ಔಷದೀಯ ಗುಣಗಳ ಆಗರ ಈ ನುಗ್ಗೆ ; ನುಗ್ಗೆಯ ಸೇವನೆ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ?

ನುಗ್ಗೆಕಾಯಿಯ(Drum Stick) ಸ್ವಾದ ಸವಿದವರಿಗೇ ಗೊತ್ತು, ದಕ್ಷಿಣ ಭಾರತದ ಅಡಿಗೆಯಲ್ಲಿ ನುಗ್ಗೆಕಾಯಿ ವಿಶೇಷ ಸ್ಥಾನವನ್ನು ಹೊಂದಿದೆ(Health Tips Of Drum stick). ನುಗ್ಗೆಕಾಯಿ ತೆಳ್ಳಗೆ ಉದ್ದವಾಗಿದ್ದು, ಡೊಳ್ಳು ಬಡಿಯುವ ಕೋಲಿನ ಆಕಾರ ಇರುವುದರಿಂದ ಆಂಗ್ಲ ಭಾಷೆಯಲ್ಲಿ ‘ಡ್ರಮಸ್ಟಿಕ್’ ಎಂದು ಕರೆಯುತ್ತಾರೆ.

Drumstick

ನುಗ್ಗೆಯು ಮೊರಿಂಗೆಯೆ ಕುಟುಂಬಕ್ಕೆ ಸೇರಿದ್ದು, ‘ಮೊರಿಂಗಾ ಓಲಿಫೇರಾ’ ಇದರ ಸಸ್ಯನಾಮ. ಅತೀ ಪುಷ್ಟಿದಾಯಿಕ ತರಕಾರಿಗಳಲ್ಲಿ ನುಗ್ಗೆ ಪ್ರಧಾನವಾಗಿದೆ, ನುಗ್ಗೆಕಾಯಿ ವ್ಯಾಪಕವಾಗಿ ಸಾಂಬಾರಿನಲ್ಲಿ ಬಳಸಲಾಗುತ್ತದೆ. ಇನ್ನು, ಕೆಲವು ಭಾಗಗಳಲ್ಲಿ ನುಗ್ಗೆ ಉಪ್ಪಿನಕಾಯಿ ತಯಾರಿಸಲಾಗುತ್ತದೆ.

ಇದನ್ನೂ ಓದಿ : https://vijayatimes.com/our-party-has-more-democracy/

ಕಾಯಿ ಮಾತ್ರವಲ್ಲದೇ ನುಗ್ಗೆಯ ಹೂ, ಎಲೆಗಳು ಮತ್ತು ಬೀಜಗಳು ತಿನ್ನಲು ಯೋಗ್ಯವಾಗಿರುತ್ತವೆ, ಕೆಲವು ಭಾಗಗಳಲ್ಲಿ ಅಡುಗೆಗೂ ಬಳಸುತ್ತಾರೆ.

ಹಾಗೆಯೇ ಕ್ಯಾಲ್ಸಿಯಂ ಕೂಡ ನುಗ್ಗೆಯಲ್ಲಿ ಹೇರಳವಾಗಿದೆ, ಪೋಷಕಾಂಶ ಭರಿತವಾದ ನುಗ್ಗೆ ಮತ್ತು ನುಗ್ಗೆಸೊಪ್ಪು ಎಲ್ಲಾ ಕಾಲದಲ್ಲಿಯೂ ನಿರಂತರವಾಗಿ ದೊರೆಯುವ ತರಕಾರಿಯಾಗಿದೆ.

Drumstick

ಜೀವಸತ್ವ ‘ಎ’ ಕೊರತೆಯಿಂದಾಗುವ ಇರುಳುಗಣ್ಣು, ಕ್ಯಾಟರಾಕ್ಟ್ ಸಮಸ್ಯೆ ಹಾಗೂ ಇತರೆ ಅನೇಕ ತೊಂದರೆಗಳಿಗೆ, ಸುಲಭವಾಗಿ ದೊರಕುವ ನುಗ್ಗೆ ಸೊಪ್ಪು ರಾಮಬಾಣವಾಗಬಲ್ಲದು.

ಅನೇಕ ಸಂಶೋಧಕರ ಪ್ರಕಾರ, ನುಗ್ಗೆಯು ಆಕ್ಸಿಡೀಕರಣ ಮತ್ತು ಹಾನಿಯಿಂದ ಯಕೃತ್ತನ್ನು ಸಕ್ರಿಯವಾಗಿ ರಕ್ಷಿಸಬಲ್ಲ ಒಂದು ಆಹಾರವಾಗಿದೆ.

ನುಗ್ಗೆ ಸಾರವು ಪಿತ್ತಜನಕಾಂಗಕ್ಕೆ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ ಮತ್ತು ಚೇತರಿಕೆಗೆ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.

ನುಗ್ಗೆಯಲ್ಲಿ ಪಾಲಿಫೀನಾಲ್ಸ್‍ಗಳು ಅಧಿಕವಾಗಿದ್ದು, ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವುದರಿಂದ ಹೃದಯ ಸಂಬಂಧಿ ರೋಗಗಳು(Heart Related Issues) ಮತ್ತು ಕ್ಯಾನ್ಸರ್(Cancer) ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

ಇದನ್ನೂ ಓದಿ : https://vijayatimes.com/human-rights-situation-in-xinjiang-region/

ನುಗ್ಗೆಯು ವಿವಿಧ ಭಾಗಗಳು ಸೋಂಕು, ಮಲಬದ್ಧತೆ, ಸಂಧಿವಾತ, ಕಫಾ, ಜೀರ್ಣಾಂಗಗಳ ತೊಂದರೆ ಮೂತ್ರಕೋಶ ತೊಂದರೆ, ಲೈಂಗಿಕ ಸಮಸ್ಯೆ ಇತ್ಯಾದಿಗಳಲ್ಲಿ ಬಳಸುತ್ತಾರೆ. ಸೌಂದರ್ಯ ವರ್ಧಕಗಳಲ್ಲಿಯೂ ಕೂಡಾ ನುಗ್ಗೆಯನ್ನು ಉಪಯೋಗಿಸಲಾಗುತ್ತದೆ.


ಇನ್ನು, ವೈದ್ಯಕೀಯ ತಜ್ಞರ ಪ್ರಕಾರ, ಡ್ರಮ್ ಸ್ಟಿಕ್ಗಳ ಔಷಧೀಯ ಗುಣಗಳೂ ಸಹ ಕೆಲವು ಕ್ಯಾನ್ಸರ್ ಗಳನ್ನು ಬರದಂತೆ ತಡೆಗಟ್ಟುತ್ತದೆ ಮತ್ತು ಅವುಗಳಿಗೆ ಚಿಕಿತ್ಸೆಯನ್ನು ಸಹ ನೀಡಬಹುದು.

ಇದನ್ನೂ ಓದಿ : https://vijayatimes.com/we-wont-worship-hindu-gods/

ನುಗ್ಗೆಯಲ್ಲಿ ನಿಝಿಮಿಸಿನ್ ಎಂಬ ಉಪಕಾರಿ ಸಂಯುಕ್ತವೂ ಇದ್ದು, ಇದು ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳ ಬೆಳವಣಿಗೆಯನ್ನು ಸಹ ನಿಗ್ರಹಿಸುತ್ತದೆ. ಮಧುಮೇಹ ರೋಗಿಗಳಿಗೆ ಕೂಡ ನುಗ್ಗೆ ಪ್ರಯೋಜನಕಾರಿಯಾಗಿದೆ.

ಏಕೆಂದರೆ ಇದು ದೇಹದಲ್ಲಿ ರಕ್ತದ ಗ್ಲೂಕೋಸ್ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ ಹಾಗೂ ಮಧುಮೇಹದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುತ್ತದೆ.

Drumstick


ಕೂದಲು ಉದುರುವಿಕೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ನುಗ್ಗೆಕಾಯಿ ನಿಮಗೆ ಈ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಮೊದಲು ಎಲೆಗಳನ್ನು ಒಣಗಿಸಿ ನಂತರ ಅದನ್ನು ಪುಡಿ ಮಾಡಿದ ನಂತರ, ಅದರ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ.

https://youtu.be/aVfgUoyykm4

ನೀವು ನೆಲ್ಲಿಕಾಯಿ ಪುಡಿಯನ್ನು ಮೊಸರಿನೊಂದಿಗೆ ನುಗ್ಗೆಕಾಯಿ ಪೇಸ್ಟ್‌ನಲ್ಲಿ ಬೆರೆಸಿದರೆ ಅದು ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ.

ಇದನ್ನೂ ಓದಿ : https://vijayatimes.com/our-party-has-more-democracy/

ಈಗ ತಯಾರಿಸಿದ ಪೇಸ್ಟ್ ಅನ್ನು ಕೂದಲಿಗೆ 30 ನಿಮಿಷಗಳ ಕಾಲ ಹಚ್ಚಿ ಮತ್ತು ಲಘುವಾಗಿ ಮಸಾಜ್ ಮಾಡಿ. ಅದೇ ರೀತಿ, ನುಗ್ಗೆಕಾಯಿ ಬೀಜದ ಎಣ್ಣೆಯು ಒಣ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅವು ಫೋಲಿಕ್ ಆಮ್ಲ ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿವೆ, ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ.
Exit mobile version