Dandruff : ತಲೆಹೊಟ್ಟಿನ ಸಮಸ್ಯೆಯಿಂದ ತಲೆಬಿಸಿಯಾಗಿದ್ದರೆ, ಇಲ್ಲಿದೆ ಸರಳ ಮನೆಮದ್ದು

Hair

Health : ತಲೆಹೊಟ್ಟು (Dandruff) ವೈದ್ಯಕೀಯ ಸಮಸ್ಯೆಯಾಗಿದ್ದು, ಇದು ವಿಶ್ವದಾದ್ಯಂತ ಅರ್ಧದಷ್ಟು ವಯಸ್ಕ ಜನಸಂಖ್ಯೆಗೆ ಕಾಣಿಸಿಕೊಳ್ಳುತ್ತದೆ. ನೀವು ತಲೆಹೊಟ್ಟು ನಿವಾರಣೆಗೆ ಮನೆಮದ್ದುಗಳನ್ನು (HomeRemedies) ಹುಡುಕುತ್ತಿದ್ದರೆ, ಇಲ್ಲಿದೆ ಕೆಲವು ಪರಿಣಾಮಕಾರಿ ಉಪಾಯಗಳು.


ಕೂದಲಿಗೆ ಎಣ್ಣೆ ಹಾಕಿ ದೀರ್ಘಕಾಲ ಇರಿಸಿಕೊಳ್ಳಬೇಡಿ : ತಲೆಹೊಟ್ಟು ಇರುವ ಕೂದಲಿಗೆ ಎಣ್ಣೆ ಹಾಕುವುದು ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ.

ಆದರೆ ಚರ್ಮರೋಗ ತಜ್ಞರ ಪ್ರಕಾರ ತೈಲವನ್ನು ತಲೆ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ಇನ್ನಷ್ಟು ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ : https://vijayatimes.com/more-pathole-in-bengaluru-roads/

ತಲೆಹೊಟ್ಟಿಗೆ ಕಾರಣವಾಗುವ ಮಲಾಸೆಜಿಯಾವು, ನೀವು ಕೂದಲಿಗೆ ಎಣ್ಣೆ ಹಾಕಿದ ವೇಳೆಯಲ್ಲಿ ನಿಮ್ಮ ತಲೆಹೊಟ್ಟು ಸ್ಥಿತಿಯನ್ನು ಉಲ್ಬಣಗೊಳಿಸುವುದಕ್ಕೆ ಹೆಚ್ಚು ಕಾರಣವಾಗುತ್ತದೆ.

ಇದಲ್ಲದೇ ನಿಮ್ಮ ನೆತ್ತಿಯ ಮೇಲೆ ಹೆಚ್ಚು ಸಮಯದವರೆಗೆ ಎಣ್ಣೆ ಇರುವಂತೆ ನೋಡಿಕೊಂಡರೆ ನಿಮ್ಮ ತಲೆ ಹೊಟ್ಟು ಹೆಚ್ಚಾಗುತ್ತದೆ ಎನ್ನುತ್ತಾರೆ.


ಟೀ ಟ್ರೀ ಆಯಿಲ್ : ಎಲ್ಲಾ ಮೊಡವೆ-ವಿರೋಧಿ ಮತ್ತು ಶಿಲೀಂಧ್ರ-ವಿರೋಧಿ ಔಷಧಿಯಾಗಿ ಚಹಾ ಮರದ(Tea Tree Oil) ಎಣ್ಣೆಯನ್ನು ಬಳಕೆ ಮಾಡಲಾಗುತ್ತದೆ. ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡುವ ಅಸಾಧಾರಣ ಶಕ್ತಿಯನ್ನು ಇದು ಹೊಂದಿದೆ. ನಿಮ್ಮ ಶಾಂಪೂಗೆ ಒಂದು ಹನಿ ಅಥವಾ ಎರಡು ಹನಿ ಟೀ ಟ್ರೀ ಎಣ್ಣೆಯನ್ನು ಸೇರಿಸಿ ಮತ್ತು ಸಾಮಾನ್ಯವಾಗಿ ತೊಳೆಯಿರಿ.

https://youtu.be/Ttl6Gcp-9qs ಡೆಡ್ಲಿ ಸಾಸ್ !


ಲೋಳೆಸರ : ಲೋಳೆಸರ(Aloevera) ಶಿಲೀಂಧ್ರ-ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ನೆತ್ತಿಯಲ್ಲಿ ಹಚ್ಚಿ ನಂತರ ಔಷಧಿಯ ಗುಣವನ್ನು ಹೊಂದಿದೆ. ನೆತ್ತಿಯನ್ನು ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ.


ಅಡಿಗೆ ಸೋಡಾ : ಅಡಿಗೆ ಸೋಡಾ(Baking Soda), ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಡರ್ಮಟಾಲಜಿಸ್ಟ್ ಗಳ ಪ್ರಕಾರ ಬೇಕಿಂಗ್ ಸೋಡಾ ಶಿಲೀಂಧ್ರ-ವಿರೋಧಿ ಗುಣಲಕ್ಷಣಗಳ ಜೊತೆಗೆ ನೆತ್ತಿಯನ್ನು ಶಮನಗೊಳಿಸುತ್ತದೆ ಮತ್ತು,

ತುರಿಕೆ ಕಡಿಮೆ ಮಾಡುತ್ತದೆ. ಕೂದಲನ್ನು ತೊಳೆಯುವಾಗ ನಿಮ್ಮ ಶಾಂಪೂಗೆ ಸ್ವಲ್ಪ ಅಡಿಗೆ ಸೋಡಾವನ್ನು ಸೇರಿಸಬಹುದಾಗಿದೆ.

ಇದನ್ನೂ ಓದಿ : https://vijayatimes.com/trustee-for-pm-cares-fund/


ಬೇವು : ಬ್ಯಾಕ್ಟೀರಿಯಾ(Bacteria) ವಿರೋಧಿ ಮತ್ತು ಶಿಲೀಂಧ್ರನಾಶಕ ಗುಣಗಳಿಂದಾಗಿ ಬೇವಿನ ಸಾರವು ಬಹುತೇಕ ಎಲ್ಲಾ ಚರ್ಮದ ಔಷಧಿಗಳಲ್ಲಿ,

ವಹಿಸುವ ಪಾತ್ರದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ತಲೆಹೊಟ್ಟು ಹೆಚ್ಚಾಗಿ ನೆತ್ತಿಯ ಶಿಲೀಂಧ್ರಗಳಿಂದಲೇ ಉಂಟಾಗುತ್ತದೆ. ಇದನ್ನು ನಾಶ ಮಾಡಲು ಬೇವನ್ನು ಬಳಸಬಹುದು.

Exit mobile version