ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ವರದಾನ ನಾವು ಪ್ರತಿದಿನ ಬಳಸುವ ಪನೀರ್

Benefits of Paneer: ನಾವು ಇಷ್ಟಪಟ್ಟು ಸೇವಿಸುವ ಬಗೆ ಬಗೆಯ ರುಚಿಕರವಾದ ಆಹಾರಗಳಲ್ಲಿ ತಪ್ಪದೇ ಪನೀರ್ (Paneer) ಬಳಕೆ ಮಾಡುತ್ತೇವೆ.

ಹಾಲಿನಿಂದ ತಯಾರಾದ ಈ ಉತ್ಪನವು, ತಯಾರು ಮಾಡುವ ಅಡುಗೆಗಳಲ್ಲಿ ತನ್ನದೇ ಬಗೆಯ ಛಾಪು ಮೂಡಿಸಿ ನಮ್ಮ ನಾಲಿಗೆಯ ಗಮನ ಸೆಳೆಯುತ್ತದೆ.

ಆದರೆ ಪನೀರ್ ಕೇವಲ ಇಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ, ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಕೂಡ ಇದರ ಪ್ರಯೋಜನಗಳು ಅಪಾರ. ಆದರೆ ಹೆಚ್ಚಿನವರಿಗೆ ಇದರ ಬಗ್ಗೆ ಅರಿವೇ ಇಲ್ಲ.

ಹೌದು, ಬೆಳಗಿನ ಸಮಯದಲ್ಲಿ ಪನೀರ್ ಸೇವಿಸುವುದರಿಂದ ಇಡೀ ದಿನ ಹೊಟ್ಟೆ ಹಸಿವೆಯಾಗದಂತೆ ದೇಹಕ್ಕೆ ಪುಷ್ಟಿ ದೊರಕುತ್ತದೆ.

ಹಾಗಾಗಿ ಪನೀರ್ ಒಂದು ಅತ್ಯುತ್ತಮ ಉಪಾಹಾರ ಎಂದು ಹೇಳಬಹುದು. ಅದ್ಭುತವಾಗಿರುವ ರುಚಿ ಹೊಂದಿರುವಂತಹ ಪನೀರ್ ನಲ್ಲಿ ಪ್ರೋಟೀನ್(Protien) ಅಂಶವು ಅಧಿಕವಾಗಿದೆ ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಇದೆ.

ನೀವು ಸಸ್ಯಾಹಾರಿಯಾಗಿದ್ದರೆ ದೈನಂದಿನ ಪ್ರೋಟೀನ್ ಅಗತ್ಯತೆಗೆ ನೀವು ಇದನ್ನೇ ಸೇವಿಸಬೇಕು. ಅದೇ ರೀತಿ ತೂಕ ಇಳಿಸಲು ಕೂಡ ಪನೀರ್ ನೆರವಾಗುತ್ತದೆ, ಇದಕ್ಕೆ ನಾಲ್ಕು ಕಾರಣಗಳೂ ಇವೆ.

ಇದನ್ನೂ ಓದಿ : https://vijayatimes.com/punjab-people-against-bhagwant-mann/

ಕ್ಯಾಲರಿ ಕಡಿಮೆ ಇದೆ : 100 ಗ್ರಾಂ ಪನೀರ್ ನಲ್ಲಿ ಕೇವಲ 1.2 ಗ್ರಾಂನಷ್ಟು ಕಾರ್ಬ್ಸ್ ಮಾತ್ರ ಇದೆ ಮತ್ತು 72 ಕ್ಯಾಲರಿ ಇದೆ. ಇದರಿಂದಾಗಿ ತೂಕ ಇಳಿಸಿಕೊಳ್ಳಲು ಇದನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ಆರೋಗ್ಯಕರ ಕೊಬ್ಬು ಹೊಂದಿರುವ ಆಹಾರ : ದೇಹದ ತೂಕ ಇಳಿಸಿಕೊಳ್ಳಲು ಆರೋಗ್ಯಕಾರಿ ಕೊಬ್ಬು ಅತೀ ಅಗತ್ಯವಾಗಿ ಬೇಕಿರುವುದು. ದೇಹದಲ್ಲಿ ಒಳ್ಳೆಯ ಕೊಬ್ಬು ಇದ್ದಾಗ ಅದು ಇದನ್ನು ಶಕ್ತಿಯನ್ನಾಗಿ ಪರಿವರ್ತನೆ ಮಾಡುವುದು,

ಇದರಿಂದ ತೂಕ ಇಳಿಯುವುದು. ಜೊತೆಗೆ, ಪನೀರ್ ತಿಂದರೆ ಆಗ ದೀರ್ಘಕಾಲ ತನಕ ಹೊಟ್ಟೆ ತುಂಬಿದಂತೆ ಆಗುವುದು. ಇದು ನಿಮ್ಮ ಹಸಿವಿನ ಬಯಕೆ ಮತ್ತು ಫಾಸ್ಟ್ ಫುಡ್ ಸೇವನೆ ಕಡಿಮೆ ಮಾಡುವುದು.

ಸಂಯೋಜಿತ ಲಿನೋಲೀಕ್ ಆಮ್ಲವಿದೆ : ಸಂಯೋಜಿತ ಲಿನೋಲೀಕ್ ಆಮ್ಲ(ಸಿಎಲ್ ಎ) ತೂಕ ಕಳೆದುಕೊಳ್ಳಲು ಬೇಕಾದ ಸಾಮಾನ್ಯ ಅಂಶವಾಗಿದೆ ಮತ್ತು ಇದನ್ನು ದೇಹದಾರ್ಢ್ಯ ಮತ್ತು ತೂಕ ಇಳಿಸಲು ಬಳಸಲಾಗುತ್ತದೆ.

ಹಾಲಿನ ಉತ್ಪನ್ನಗಳಲ್ಲಿ ಸಿಎಲ್ ಎ ಅಂಶವು ಅತ್ಯುತ್ತಮವಾಗಿದೆ.


ಪನೀರ್ ನ್ನು ಕೇವಲ ಕಾಳುಮೆಣಸಿನ ಹುಡಿ ಮತ್ತು ಕಲ್ಲುಪ್ಪು ಹಾಕಿ ತಿಂದರೆ ಅದ್ಭುತ ರುಚಿ ನೀಡುವುದು. ಇದನ್ನು ನೀವು ಬೇರೆ ಯಾವುದೇ ರೀತಿಯಿಂದಲೂ ತಯಾರಿಸಬೇಕಾಗಿಲ್ಲ.

ಆರೋಗ್ಯಕಾರಿ ಆಹಾರಕ್ಕೆ ಇದನ್ನು ನೀವು ಸೇರಿಸಿಕೊಳ್ಳಬಹುದು. ಪನೀರ್ ಸಲಾಡ್, ಗ್ರಿಲ್ ಮಾಡಿದ ಪನೀರ್ ಅನ್ನು ಡ್ರೈ ಫ್ರೂಟ್ಸ್ ಮತ್ತು ಧಾನ್ಯಗಳ ಜತೆ ಸೇರಿಸಿ ತಿನ್ನಬೇಕು.

https://youtu.be/ON7s2-NUA18 ಕನ್ನಡ ವಿದ್ಯಾರ್ಥಿಗಳಿಗೆ ಯಾಕೆ ಈ ದ್ರೋಹ?

ಇದು ಅತ್ಯುತ್ತಮ ರುಚಿ ನೀಡುವುದು. ಆದರೆ ಇದನ್ನು ತಯಾರಿಸುವಾಗ ಯಾವುದೇ ಎಣ್ಣೆ ಅಥವಾ ಬೆಣ್ಣೆ ಬಳಸಬೇಡಿ. ತೂಕ ಕಳೆದುಕೊಳ್ಳಲು ಬಯಸಿದ್ದರೆ ಆಗ ನೀವು ಪನೀರ್ ಟಿಕ್ಕಾ ಅಥವಾ ಪನೀರ್ ಬಟರ್ ಮಸಾಲದಂತಹ ಖಾದ್ಯದಿಂದ ದೂರವಿರಬೇಕಾಗುತ್ತದೆ.


ಇನ್ನು, ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಪನೀರ್ ತುಂಬಾ ಸಹಾಯಕ. ಮಕ್ಕಳಲ್ಲಿ ಮೆದುಳಿನ ಚುರುಕುತನವನ್ನು ಹೆಚ್ಚಿಸುವಂತಹ ಒಮೆಗಾ – 3 ಫ್ಯಾಟಿ ಆಸಿಡ್ ಅಂಶಗಳು ಪನ್ನೀರ್ ನಲ್ಲಿ ಹೇರಳವಾಗಿ ಲಭ್ಯವಿವೆ.

ಹಾಗೇ, ಅಧಿಕ ರಕ್ತದ ಒತ್ತಡ ಮತ್ತು ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಅಂಶಗಳ ಕಾರಣದಿಂದಾಗಿ ಹೃದಯದ ಸಮಸ್ಯೆಗಳನ್ನು ಹೊಂದಿರುವ ಜನರಲ್ಲಿ ಪನೀರ್ ಹೆಚ್ಚು ಉಪಯುಕ್ತ ಆಹಾರವಾಗಿ ಕೆಲಸ ಮಾಡುತ್ತದೆ.
Exit mobile version