ನೀವು ಯಾವತ್ತೂ ನಿಂತು ನೀರು ಕುಡಿಯಬೇಡಿ, ಕುಡಿದ್ರೆ ಕಾದಿದೆ ಅಪಾಯ !

ನಿಂತು ನೀರು ಕುಡಿಯಬೇಡಿ ಅಂತ ನಮಗೆ ನಮ್ಮ ಹಿರಿಯರು ಯಾವಾಗ್ಲೂ ಹೇಳ್ತಾರೆ. ಆದ್ರೆ ನಾವು ಅವರ ಮಾತಿಗೆ ಬೆಲೆ ಕೊಡದೆ ಹೆಚ್ಚಾಗಿ ನಿಂತೇ ನೀರು ಕುಡೀತೀವಿ. ಅಷ್ಟೇ ಅಲ್ಲ ಒಂದೇ ಸಲ ನೀರು ಕುಡಿಯಬಾರದು, ಗುಟುಕು ಗುಟುಕು ನೀರು ಕುಡಿಯ ಬೇಕು ಅಂತ ಸಲಹೆ ಕೊಡ್ತಾರೆ. ಆ ಸಲಹೆಯನ್ನೂ ಕೂಡ ನಾವು ನಿರ್ಲಕ್ಷಿಸುತ್ತೇವೆ, ಆದ್ರೆ ನಿಂತು ನೀರು ಕುಡಿದ್ರೆ ನಮ್ಮ ದೇಹದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ. ಅಲ್ಲದೆ ಗುಟುಕು ಗುಟುಕಾಗಿ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತೆ ಮತ್ತು ಉತ್ತಮ ಅರೋಗ್ಯ ಪಡೆಯಲು ಇದು ಸಹಕಾರಿಯಾಗುತ್ತದೆ .

ಹಾಗಾದ್ರೆ ನಿಂತು ನೀರು ಕುಡಿಯುವುದರಿಂದ ಆಗುವ ದುಷ್ಪರಿಣಾಮಗಳೇನು? ಹಾಗೂ ಕುಳಿತುಕೊಂಡು ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜ ಏನು? ದಿನಕ್ಕೆ, ಎಷ್ಟು ನೀರು ಕುಡಿಯಬೇಕು ಅನ್ನೋದ್ರ ಬಗ್ಗೆ ತಜ್ಞರು ಅತ್ಯಂತ ಉಪಯುಕ್ತ ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಅದನ್ನು ತಿಳಿಯೋಣ ಬನ್ನಿ

1.ಹೃದಯಾಘಾತಕ್ಕೆ ಕಾರಣವಾಗಬಹುದು !

ನಿಂತು ನೀರು ಕುಡಿಯುವಾಗ ಏಕಕಾಲದಲ್ಲಿ ನೀರು ನಾಳಗಳ ಮೂಲಕ ಪ್ರವೇಶಿಸುವುದರಿಂದ ಗಾಳಿ ಮತ್ತು ಆಹಾರದ ನಾಳಗಳಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಹೃದಯಾಘಾತ ಮತ್ತು ಶ್ವಾಶಕೋಶ ಸಮಸ್ಯೆಗಳಿಗೆ ನೇರ ಪರಿಣಾಮ ಬೀಳಬಹುದು

  1. ಅಜೀರ್ಣ ಸಮಸ್ಯೆ ಉಂಟಾಗುತ್ತೆ:

ನಿಂತು ನೀರು ಕುಡುಯುವುದರಿಂದ ಸ್ನಾಯುಗಳು ಮತ್ತು ನರಗಳು ಸಡಿಲಗೊಳ್ಳುವುದಿಲ್ಲ ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.

3.ಬಾಯಾರಿಕೆ ಕಮ್ಮಿಯಾಗುವುದಿಲ್ಲ
ನಿಂತು ನೀರು ಕುಡಿಯುವುದರಿಂದ ನಮಗೆ ಬಾಯಾರಿಕೆ ನಿವಾರಣೆ ಆಗುವುದಿಲ್ಲ ಬದಲಾಗಿ ನೀರು ಕುಡಿದಷ್ಟು ಬಾಯಾರಿಕೆ ಹೆಚ್ಚಾಗುತ್ತಲೇ ಹೋಗುತ್ತದೆ

4.ಸಂಧಿವಾತಕ್ಕೆ ಕಾರಣವಾಗಬಹುದು
ನಿಂತು ನೀರು ಕುಡಿಯುವಾಗ ದೇಹದ ದ್ರವಗಳು ಸಮತೋಲನದಲ್ಲಿ ಇರುವುದಿಲ್ಲ , ಇದು ಕೀಲುಗಳಲ್ಲಿ ದ್ರವಗಳ ಸಂಗ್ರಹಗೊಳ್ಳುವುದು ಮತ್ತು ಸಂಧಿವಾತಕ್ಕೆ ಕರಣವಾಗಲು ನೇರವಾಗಿ ಪರಿಣಾಮ ಬೀರುತ್ತದೆ

  1. ಮೂತ್ರಪಿಂಡಕ್ಕೆ ಮತ್ತು ಶ್ವಾಸಕೋಶ ಹಾನಿಯಾಗುವ ಸಂಭವ ಹೆಚ್ಚು
    ನಾವು ನಿಂತಿರುವ ಭಂಗಿಯಲ್ಲಿ ನೀರು ಕುಡಿಯುವುದರಿಂದ ಅದು ಸರಿಯಾಗಿ ಶೋಧನೆ ಆಗುವುದಿಲ್ಲ . ಯಾವುದೇ ಶೋದನೆಯಾಗದೆ ಹೊಟ್ಟೆಯೊಳಗೆ ನೇರವಾಗಿ ಮಾತ್ತು ವೇಗವಾಗಿ ಹೋಗುವುದರಿಂದ ಶ್ವಾಸಕೋಶ ಮತ್ತು ಮೂತ್ರಪಿಂಡದ ಕಾರ್ಯಗಳಿಗೆ ಅಡ್ಡಿ ಪಡಿಸುತ್ತದೆ ಇದರಿಂದ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ .

ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು
ಅತಿಯಾದರೆ ಅಮೃತವು ವಿಷ ಎನ್ನುವ ಮಾತಿದೆ ಅದೇ ತರಹ ನೀರು ಕೂಡ. ನೀರು ಅತಿಯಾದರು ಕೂಡ ವಿಷಕ್ಕೆ ಸಮಾನ ಅತಿಯಾದ ನೀರು ಕುಡಿಯುವೆಕೆಯಿಂದ ಕಿಡ್ನಿ ಸಮಸ್ಯೆ ಉಂಟಾಗಬಹುದು. ಹಾಗಾದರೆ ಎಷ್ಟು ನೀರು ಕುಡಿಯಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ ನೋಡಿ ನೀವು ದಿನಕ್ಕೆ ಆರು ಬಾರಿ ಮೂತ್ರ ವಿಸರ್ಜನೆ ಸರಿಯಾಗಿ ಮಾಡುತ್ತಿದ್ದೀರಿ ಎಂದರೆ ನೀವು ಕುಡಿಯುತ್ತಿರುವ ನೀರಿನ ಪ್ರಮಾಣ ಸಾಕು ಎಂದರ್ಥ. ಅದಲ್ಲದೆ ಯಾರೋ ಹೇಳಿದಂತೆ ಎಂಟು ಲೋಟ ಅಥವಾ 3 ಲೀಟರ್ ನೀರು, ದಿನನಿತ್ಯ ಎಲ್ಲರೂ ಕುಡಿಯಬೇಕೆಂದಿಲ್ಲ ಅವರವರ ದೇಹಕ್ಕೆ ಅನುಸಾರವಾಗಿ ನೀರನ್ನು ಕುಡಿಯುವುದು ಉತ್ತಮ.

ಮೊಹಮ್ಮದ್ ಶರೀಫ್

Exit mobile version