂದ ರಾಜ್ಯ ಸರ್ಕಾರವು(State Govt) ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,

ಕರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ಹೆಚ್ಚಳವನ್ನು ಎದುರಿಸಲು ಮತ್ತು ಸಿದ್ಧತೆಯನ್ನು ಪರಿಶೀಲಿಸಲು ಕೋವಿಡ್(COVID) ಪ್ರತಿಕ್ರಿಯೆಯ ಅಣಕು ಕಸರತ್ತುಗಳು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳು ಮತ್ತು ತಾಲೂಕುಗಳಲ್ಲಿ ಜಾರಿಯಲ್ಲಿವೆ.

ಇನ್ನು ಹೆಚ್ಚಿನ ಜನರು ಸೇರುವ ಸ್ಥಳಗಳು ಅಥವಾ ಚಟುವಟಿಕೆಗಳನ್ನು ತಪ್ಪಿಸಲು ಮತ್ತು ಅನಿವಾರ್ಯವಾದರೆ ಮಾಸ್ಕ್ ಧರಿಸಲು ಸಾರ್ವಜನಿಕರಿಗೆ ಸಲಹೆ ನೀಡಿದ್ದೇವೆ. BF.7 ರೂಪಾಂತರವನ್ನು ಎದುರಿಸಲು ರಾಜ್ಯ ಸರ್ಕಾರ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ : https://vijayatimes.com/rahul-gandhi-statement/

ಇನ್ನು BF.7 ಓಮಿಕ್ರಾನ್(Omicron) ಮತ್ತು ಇತರ ರೂಪಾಂತರಗಳ ನಡುವಿನ ವ್ಯತ್ಯಾಸವೆಂದರೆ,

BF.7 ಓಮಿಕ್ರಾನ್ ಹೆಚ್ಚಿನ ವೈರಲೆನ್ಸ್ ಹೊಂದಿಲ್ಲ. ಆದಾಗ್ಯೂ, ವಯಸ್ಸಾದವರಲ್ಲಿ ಮತ್ತು ಅಸ್ವಸ್ಥತೆ ಹೊಂದಿರುವವರಲ್ಲಿ ವೈರಸ್ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಇತರ ದೇಶಗಳ ವರದಿಗಳು ಸೂಚಿಸಿವೆ.

ಹೀಗಾಗಿ ಗರ್ಭಿಣಿಯರು, ವಯಸ್ಸಾದವರು ಮತ್ತು ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕು. 

ಜಾಗತಿಕವಾಗಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿಸಿರುವ ರಾಜ್ಯ ಸರ್ಕಾರವು ಸಿನಿಮಾ ಥಿಯೇಟರ್ಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಾಸ್ಕ್ ಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ.  

ಬಾರ್ಗಳು, ರೆಸ್ಟೋರೆಂಟ್ ಗಳು(Restaurants) ಮತ್ತು ಪಬ್ ಗಳಲ್ಲಿ ಎರಡು ಡೋಸ್ ಕೋವಿಡ್ ವ್ಯಾಕ್ಸಿನೇಷನ್(Covid vaccination) ಕಡ್ಡಾಯವಾಗಿದೆ ಎಂದು ಕೆ ಸುಧಾಕರ್ ಹೇಳಿದ್ದಾರೆ.

ಇದೇ ವೇಳೆ ಮಹಾರಾಷ್ಟ್ರದ(Maharashtra) ಗಡಿಯಲ್ಲಿ ಕಟ್ಟೆಚ್ಚರ ವಹಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧಾಕರ್ ಅವರು,

ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ಕೇಂದ್ರವು ರಾಜ್ಯಗಳಿಗೆ ನಿರ್ದೇಶಿಸಿದೆ.

ನೆರೆಯ ರಾಜ್ಯದಲ್ಲೂ ಅಧಿಕಾರಿಗಳು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿರುವ ಸ್ಥಳಗಳಲ್ಲಿ ಕಾವಲು ಕಾಯಬೇಕು. ನಮ್ಮ ರಾಜ್ಯದಲ್ಲಿ ಬೆಂಗಳೂರು(Bangalore) ಮತ್ತು ಮಂಗಳೂರು(Mangalore) ನಮ್ಮ ಪ್ರವೇಶ ಕೇಂದ್ರಗಳಲ್ಲಿ ನಾವು ಅಲ್ಲಿ ಕಟ್ಟುನಿಟ್ಟಾದ ನಿಗಾ ಇರಿಸುತ್ತಿದ್ದೇವೆ.

ಇದನ್ನೂ ನೋಡಿ : https://fb.watch/hHCQqU76v2/ ಮಾಧ್ಯಮಗಳು ಕೊರೊನಾ ವೈರಸ್ ವಿಚಾರವಾಗಿ ವರದಿ ಮಾಡುತ್ತಿರುವ ಕುರಿತು ಜನಸಾಮಾನ್ಯರಿಗಿರುವ ಅಭಿಪ್ರಾಯವೇನು?

ಅಂತರಾಷ್ಟ್ರೀಯ ಪ್ರಯಾಣಿಕರನ್ನು ಮೇಲ್ವಿಚಾರಣೆ ಮಾಡಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಪರಿಶೀಲಿಸಲು ನಾನು ಶೀಘ್ರದಲ್ಲೇ ಅಲ್ಲಿಗೆ ಭೇಟಿ ನೀಡುತ್ತೇನೆ ಎಂದು ಸಚಿವರು ಹೇಳಿದರು.

Exit mobile version