ಆಧುನಿಕ ಸೌಲಭ್ಯಗಳು ನಮ್ಮ ಜೀವನವನ್ನು ಸುಲಭಗೊಳಿಸುತ್ತಿದ್ದಂತೆಯೇ ಇನ್ನೊಂದೆಡೆ ನಮ್ಮ ಶರೀರಗಳನ್ನು ಶಿಥಿಲವಾಗಿಸುತ್ತಿದೆ. ಹಿಂದೆ ಸೌಲಭ್ಯಗಳು ಕಡಿಮೆಯಿದ್ದಾಗ(Health Tips for gastric) ದಿನನಿತ್ಯದ ಚಟುವಟಿಕೆಗಳ ಕಾರಣ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ಆರೋಗ್ಯ ವೃದ್ಧಿಸುತ್ತಿತ್ತು.
ಆದರೆ ಇಂದಿನ ದಿನಗಳಲ್ಲಿ ವ್ಯಾಯಾಮಕ್ಕೆಂದೇ ಹಣ ಕೊಟ್ಟು ಕೃತಕವಾಗಿ ದೇಹ ದಂಡಿಸುವಂತಾಗಿದೆ.
ನೈಸರ್ಗಿಕ ಆಹಾರಗಳ ಬದಲಾಗಿ ಸಿದ್ಧ ಆಹಾರಗಳು ಮನೆ ತಲುಪುತ್ತಿವೆ, ಪರಿಣಾಮವಾಗಿ ಇತ್ತೀಚೆಗೆ ಹಲವಾರು ಜಡತ್ವದ ಕಾರಣದ ತೊಂದರೆಗಳು ಸಮಾಜವನ್ನು ಕಾಡುತ್ತಿದೆ.
ಸ್ಥೂಲಕಾಯ, ಹೆಚ್ಚಿನ ಹೃದಯದೊತ್ತಡ, ಶರೀರದಲ್ಲಿ ಶಕ್ತಿ ಇಲ್ಲದೇ ಇರುವುದು, ಅಜೀರ್ಣ, ಚಿಕ್ಕ ವಯಸ್ಸಿನಲ್ಲಿಯೇ ವೃದ್ಧಾಪ್ಯದ ಕುರುಹುಗಳು ಮೊದಲಾದವು.
ಇದರಲ್ಲಿ ಆಹಾರ ಸೇವನೆಯಲ್ಲಿ ಆಗುವ ಏರುಪೇರಿನ ಮೂಲಕ ಕಾಡುವ ಅಜೀರ್ಣ, ಹೊಟ್ಟೆಯುಬ್ಬರ, ಹುಳಿತೇಗು, ಹೊಟ್ಟೆಯಲ್ಲಿ ಉರಿ, ಮಲಬದ್ಧತೆ, ವಾಯುಪ್ರಕೋಪ, ಕರುಳಿನಲ್ಲಿ ಹುಣ್ಣು ಮೊದಲಾದವುಗಳಿಗೆ ಆಹ್ವಾನ ನೀಡುತ್ತದೆ.
ಇಂತಹ ಅಜೀರ್ಣ ಸಮಸ್ಯೆಗಳಿಗೆ ಇಲ್ಲಿದೆ ಸರಳ ಪರಿಹಾರೋಪಾಯಗಳು:
ಒಂದು ಹಿಡಿಯಷ್ಟು ದನಿಯ ಕಾಳುಗಳನ್ನು ದಪ್ಪತಳದ ಬಾಣಲೆಯಲ್ಲಿ ಚಿಕ್ಕ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾಗುತ್ತಲೇ ಬಾಣಲೆಯಿಂದ ಒಂದು ತಟ್ಟೆಯಲ್ಲಿ ಹರಡಿ.
ಇದನ್ನು ಕೊಂಚ ಜಜ್ಜಿ ಒಂದು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಊಟವಾದ ಬಳಿಕ ಮಜ್ಜಿಗೆಯಲ್ಲಿ ಈ ಪುಡಿಯನ್ನು ಸೇರಿಸಿ ಕುಡಿದರೆ ಹೊಟ್ಟೆಯುರಿ, ಉಬ್ಬರ ಕಡಿಮೆಯಾಗುತ್ತದೆ.
ಹೊಟ್ಟೆಯುಬ್ಬರ ಮತ್ತು ಉರಿ ಜಾಸ್ತಿ ಇದ್ದರೆ ಕೆಲವು ಏಲಕ್ಕಿ, ಲವಂಗ ಮತ್ತು ಹಸಿಶುಂಠಿಯ ಚಿಕ್ಕ ತುಂಡುಗಳನ್ನು ಸೇರಿಸಿ ನಯವಾಗಿ ಅರೆದು ಮಜ್ಜಿಗೆಗೆ ಸೇರಿಸಿ ಕುಡಿಯಿರಿ.
ಆದರೆ ಇದು ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಮಾತ್ರ, ಬೆಳಗ್ಗಿನ ಹೊತ್ತಿಗೆ ಉತ್ತಮವಲ್ಲ.
ನಿಮಗೆ ತಿಂದ ಆಹಾರವನ್ನುಜೀರ್ಣಿಸಿಕೊಳ್ಳಲು ಕಷ್ಟವಾದರೆ ಬಿಸಿ ನೀರನ್ನು ಕುಡಿಯಿರಿ.
ಪ್ರತಿದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ರಸ ಉತ್ಪತ್ತಿಯಾಗುವುದನ್ನು ತಡೆಯುತ್ತದೆ.
ಕೊಬ್ಬಿನಂಶ ಹೆಚ್ಚಿರುವ ಆಹಾರಗಳು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಆ ರೀತಿಯ ಆಹಾರ ತೆಗೆದುಕೊಂಡರೆ ಅಜೀರ್ಣ ತೊಂದರೆ ಪ್ರಾರಂಭವಾಗುತ್ತದೆ.
https://vijayatimes.com/second-world-war-rare-photo/
ಕೊಬ್ಬಿನ ಆಹಾರಗಳು ದೇಹಕ್ಕೆ ಅಗತ್ಯ ಕೂಡ ಆದ್ದರಿಂದ ಸಂಪೂರ್ಣವಾಗಿ ಬಿಟ್ಟು ಬಿಡಬೇಡಿ. ಬೇರೆ ಆರೋಗ್ಯಯುತ ಆಹಾರದಲ್ಲಿರುವ ಕೊಬ್ಬನ್ನು ಸೇವಿಸಿದಲ್ಲಿ ಯಾವುದೇ ತೊಂದರೆ ಇಲ್ಲ.
ಸಾಮಾನ್ಯವಾಗಿ ಫಾಸ್ಟ್ ಫುಡ್ನಲ್ಲಿ ಬೊಜ್ಜಿನಂಶವಿರುವ ಆಹಾರದಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಸೇರಿಕೊಳ್ಳುವ ಎಣ್ಣೆ ಗ್ಯಾಸ್ ಉತ್ಪತ್ತಿ ಮಾಡಿ ತೇಗು ಉಂಟಾಗಿ ಅಜೀರ್ಣತೆಯಿಂದ ಬಳಲುವಂತಾಗುತ್ತದೆ.
ಆದ್ದರಿಂದ ಫಾಸ್ಟ್ ಫುಡ್ ಗಳಾದ ಬರ್ಗರ್, ಫ್ರೆಂಚ್ ಫ್ರೈ, ಆಲೂ ಚಿಪ್ಸ್, ಪಕೋಡಾ, ಬೆಣ್ಣೆ, ಹುರಿದ ಮಾಂಸ ಇವುಗಳಿಂದ ದೂರವಿರುವುದು ಒಳಿತು.
ಒಂದು ಲೋಟ ನೀರು ಕುದಿಸಿ ಅರ್ಧ ತಣಿದ ಮೇಲೆ ಅರ್ಧ ಟೀ ಚಮಚ ಜೇನು ಮತ್ತು ದೊಡ್ಡ ಲಿಂಬೆಯಾದರೆ ಅರ್ಧ ಭಾಗ, ಪುಟಾಣಿ ಲಿಂಬೆಯಾದರೆ ಇಡೀ ಒಂದು ಲಿಂಬೆ ರಸ ಹಿಂಡಿ ಕಲಕಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬೇಕು.
ಅಂದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಅರ್ಧ ಗಂಟೆ ಮೊದಲು ಸೇವಿಸಿದರೆ ಬಳಿಕ ಸೇವಿಸುವ ಆಹಾರದಿಂದ ಅಜೀರ್ಣವಾಗುವ ಸಂಭವ ತಪ್ಪುತ್ತದೆ. ಈ ಮನೆ ಮದ್ದುಗಳನ್ನು ಬಳಸುವ ಮೂಲಕ ನಿಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬಹುದು.
-ಪವಿತ್ರ