ಹದಿಹರೆಯದ ವಯಸ್ಸಿನಲ್ಲಿ ರಕ್ತದೊತ್ತಡ, ಹೃದಯದ ತೊಂದರೆ ಖಂಡಿತ: ಈ ಸಮಸ್ಯೆಗೆ ಕಾರಣವೇನು?

Health Tips: ಇತ್ತೀಚಿನ ದಿನಗಳಲ್ಲಿ ಆಹಾರದ ವ್ಯವಸ್ಥೆಯಿಂದ ಸಣ್ಣ (Health Problem in Teenagers) ಮಕ್ಕಳಲ್ಲೂ ಅಧಿಕ ರಕ್ತದೊತ್ತಡದ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದಲ್ಲದೆ

ಆರೋಗ್ಯದಲ್ಲೂ ಸಮಸ್ಯೆಯಾಗುತ್ತಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತಿದೆ.ಇದು ಸಾಮಾನ್ಯವಾಗಿ ಜೀವನಶೈಲಿಯ ಅಂಶಗಳಾದ ಸ್ಥೂಲಕಾಯತೆ, ಧೂಮಪಾನ

ಮತ್ತು ವ್ಯಾಯಾಮದ ಕೊರತೆಯಿಂದ ಅಧಿಕ ರಕ್ತದೊತ್ತಡವು ಹೃದಯದ ಆರೋಗ್ಯ (Health Problem in Teenagers) ಸಮಸ್ಯೆಗಳಿಗೆ ಕಾರಣ ವಾಗುತ್ತಿದೆ.ಹಾಗಾದರೆ

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ (American Heart Association) ​​ಪ್ರಕಾರ, ಪಾರ್ಶ್ವವಾಯು ಅಧಿಕ ರಕ್ತದೊತ್ತಡವು ಮತ್ತು ಇತರ ಹೃದಯ ಮತ್ತು ರಕ್ತನಾಳದ ಪರಿಸ್ಥಿತಿಗಳಿಗೆ

ಕಾರಣವಾಗಬಹುದು. ಗಾಜಿಯಾಬಾದ್‌ನ ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಹೃದಯರೋಗ ತಜ್ಞ ಡಾ.ಅಭಿಷೇಕ್ ಸಿಂಗ್ (Dr. Abhishek Singh) ಅವರು ಚಿಕ್ಕ ವಯಸ್ಸಿನಲ್ಲಿಯೇ ಅಧಿಕ

ಬಿಪಿ ಸಮಸ್ಯೆ ಏಕೆ ಕಾಣಿಸಿಕೊಳ್ಳುತ್ತದೆ ಮತ್ತು ಅದರಿಂದ ದೇಹದ ಮೇಲೆ ಆಗುವ ತೊಂದರೆ ಬಗ್ಗೆ ತಿಳಿದುಕೊಳ್ಳೋಣ.

ಅಧಿಕ ರಕ್ತದೊತ್ತಡವು ಹೃದಯದ ಮೇಲೆ ಪರಿಣಾಮಗಳನ್ನು ಉಂಟುಮಾಡುವುದಲ್ಲದೆ ದೇಹದ ಎಡ ಭಾಗದಕ್ಕೆ ಹೈಪರ್ಟ್ರೋಫಿಗೆ (Hypertrophy) ಕಾರಣವಾಗುವುದಲ್ಲದೆ ಹೃದಯದ ವೈಫಲ್ಯ ಮತ್ತು

ಹೃದಯದ ಬೇರೆ ಬೇರೆ ಭಾಗಗದಲ್ಲಿ ಅಪಾಯವನ್ನು ಹೆಚ್ಚಿಸುವ ಎಲ್ಲ ಲಕ್ಷಣಗಳನ್ನೂ ಇದು ಹೊಂದಿದೆ ಅದಕ್ಕಾಗಿ ರಕ್ತದೊತ್ತಡವನ್ನು ಯಾವಾಗಲೂ ನಿಯಂತ್ರಣ ದಲ್ಲಿಡುವುದು ಅಗತ್ಯವಾಗಿದೆ.

ಜೀವನಶೈಲಿಯ ಬದಲಾವಣೆಗಳಾದ ತೂಕ ನಷ್ಟ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯರೋಗಕ್ಕೆ ಆಗುವ ಅಪಾಯವನ್ನು

ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಅಲ್ಲದೆ ಅಧಿಕ ರಕ್ತದೊತ್ತಡವು ಚಿಕಿತ್ಸೆ ನೀಡಬಹುದಾದ ಒಂದು ಕಾಯಿಲೆ ಯಾಗಿದೆ.

ಸಮತೋಲಿತ ಆಹಾರ ಮತ್ತು ಮೊಬೈಲ್‌ (Mobile),ಕಂಪ್ಯೂಟರ್,ನೋಡುವುದನ್ನು ಸೀಮಿತಗೊಳಿಸುವಂತಹ ಆರೋಗ್ಯಕರ ಅಭ್ಯಾಸಗಳನ್ನು ಪ್ರೋತ್ಸಾಹಿಸುವುದು ಆರೋಗ್ಯಕರ ಜೀವನಶೈಲಿಯನ್ನು

ಉತ್ತೇಜಿಸಲು ಮತ್ತು ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡಲು ಸಹಾಯ ವಾಗುತ್ತದೆ.

ಅಮೇರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (Pediatrics) ಮಕ್ಕಳು ಮತ್ತು ಹದಿಹರೆಯದವರು ತಮ್ಮ ರಕ್ತದೊತ್ತಡವನ್ನು ವರ್ಷಕ್ಕೆ ಒಮ್ಮೆಯಾದರೂ ಪರೀಕ್ಷಿಸಬೇಕೆಂದು ಶಿಫಾರಸು ಮಾಡುತ್ತದೆ.

ಇದನ್ನು ಓದಿ: ಉಡುಪಿಯ ನಾಲ್ವರ ಹತ್ಯೆ ಪ್ರಕರಣ: ಒಬ್ಬಳ ಮೇಲಿನ ದ್ವೇಷ ನಾಲ್ವರ ಹತ್ಯೆಗೈದಿದ್ದ ಹಂತಕ ಮಾಜಿ ಪೊಲೀಸ್

Exit mobile version