ಆರೋಗ್ಯ ಸಲಹೆಗಳು

ಮುಟ್ಟಿನ ಕಪ್ ಅಥವಾ ಮೆನ್ಸ್ಟ್ರುಯಲ್ ಕಪ್: ಬಳಕೆ, ಉಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು ?

Health : ಏನಿದು ಮುಟ್ಟಿನ ಕಪ್ ಅಥವಾ ಕಾoಫಿ ಕಪ್ ಗಳು? ಇದರ ಬಳಕೆ ಹೇಗೆ? ಇದರಿಂದಾಗುವ ಪ್ರಯೋಜನ ಏನು? ಇದರ ಬಳಕೆಯಿಂದ ಸೈಡ್‌ ಎಫೆಕ್ಟ್‌ ಇದೆಯಾ? ಇದನ್ನು ಯಾರ್ಯಾರು ಬಳಸಬಹುದು? ಹೀಗೆ ಹತ್ತು (health tips for women) ಹಲವು ಪ್ರಶ್ನೆಗಳು ಈ ಮುಟ್ಟಿನ ಕಪ್‌ ಬಗ್ಗೆ ಕೇಳಿ ಬರುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.


ಇತ್ತೀಚೆಗಷ್ಟೇ ವಿಶ್ವಾದ್ಯಂತ ಚಾಲ್ತಿಯಲ್ಲಿರುವಂತಹ ಕಪ್ ಇದು.. ಸಾವಿರಾರು ಮಹಿಳೆಯರ ತಿಂಗಳ ಸಮಸ್ಯೆಗೆ ಮುಕ್ತಿ ಕೊಡಲೆಂದೇ ಈ ಮೆನ್ಸ್ಟ್ರುಯಲ್ ಕಪ್ಪನ್ನು (Menstrual cup) ಕಂಡುಹಿಡಿದಿದ್ದಾರೆ.

ಹಳೆಯ ಕಾಲದ ಸಾಂಪ್ರದಾಯಿಕ ಬಟ್ಟೆ ಪದ್ಧತಿ ತೊಲಗಿ ಸ್ಯಾನಿಟರಿ ಪ್ಯಾಡ್ ಗಳ ಬಳಕೆ ಇದ್ದರು…. ಮಹಿಳೆಯರು ಮುಟ್ಟಿನ ಸಮಯದಲ್ಲಿ ತೀವ್ರತೆರನಾದ ನೋವು, ತೊಂದರೆ, ಮುಜುಗರಕ್ಕೆ ಒಳಗಾಗುತ್ತಿದ್ದರು.

ನಂತರ ಆ ಪ್ಯಾಡ್ ಗಳನ್ನು ವಿಲೇವಾರಿ ಮಾಡುವುದು ಅಥವಾ ಬಟ್ಟೆಯನ್ನು ಶುಚಿಗೊಳಿಸುವುದು ಒಂದು ರೀತಿಯ ಹಿಂಸೆಯೇ ಸರಿ,

ಇದೆಲ್ಲ ಕಾರಣಗಳಿಂದಲೇ ಮಹಿಳೆಯರು ನಿಧಾನವಾಗಿ ಕಾಂಫೀ ಕಪ್ ಅಥವಾ ಮೆನ್ಸ್ಟ್ರುಯಲ್ ಕಪ್ ನತ್ತ ವಾಲುತ್ತಿದ್ದಾರೆ.


ಈ ಮುಟ್ಟಿನ ಕಪ್ಪನ್ನು ಮುಟ್ಟಿನ ಸಮಯದಲ್ಲಿ ಜನನಾಂಗದೊಳಗೆ ಸೇರಿಸುತ್ತಾರೆ ಆ ಕಪ್ನಲ್ಲಿ ಮುಟ್ಟಿನ (health tips for women) ಸಮಯದಲ್ಲಾಗುವ ರಕ್ತಶೇಖರಣೆಗೊಳ್ಳುತ್ತದೆ.

ಇದನ್ನೂ ಓದಿ : https://vijayatimes.com/appreciation-for-natu-song/

ಇದರ ಮೂಲ ಉದ್ದೇಶ ಬಟ್ಟೆಗಳ ಮೇಲೆ ಸೋರಿಕೆಯಾಗುವುದನ್ನು ತಡೆಯುವುದು ಆ ಸಮಯದಲ್ಲಿ ಮಾಮೂಲಿನಂತೆ ಇರುವುದು,

ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುವುದು, ಬೇರೆ ದಿನಗಳಂತೆ ಈ ಮುಟ್ಟಿನ ಸಮಯದಲ್ಲೂ ಹೆಣ್ಣುಮಕ್ಕಳನ್ನು ಉತ್ಸಾಹಿತರಾಗಿರುವಂತೆ ನೋಡಿಕೊಳ್ಳುತ್ತದೆ.


ಸಾಮಾನ್ಯವಾಗಿ ವೈದ್ಯಕೀಯ ದರ್ಜೆಯ ಸಿಲಿಕಾನ್ (Silicon) ನಿಂದ ತಯಾರಿಸಲಾಗುತ್ತದೆ ಇದು ಗಂಟೆ ಆಕಾರದಲ್ಲಿರುತ್ತದೆ.

ತುದಿ ಭಾಗ ಸ್ವಲ್ಪ ಗಟ್ಟಿಯಾಗಿರುತ್ತದೆ. ಈ ಭಾಗದಿಂದ ಕಪ್ಪನ್ನು ಅಳವಡಿಸಲು ಮತ್ತು ತೆಗೆಯಲು ಸುಲಭವಾಗುವಂತೆ ತಯಾರಿಸಲಾಗಿದೆ.


ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೊಮ್ಮೆ ಮುಟ್ಟಿನ ರಕ್ತದ ಪ್ರಮಾಣವನ್ನು ಅನುಕರಿಸಿ ಕಪ್ಪನ್ನು ತೆಗೆದು ಖಾಲಿ ಮಾಡಿ ಶುದ್ಧೀಕರಿಸಿ ಮತ್ತೆ ಮರುಬಳಕೆ ಮಾಡುತ್ತಾರೆ.

ಮಾಮೂಲಿ ಬಟ್ಟೆಗಳಂತೆ ಅಥವಾ ಪ್ಯಾಡ್ಗಳಂತೆ ದ್ರವವನ್ನು ಹೀರುವ ಬದಲು ಇದು ಸಂಗ್ರಹಿಸುತ್ತದೆ.

ಇದರಿಂದ ಪರಿಸರ ನೈರ್ಮಲ್ಯವನ್ನು ತಡೆಗಟ್ಟಬಹುದು ಈ ಒಂದು ಕಪ್ಪನ್ನು ಸುಮಾರು ಹತ್ತು ವರ್ಷಗಳವರೆಗೆ ಮರುಬಳಕೆ ಮಾಡಬಹುದು ಇದು ಪರಿಸರ ಸ್ನೇಹಿ ಕೂಡ ಹೌದು.

ಬಳಸುವ ವಿಧಾನ ಹೇಗೆ? : ಈ ಕಪ್ಗಳು ಮೂರು ವಿಧದಲ್ಲಿ ಬರುತ್ತದೆ, ಮೊದಲನೆಯದು ಆಗತಾನೆ ಋತುಮತಿಯಾದಂತಹ ಚಿಕ್ಕ ಪ್ರಾಯದ ಹೆಣ್ಣು ಮಕ್ಕಳಿಗೆ,

ಎರಡನೆಯದು ಮದುವೆಗಿಂತ ಮುಂಚೆ or ಮಕ್ಕಳಾಗುವ ಮುಂಚಿನ ಹೆಣ್ಣುಮಕ್ಕಳಿಗೆ, ಮೂರನೆಯ ವರ್ಗ ಮಕ್ಕಳಾದ ನಂತರದ ಹೆಣ್ಣುಮಕ್ಕಳಿಗೆ ರಕ್ತಸ್ರಾವಕ್ಕೆ ತಕ್ಕಂತೆ ಕಪ್ಗಳನ್ನು ಬಳಸಬಹುದು.

ಕಪ್ಪನ್ನು ಜನನಾಂಗದೊಳಗೆ ಸೇರಿಸುವ ಮೊದಲು ಬಿಸಿ ನೀರಿನಲ್ಲಿ ತೊಳೆದು, ನಂತರ ಸಾಬೂನಿನಿಂದ ಕೈ ತೊಳೆದು ಈ ಕಪ್ಪನ್ನು ಒಂದು ಶುದ್ಧ ಬಟ್ಟೆಯಿಂದ ಒರೆಸಿ ಕಪ್ಪನ್ನು L ಆಕಾರದಲ್ಲಿ ತಿರುಚಿ ಜನನಾಂಗದಳಕ್ಕೆ ಸೇರಿಸಬೇಕು.

ಅದು ಒಳಗೆ ಹೋದಾಗ ಟಪ್ ಎಂಬ ಶಬ್ದದ ಅರಿವಾದಾಗ ಅದು ಗರ್ಭಕಂಠಕ್ಕೆ ಸರಿಯಾಗಿ ಕೂತಿದೆ ಎಂದೇ ಅರ್ಥ.

ಇದನ್ನೂ ಓದಿ : https://vijayatimes.com/oscar-award-list/

ಸಣ್ಣ ವಯಸ್ಸಿಗೆ ಹೆಣ್ಣು ಮಕ್ಕಳಿಗೆ ಋತುಚಕ್ರ ಶುರುವಾದರೆ ಆ ಮಕ್ಕಳ ಮತ್ತು ಅವರ ತಾಯಿಂದಿರ ಕಷ್ಟ ಹೇಳತೀರದಾಗಿರುತ್ತದೆ.

ಆದರೆ ಈ ಕಪ್ ನಿಂದ ಅಂತಹ ಕಿರಿಕಿರಿಗಳನ್ನು ದೂರವಿರಿಸಬಹುದಾಗಿದೆ. ಇದರ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಸ್ಕೂಲು ಕಾಲೇಜು ಇತರೆ ಸಂಘ-ಸಂಸ್ಥೆಗಳಲ್ಲಿ ಅನೇಕ ಹೆಣ್ಣು ಮಕ್ಕಳು ಸ್ವಯಂಸೇವಕರಾಗಿ,

ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಎನ್‌ಜಿಒ (NGO) ದಲ್ಲಿನ ಹೆಣ್ಣು ಮಕ್ಕಳು….. ಚಿಕ್ಕ ಪ್ರಾಯದ ಹೆಣ್ಣು ಮಕ್ಕಳಿಗಾಗಿಯೇ ಈ ಕಪ್ ನ ಬಳಕೆಯ ಮತ್ತು ಅದರ ಉಪಯೋಗದ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ಹಲವು ಕಾರ್ಯಗಾರಗಳನ್ನು ನಡೆಸುತ್ತಲೇ ಇವೆ.

ಪರಿಸರ ಸ್ನೇಹಿ ಪ್ರಾಡಕ್ಟ್ ಗಳನ್ನು ಬಳಸುವಂತಹ ಜೊತೆಗೆ ಅದನ್ನು ಯಾವ ರೀತಿಯಾಗಿ ಬಳಸಬಹುದು ಅನ್ನೋದನ್ನು ತಿಳಿ ಹೇಳುತ್ತಾ ಬಂದಿದ್ದಾರೆ.

ಇದನ್ನೂ ಓದಿ : https://vijayatimes.com/h3n2-virus/

ಅಲ್ಲದೆ ಸ್ತ್ರೀ ವೈದ್ಯರು ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಇದರಿಂದಾಗಿ ಎಷ್ಟು ಹೆಣ್ಣು ಮಕ್ಕಳು ಮುಟ್ಟನ್ನು ಶಾಪವೆಂದು ಪರಿಗಣಿಸಿ ಆ

ನೋವನ್ನು ತಡೆಯಲು ಒದ್ದಾಡುತ್ತಿದ್ದಾಗ ಇಂತಹ ಸ್ತ್ರೀರೋಗ ತಜ್ಞರು ಹಾಗೂ ವೈದ್ಯಕೀಯ ಸಲಹೆ ನೀಡುವವರಿಂದ ಮುಟ್ಟನ್ನು ಕೂಡ ಒಂದು ದೈವಿಕ ವರವೆಂದು ಪರಿಗಣಿಸುವಂತಹ ಮನಸ್ಥಿತಿಗೆ ನಮ್ಮ ಹೆಣ್ಣು ಮಕ್ಕಳು ತಲುಪಿದ್ದಾರೆ.

Exit mobile version