ನಂಬರ್ ಪ್ಲೇಟ್ ಬಚ್ಚಿಟ್ಟ ಬೈಕ್ ಸವಾರರು ಸಿಕ್ಕಿಬಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ : ಬೆಂಗಳೂರು ಪೊಲೀಸ್

Bengaluru : ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ಬಚ್ಚಿಟ್ಟ ಬೈಕ್ ಸವಾರರು ಸಿಕ್ಕಿಬಿದ್ದರೆ, ಗಂಭೀರ(hidden number plates) ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆಂಗಳೂರು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಯಾವುದೇ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದಾಗ ಹೇರುವ ದಂಡದಿಂದ ತಪ್ಪಿಸಿಕೊಳ್ಳಲು ,ತಮ್ಮ ವಾಹನದ ನಂಬರ್ ಪ್ಲೇಟ್‌ಗಳನ್ನು ವಿನ್ಯಾಸಗೊಳಿಸಿದ ಆರೋಪಿಗಳ ವೀಡಿಯೊಗಳನ್ನು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ(Social Media) ಹಂಚಿಕೊಂಡಿದ್ದಾರೆ.

ಕುಲದೀಪ್ ಕುಮಾರ್ ಉಪ ಪೊಲೀಸ್ ಆಯುಕ್ತ (ಸಂಚಾರ)(Deputy Commissioner of police), ಬೆಂಗಳೂರು (ಪಶ್ಚಿಮ) ಅವರು ಈ ಪ್ರಕರಣಕ್ಕೆ ಸಂಬಂಧಪಟ್ಟಂತ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಈ ರೀತಿ ಬರೆದು ಪೋಸ್ಟ್‌ ಮಾಡಿದ್ದಾರೆ. “ಜನರು ಹೇಗೆ ಮರೆಮಾಡುತ್ತಿದ್ದಾರೆ ನೋಡಿ.

ಟ್ರಾಫಿಕ್ ಕ್ಯಾಮೆರಾಗಳನ್ನು ತಪ್ಪಿಸಲು ವಾಹನದ ನಂಬರ್ ಪ್ಲೇಟ್‌ಗಳನ್ನು(hidden number plates) ವಿನ್ಯಾಸಗೊಳಿಸಿದ್ದಾರೆ. ಇದನ್ನು ಮಾಡುವ ಬದಲು, ಒಬ್ಬರು ಟ್ರಾಫಿಕ್‌ ರೂಲ್‌ಗಳನ್ನು ಅನುಸರಿಸಬಹುದು ಮತ್ತು ಸುರಕ್ಷಿತವಾಗಿ ಪ್ರಯಾಣಿಸಬಹುದು. ಪ್ರತಿಯೊಬ್ಬರ ಸುರಕ್ಷತೆಗಾಗಿ ದಯವಿಟ್ಟು ಸಂಚಾರ ಶಿಸ್ತನ್ನು ಅನುಸರಿಸಿ ಮತ್ತು ನಿಮ್ಮ ಜೊತೆಗಾರರನ್ನು ವಿನಂತಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: https://vijayatimes.com/india-never-tolerate-terrorism/

ಕುಲದೀಪ್ ಕುಮಾರ್ ಆರ್. ಜೈನ್(Kuladeep r jain), (@DCPTrWestBCP) ಟ್ವೀಟ್‌ ಮಾಡಿದ್ದು, ಪೊಲೀಸರು ಚಿತ್ರೀಕರಿಸಿದ ವೀಡಿಯೊದಲ್ಲಿ, ಆರೋಪಿಗಳು ಪೊಲೀಸ್ ಕ್ಯಾಮೆರಾಗಳಿಂದ ನಂಬರ್ ಪ್ಲೇಟ್‌ಗಳನ್ನು ಮರೆಮಾಡುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ವಿವರಿಸುತ್ತಿರುವುದು ಕಂಡುಬಂದಿದೆ.

ಇದು ಆನ್‌ಲೈನ್ ಚಲನ್‌ಗಳನ್ನು ಪಡೆಯದಿರಲು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.ಮತ್ತೊಂದು ಪೋಸ್ಟ್‌ನಲ್ಲಿ, ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಕೆಲವು ಬೈಕ್‌ ಸವಾರರು ನೋಂದಣಿ ಸಂಖ್ಯೆಯನ್ನು ಬದಲಾಯಿಸುತ್ತಿದ್ದಾರೆ ಎಂದು ಡಿಸಿಪಿ(DCP) ಹೇಳಿದ್ದಾರೆ.

https://vijayatimes.com/kumaraswamy-statement-about-cow/

ನಗರದ 50 ನಿರ್ಣಾಯಕ ಜಂಕ್ಷನ್‌ಗಳಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್)(ITMS) ಸ್ಥಾಪಿಸುವುದಾಗಿ ಬೆಂಗಳೂರು ಪೊಲೀಸರು ಈಗಾಗಲೇ ಘೋಷಿಸಿದ್ದಾರೆ. ಬೆಂಗಳೂರಿನ ಈ 50 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಸಂಚಾರ ಉಲ್ಲಂಘನೆಗಳನ್ನು ಸೆರೆಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

Exit mobile version