ಹೈ ಹೀಲ್ಸ್ ಚಪ್ಪಲಿಗಳನ್ನು ಮೊದಲು ಗಂಡಸರು ಬಳಕೆ ಮಾಡುತ್ತಿದ್ದರು!

high heels

ಎತ್ತರದ ಚಪ್ಪಲಿ(Footwear) ಹಾಕುವುದು ಹಿಂದಿನ ಕಾಲದಿಂದಲೂ ಬಂದ ಫ್ಯಾಷನ್(Fashion). ಕಾಲ ಎಷ್ಟೇ ಬದಲಾದರೂ ಯಾವುದೇ ಫ್ಯಾಷನ್‌ ಟ್ರೆಂಡ್‌ ಬದಲಾದರು ಈ ಹೈ ಹೀಲ್ಸ್‌(High Heels) ಟ್ರೆಂಡ್‌ ಮಾತ್ರ ಬದಲಾಗಲಿಲ್ಲ, ಬದಲಾಗಿ ಕಾಲಕ್ಕೆ ತಕ್ಕಂತೆ ವಿನ್ಯಾಸಗಳು(Designs) ಬದಲಾದವಷ್ಟೇ. ಗಿಡ್ಡ ಇರುವ ಹೆಣ್ಣು ಮಕ್ಕಳಿಗಂತೂ ಈ ಹೈ ಹೀಲ್ಸ್‌ ಪಾದರಕ್ಷೆಗಳು ವರವಾಗಿಯೇ ಪರಿಣಮಿಸಿದೆ.


ಇನ್ನು, ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸಾಕಷ್ಟು ರಹಸ್ಯಗಳನ್ನು ತಮ್ಮಲ್ಲಿ ಬಚ್ಚಿಟ್ಟುಕೊಂಡಿರುತ್ತಾರೆ ಎನ್ನುವ ಮಾತುಗಳನ್ನು ಕೇಳಿರುತ್ತೇವೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದು ಅವರವರಿಗೆ ಬಿಟ್ಟದ್ದು. ಆದರೂ ಹೆಣ್ಣುಮಕ್ಕಳಿಗೆ ತಿಳಿಯದ ಹೆಣ್ಣುಮಕ್ಕಳ ಬಗೆಗಿನ ಕೆಲವೊಂದಿಷ್ಟು ಸತ್ಯಗಳು ಇರುವುದಂತೂ ನಿಜ. ಅಂತಹ ಸತ್ಯಗಳಲ್ಲಿ ಒಂದು ಹೈ ಹೀಲ್ಸ್ ಚಪ್ಪಲಿಗಳ ರೋಚಕ ಇತಿಹಾಸ.


ಸಾಮಾನ್ಯವಾಗಿ ನಮಗೆ ಎತ್ತರ ಹಿಮ್ಮಡಿಯ ಚಪ್ಪಲಿಗಳು ಅಂದಾಕ್ಷಣ ನೆನಪಿಗೆ ಬರುವುದು ಹೆಣ್ಮಕ್ಕಳೇ ಹೊರತು ಗಂಡುಮಕ್ಕಳಲ್ಲ. ಆದರೆ ವಿಚಿತ್ರ ಎಂದರೆ, ಈ ಎತ್ತರದ ಹಿಮ್ಮಡಿ ಚಪ್ಪಲಿಗಳನ್ನು ಹೆಣ್ಣು ಮಕ್ಕಳು ಬಳಸುವುದಕ್ಕಿಂತ ಮೊದಲು ಗಂಡು ಮಕ್ಕಳು ಬಳಕೆ ಮಾಡುತ್ತಿದ್ದರು! ಹೌದು, ಹಿಂದಿನ ಕಾಲದಲ್ಲಿ ಯುದ್ಧ ಮಾಡುವಾಗ ಎದುರಾಳಿಗಳನ್ನು ಗುರುತಿಸುವ ಸಲುವಾಗಿ ಗಂಡು ಮಕ್ಕಳು ಎತ್ತರದ ಚಪ್ಪಲಿಗಳನ್ನು ಧರಿಸುತ್ತಿದ್ದರು, ಈ ಕಾರಣಕ್ಕಾಗಿಯೇ ಹೈ ಹೀಲ್ಡ್ ಬಳಕೆ ಆರಂಭವಾಯಿತು. ಆದರೆ ಹೆಣ್ಣು ಮಕ್ಕಳಿಗೋಸ್ಕರವೇ ಹೈ ಹೀಲ್ಸ್ ಇರುವುದು ಎಂದು ಜನಪ್ರಿಯವಾಗಿದ್ದು, ಯಾವಾಗ ಎಂದರೆ ವರ್ಲ್ಡ್ ವಾರ್ ಸಮಯದಲ್ಲಿ.

ಎಲ್ಲರೂ ಯುದ್ಧದ ಯೋಚನೆಯಲ್ಲಿ ಮುಳುಗಿದ್ದಾಗ ಮೀಡಿಯಾದವರು ತಾವು ಯಾವುದಾದರೊಂದು ವಿಷಯವನ್ನು ಜನಪ್ರಿಯಗೊಳಿಸಬೇಕು ಎಂಬ ಉದ್ದೇಶದಿಂದ ಈ ವಿಷಯವನ್ನು ತೆಗೆದುಕೊಂಡರು. ಯುದ್ಧದ ಸಲುವಾಗಿ ಗಂಡು ಮಕ್ಕಳು ಬಳಸುತ್ತಿದ್ದ ಎತ್ತರ ಹಿಮ್ಮಡಿಯ ಚಪ್ಪಲಿಗಳನ್ನು ಹೆಣ್ಣು ಮಕ್ಕಳು ಬಳಸುತ್ತಿದ್ದರು ಎನ್ನುವುದರ ಕುರಿತು ಪ್ರಚಾರ ಮಾಡುತ್ತಾರೆ. ಇದಾದ ನಂತರ ಈ ಚಪ್ಪಲಿಗಳನ್ನು ಹೆಣ್ಣು ಮಕ್ಕಳು ಇಷ್ಟಪಟ್ಟು ಬಳಸಲು ಆರಂಭಿಸುತ್ತಾರೆ. ಹೀಗೆ ಹೈ ಹೀಲ್ಸ್ ಚಪ್ಪಲಿಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತವೆ.

Exit mobile version