ದುಡಿಯಲು ಸಮರ್ಥ ಇರುವ ಪತ್ನಿ ವಿಚ್ಚೇದಿತ ಪತಿಯಿಂದ ಹೆಚ್ಚಿನ ಜೀವನಾಂಶ ಕೋರುವಂತಿಲ್ಲ; ಕರ್ನಾಟಕ ಹೈಕೋರ್ಟ್ ತೀರ್ಪು

Bengaluru: ಕರ್ನಾಟಕ ಹೈಕೋರ್ಟ್ ದುಡಿಯಲು ಸಮರ್ಥ ಇರುವ ಪತ್ನಿ ಹೆಚ್ಚಿನ ಜೀವನಾಂಶವನ್ನು ಕೋರುವಂತಿಲ್ಲವೆಂದು ತೀರ್ಪು ನೀಡಿದೆ. ಜತೆಗೆ, (highcourt about divorced wife) ಪ್ರಕರಣವೊಂದರಲ್ಲಿ

ಪತಿಯು ಪತ್ನಿಗೆ ನೀಡಬೇಕಿದ್ದ 10 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗಳಿಗೆ ಮಾಸಿಕ ಜೀವನಾಂಶದ ಮೊತ್ತವನ್ನು ಕಡಿಮೆ ಮಾಡಿದ ಸೆಷನ್ಸ್ ಕೋರ್ಟ್ (Sessions Court)

ಇದೀಗ ಈ ಆದೇಶವನ್ನು (highcourt about divorced wife) ಎತ್ತಿಹಿಡಿದಿದೆ.

ವಿವಾಹಕ್ಕೆ ಮುನ್ನ ಪತ್ನಿ ಉದ್ಯೋಗದಲ್ಲಿದ್ದರು ಆದರೆ ಈಗ ಮತ್ತೆ ಕೆಲಸಕ್ಕೆ ಸೇರದಿರಲು ಯಾವುದೇ ಸಮರ್ಪಕ ಕಾರಣಗಳಿಲ್ಲ. ಅಷ್ಟೇ ಅಲ್ಲದೆ ಮನೆಯಲ್ಲಿಯೇ ಕುಳಿತು ಆಲಸ್ಯದಿಂದ ಪತಿಯಿಂದಲೇ ಸಂಪೂರ್ಣ

ಜೀವನಾಂಶ ಕೇಳುವುದು ಕೂಡ ಸಮಂಜಸವಲ್ಲ. ಪತ್ನಿ ಕೂಡ ತನ್ನ ಜೀವನ ನಿರ್ವಹಣೆಗೆ ಪ್ರಯತ್ನಿಸಬೇಕು. ಪತ್ನಿಯು ಪತಿಯಿಂದ ಪೂರಕ ಜೀವನಾಂಶವನ್ನಷ್ಟೇ ಕೇಳಬಹುದು ಎಂದು ಕೋರ್ಟ್ ಹೇಳಿದೆ.

ಹೈಕೋರ್ಟ್ ಏಕಸದಸ್ಯ ಪೀಠ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ (Rajennndra Badamikar) ಅರಿದ್ದ ಈ ಆದೇಶ ನೀಡಿದೆ.

ಪ್ರಕಾರಣದ ವಿವರ ಹೀಗಿದೆ

ಪತ್ನಿಗೆ ವಿವಾಹದ ನಂತರ ಒಂದು ಮಗು ಜನಿಸಿತ್ತು.ಆದರೆ ಅತ್ತೆ ಮತ್ತು ಅವಿವಾಹಿತ ನಾದಿನಿಯೊಂದಿಗೆ ವಾಸಿಸುವ ಇಚ್ಚೆ ಪತ್ನಿಗೆ ಇರಲಿಲ್ಲ. ಹೀಗಾಗಿ ಪತ್ನಿ ತನ್ನ ತಾಯಿಯೊಂದಿಗೆ ಮತ್ತು ಮಗುವಿನೊಂದಿಗೆ

ಪ್ರತ್ಯೇಕ ವಾಸವಾಗಿದ್ದರು. ನಂತರ ಬೆಂಗಳೂರಿನ (Bengaluru) ಮ್ಯಾಜಿಸ್ಟ್ರೇಟ್ ಕೋರ್ಟ್​​ನಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪತ್ನಿಯು ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ಕೋರ್ಟ್

ಇದನ್ನು ಓದಿ: RTO ಖತರ್ನಾಕ್ ದಂಧೆ ! ಕದ್ದ ಅಥವಾ ಗುಜರಿ ಹಾಕಬೇಕಾದ ಗಾಡಿಗಳು ಹೊಸ ಮಾಡೆಲ್‌ ಆಗಿ ರಿಜಿಸ್ಟ್ರೇಷನ್‌

(Magistrate Court) ಆಕೆಯ ಪತಿಗೆ ಮಾಸಿಕ 10 ಸಾವಿರ ರೂಪಾಯಿ ಹಾಗೂ 3 ಲಕ್ಷ ಪರಿಹಾರ ಪತ್ನಿಗೆ ನೀಡುವಂತೆ ಆದೇಶ ನೀಡಿತ್ತು.ಆದರೆ ಇದನ್ನು ಪತಿ ಸೆಷನ್ಸ್ ಕೋರ್ಟ್​​​​ನಲ್ಲಿ ಪ್ರಶ್ನಿಸಿದ್ದರು.

ನಂತರ ಇದನ್ನು ಪರಿಶೀಲಿಸಿ ಜೀವನಾಂಶದ ಮೊತ್ತವನ್ನು 10 ಸಾವಿರದಿಂದ 5 ಸಾವಿರಕ್ಕೆ ಸೆಷನ್ಸ್ ಕೋರ್ಟ್ ಇಳಿಸಿತ್ತು. ಪರಿಹಾರದ ಮೊತ್ತವನ್ನು 3 ಲಕ್ಷದಿಂದ 2 ಲಕ್ಷಕ್ಕೆ ಇಳಿಸಿತ್ತು.

ನಂತರ ಪತ್ನಿಯು ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.ಪತ್ನಿಗೆ ತನ್ನ ಅತ್ತೆ ಮತ್ತು ಅವಿವಾಹಿತ ನಾದಿನಿಯೊಂದಿಗೆ ವಾಸಿಸಲು ಇಚ್ಚೆಯಿಲ್ಲ. ಹೀಗಾಗಿ ಅವಳು ಪತಿಯ

ಮನೆ ತೊರೆದಿದ್ದಾಳೆ. ಅಲ್ಲದೇಆಕೆಯ ಪತಿಯು ದಿನಸಿ ಅಂಗಡಿ ನಡೆಸಿ ತಾಯಿ ಮತ್ತು ಸಹೋದರಿ ಇಬ್ಬರನ್ನೂ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಸೆಷನ್ಸ್ ಕೋರ್ಟ್ ಜೀವನಾಂಶದ ಮೊತ್ತ ಇಳಿಸಿದ

ಆದೇಶ ಸೂಕ್ತವಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಲಾಗಿದೆ.

ರಶ್ಮಿತಾ ಅನೀಶ್

Exit mobile version