ಬಂಗಾಳಕೊಲ್ಲಿಯಲ್ಲಿ ಚಂಡಮಾರುತ : ನಾಳೆಯಿಂದ ಕರ್ನಾಟಕದಲ್ಲಿ ಐದು ದಿನ ಭಾರೀ ಮಳೆ

Bengaluru : ಬಂಗಾಲಕೊಲ್ಲಿಯಲ್ಲಿ (bangala kolli) ವಾಯುಭಾರ ಕುಸಿತದಿಂದಾಗಿ ಸುಳಿಗಾಳಿ ಉಂಟಾಗಿದೆ ಇದರ ಪರಿಣಾಮ ನಾಳೆ ಮೇ 10 ರಂದು ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಬೆಂಗಳೂರು ನಗರ (Bengaluru city) ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಮುಂದಿನ 5 ದಿನಗಳಲ್ಲಿ ಮಳೆಯಾಗಲಿದೆ (heavy rain in Karnataka) ಎಂದು ಹವಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸಮುದ್ರಮಟ್ಟದಿಂದ 1.5 ಕಿಲೋ ಮೀಟರ್ನಷ್ಟು ಸುಳಿ ಉಂಟಾಗಿದೆ, ಅಷ್ಟೇ ಅಲ್ಲದೆ ಇದರ ಜೊತೆಗೆ ತೀವ್ರವಾದ ವಾಯುಭಾರ ಕುಸಿತವುಂತಾಗಿದೆ.

ಇದರ ಪ್ರಭಾವದಿಂದಾಗಿ ನಾಳೆ ಚಂಡಮಾರುವಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್ (Meteorological department expert A Prasad) ಎಚ್ಚರಿಸಿದ್ದಾರೆ.

ನಾಳೆ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಗಳು ಇರುವುದರಿಂದ ನಾಳೆ ನಡೆಯಲಿರುವ (heavy rain in Karnataka) ಮತದಾನಕ್ಕೆ ಅಡ್ಡಿಯಾಗಲಿದೆ.

ಆದ್ದರಿಂದ ಚುನಾವಣಾ ಆಯೋಗವು ಮತದಾನದ ಸಮಯವನ್ನು ಬದಲಾಯಿಸುವ ಸಾಧ್ಯತೆಗಳು ಕೂಡ ಇವೆ.

ರಾಜ್ಯ – ರಾಜಧಾನಿಯಲ್ಲಿ ಚಂಡಮಾರುತದ ಪ್ರಭಾವದಿಂದ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : https://vijayatimes.com/shock-for-voters/

ಇಂದು ಮೇ 9 ರಂದು ಉತ್ತರ ಕನ್ನಡ, ದಕ್ಷಣ ಕನ್ನಡ ಜಿಲ್ಲೆಗಳಿಗೆ (Daksha Kannada District) ಕಾರವಳಿ ಭಾಗದ ಉತ್ತರ ಕನ್ನಡ, ದಕ್ಷಣ ಕನ್ನಡ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಿಲಾಗಿದೆ.

ಒಟ್ಟು ಮೂರು ದಿನಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ.

ಅಷ್ಟೇ ಅಲ್ಲದೆ ಕೊಡಗು, ಹಾಸನ , ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಕೂಡ ಒಟ್ಟು ಮೂರು ದಿನಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದೆ.

ಹವಮಾನ ಇಲಾಖೆ ತಜ್ಞ ಎ ಪ್ರಸಾದ್ ಹೇಳಿರುವ ಪ್ರಕಾರ ನಾಳೆ ಬೆಳಗ್ಗೆಯಿಂದ ಮೊಡ ಕವಿದ ವಾತಾವರಣ ಇರುತ್ತದೆ ನಂತರ ಮದ್ಯಾಹ್ನದ ನಂತರ ಮಳೆ ಶುರುವಾಗುತ್ತದೆ.

ಸಂಜೆಯ ನಂತರ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇಂದು ಮತ್ತು ನಾಳೆ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ.

ಇದನ್ನೂ ಓದಿ : https://vijayatimes.com/demand-for-ksrtc-bus/

ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ :

ನಾಳೆಯಿಂದ 5 ದಿನಗಳ ಕಾಲ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ ಇದೆ ಆದ್ದರಿಂದ ಇಲ್ಲಿಯ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಮತ್ತು ಬೆಂಗಳೂರು ನಗರದಲ್ಲಿ ಸತತವಾಗಿ 4 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ. ಒಟ್ಟಿನಲ್ಲಿ ರಾಜ್ಯಾದ್ಯಂತ ಇನ್ನೂ 5 ದಿನಗಳ ಧಾರಾಕಾರ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಾದ ಹಾಸನ, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ, ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow alert) ನೀಡಲಾಗಿದೆ.

ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರದಲ್ಲಿ ಮಳೆ ಸಂಭವ ಇರುವುದರಿಂದ ಇಲ್ಲೂ ಕೂಡ ಯೆಲ್ಲೋ ಅಲರ್ಟ್ ನೀಡಲಾಗಿದೆ.

Exit mobile version