ಬಿಸಿಲಿನ ತಾಪ (Hot sun) ದೇಶದಲ್ಲಿ ಏರುಗತಿ ಕಾಣುತ್ತಿದ್ದು, ಇನ್ನೂ ಕೆಲವು ದಿನಗಳ (Healthy Beauty Tips) ಕಾಲ ಹೀಗೆ ಇರಲಿದೆ ಎಂದು ಹವಾಮಾನ ಇಲಾಖೆ (Meteorological Department)
ಎಚ್ಚರಿಕೆ ನೀಡಿದೆ. ಹಾಗಾಗಿ ಚರ್ಮದ ಬಗ್ಗೆ ಕಾಳಜಿ ಮಾಡುವುದು (Pimples) ಅನಿವಾರ್ಯವಾಗಿದೆ . ಸುಡು ಬಿಸಿಲಿನ ಹಿನ್ನೆಲೆ ಜನರು ತಮ್ಮ ತ್ವಚೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅವಶ್ಯವಾಗುತ್ತದೆ.
ಇಲ್ಲದೆ ಹೋದಲ್ಲಿ, ಟ್ಯಾನಿಂಗ್(tanning) , ಸನ್ ಬರ್ನ್ (Sun burn), ಒಣ ತ್ವಚೆ (Dry Skin) , ಕಪ್ಪು ವರ್ತುಲ (Black circle) , ದದ್ದು (Rash), ಫಂಗಲ್ ಸೋಂಕಿನಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಈ ಸಮಯದಲ್ಲಿ ಅನೇಕ ಕಾರಣದಿಂದ ಪುರುಷರು ಮತ್ತು ಮಹಿಳೆಯರು (men and women) ಮನೆಯಿಂದ ಹೊರಗೆ ಇರಬೇಕಾಗುತ್ತದೆ. ಈ ಹೊತ್ತಿನಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕೆಲವು ಸರಳ ತ್ವಚೆಯ ಕಾಳಜಿ ವಹಿಸಿ, ಮುನ್ನೆಚ್ಚರಿಕೆ (Healthy Beauty Tips) ವಹಿಸಿದರೆ ಬಿಸಿಲಿನ ಬೇಗೆಗೆ ಚರ್ಮದ ಸೌಂದರ್ಯ ಕೂಡ ಮಾಸುವುದಿಲ್ಲ.
ಬಿಸಿಲು ಎಷ್ಟು ಒಳ್ಳೆಯದೋ ಅಷ್ಟೇ ಬಿರು ಬಿಸಿಲು (Hot sun) ಕೆಟ್ಟದ್ದು. ಸೂರ್ಯನ ತಾಪ (Sun’s temperature) ಮತ್ತು ಯುವಿ ಕಿರಣಗಳು ಬೇಸಿಗೆಯಲ್ಲಿ ತ್ವಚೆಗೆ ಹೆಚ್ಚಿನ ಹಾನಿ ಮಾಡುತ್ತವೆ.
ಸೂಕ್ಷ್ಮ ತ್ವಚೆ ಹೊಂದಿರುವವರು ಇದರಿಂದ ಗಂಭೀರ ಸಮಸ್ಯೆಗೆ ಒಳಗಾಗುತ್ತಾರೆ. ಎಲ್ಲಾ ವರ್ಗದ ತ್ವಚೆ ಹೊಂದಿರುವವರು ಈ ಸಮಯದಲ್ಲಿ ಹೆಚ್ಚಿನ ತ್ವಚೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಅನೇಕ ಮಂದಿಗೆ ಮಾಹಿತಿ ಕೊರತೆ ಅಥವಾ ನಿರ್ಲಕ್ಷ್ಯದಿಂದ ಅವರು ತಮ್ಮ ತ್ವಚೆಯ ರಕ್ಷಣೆಗೆ ಮುಂದಾಗುವುದಿಲ್ಲ ಅದರಿಂದಾಗಿ ಚರ್ಮ ಸತ್ವಹೀನ ಆದಂತೆ ಕಾಣುವುದು ಮಾತ್ರವಲ್ಲ ಕೆಂಪು ಗುಳ್ಳೆಗಳು,
ಚರ್ಮದಲ್ಲಿ ಬಿರುಕು ಮುಂತಾದವು ಕಾಡಿ ಕಂಗೆಡಿಸುತ್ತದೆ.
ಈ ಋತುಮಾನದಲ್ಲಿ ಹೆಚ್ಚಾಗಿ ಕಂಡು ಬರುವ ಸಾಮಾನ್ಯ ಸಮಸ್ಯೆ ಎಂದರೆ ಅದು ಮಾಶ್ಚರೈಸರ್ ಕೊರತೆ. ಇದು ಈ ತ್ವಚೆಯನ್ನು ಶುಷ್ಕಗೊಳಿಸಿ, ತ್ವಚೆಗೆ ಜೀವಕಾಂತಿ ಇಲ್ಲದಂತೆ ಮಾಡುತ್ತದೆ.
ಇದರ ಹೊರತಾಗಿ ಕಾಡುವ ಮತ್ತೊಂದು ಸಮಸ್ಯ ಎಂದರೆ ಡಾರ್ಕ್ ಸ್ಪಾಟ್ (ಕಪ್ಪು ಕಲೆ). ಹೆಚ್ಚು ಬೆವರುವಿಕೆ, ಮಾಲಿನ್ಯಗಳು ಶುಷ್ಕ ತ್ವಚೆ, ಮೊಡವೆ ಮತ್ತು ಫಂಗಲ್ ಸೋಂಕಿಗೆ ಕಾರಣವಾಗುತ್ತದೆ.
ಸರಿಯಾದ ತ್ವಚೆ ಕಾಳಜಿ ತೆಗೆದುಕೊಳ್ಳುವುದು ಆರೋಗ್ಯಕರ ತ್ವಚೆಗೆ ಅತಿ ಮುಖ್ಯವಾಗಿದೆ. ತ್ವಚೆಯ ಮಾಶ್ಚರೈಸರ್ (Moisturizer) ಅನ್ನು ಕಾಪಾಡುವುದು ಮತ್ತು ನೇರವಾಗಿ ಸೂರ್ಯನಿಗೆ
ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕಿದೆ. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯುವುದು ಉತ್ತಮ. ಇದು ದೇಹ ಮತ್ತು ಚರ್ಮವನ್ನು ಹೈಡ್ರೇಟ್ ಆಗಿ ಇಡುತ್ತದೆ.
ನೀರು ದೇಹದಲ್ಲಿನ ವಿಷವನ್ನು ಹೊರ ತೆಗೆಯಲು ಮತ್ತು ದೇಹ ನಿರ್ಜಲೀಕರಣದಿಂದ ಬಳಲದಂತೆ ನೋಡಿಕೊಳ್ಳುತ್ತದೆ. ನೀರಿನಾಂಶವಿರುವ ದ್ರವ, ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡುವುದು ಉತ್ತಮ.
ಚರ್ಮದ ಸಮಸ್ಯೆ ಮತ್ತು ಚರ್ಮದ ಹಾನಿ ಅಥವಾ ಸೋಂಕು ಸೂರ್ಯನಿಂದ ಆಗುತ್ತದೆ. ಮಾರುಕಟ್ಟೆಯಲ್ಲಿ ಅನೇಕ ಸ್ಕಿನ್ ಕೇರ್ ಕ್ರೀಮ್ಗಳು (Skin Care Cream) ಲಭ್ಯವಿವೆ. ಆದರೆ, ಈ ಎಲ್ಲಾ ಕ್ರೀಮ್ಗಳು
ಪರಿಣಾಮಕಾರಿಯಲ್ಲ. ಇವು ಎಲ್ಲದಕ್ಕೂ ಪರಿಹಾರವಲ್ಲ.
ವಿವಿಧ ಸಮಸ್ಯೆಗೆ ವಿವಿಧ ಕ್ರೀಮ್ಗಳ ಅವಶ್ಯಕತೆ ಇದೆ. ಬಹಿತೇಕ ಕ್ರೀಮ್ಗಳು ಸ್ಟಿರಾಯ್ಡ್, ಆ್ಯಂಟಿಫಂಗಲ್ (Antifungal) ಮತ್ತು ಇತರೆ ಸಂಯೋಜನೆಯಿಂದ ಕೂಡಿದೆ. ಇವುಗಳನ್ನು ತಜ್ಞರ ಸಲಹೆ ಪಡೆದ
ಹಚ್ಚಬೇಕು. ಇಲ್ಲವೇ ಸಮಸ್ಯೆ ಉಲ್ಬಣವಾಗುತ್ತದೆ. ಇದರ ಹೊರತಾಗಿ ಹಾಲು , ಮೊಸರು, ಅಲೋವೆರಾ, ಕಡಲೆಹಿಟ್ಟು ಹೀಗೆ ಅನೇಕ ಮನೆಯಲ್ಲಿ ದಿನನಿತ್ಯ ಬಳಸುವ ವಸ್ತುಗಳಿವೆ ತ್ವಜೆಯ ಕಾಂತಿ ಹೆಚ್ಚಿಸಲು ಆವು
ಸಹಾಯ ಮಾಡುತ್ತವೆ. ಅವುಗಳನ್ನು ಬಳಸಿ ಬಿಸಿಲಿನಿಂದ ಹೊಳಪು ಕಳೆದುಕೊಂಡ ತ್ವಜೆಯನ್ನು ಕಾಂತಿಯುಕ್ತ ಗೊಳಿಸಿಕೊಳ್ಳಬಹುದು.
ಇದನ್ನು ಓದಿ: ತೆರಿಗೆ ಇಲಾಖೆ ಬಳಸಿ ಬಿಜೆಪಿ ಬೇರೆ ಪಕ್ಷದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್