ನಮಗೆ ಕುರಾನ್ ಹೇಳಿದ್ದೇ ಫೈನಲ್ ; ದೇಶದ ನ್ಯಾಯಾಂಗಕ್ಕಿಲ್ಲ ಬೆಲೆ!

supreme court

ಕರ್ನಾಟಕದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಹಿಜಾಬ್ ಕುರಿತು ನಿನ್ನೆ ಅಂತಿಮ ತೀರ್ಪನ್ನು ರಾಜ್ಯ ಹೈಕೋರ್ಟ್‍ನ ತ್ರಿಸದಸ್ಯ ಸಾಂವಿಧಾನಿಕ ಪೀಠ ನೀಡಿತು. ‘ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆ ಅಲ್ಲ. ಸರ್ಕಾರದ ಆದೇಶದಂತೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಲೇಬೇಕು” ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಇದೀಗ ರಾಜ್ಯ ಉಚ್ಚನ್ಯಾಯಾಲಯ ನೀಡಿರುವ ತೀರ್ಪನ್ನೇ ಧಿಕ್ಕರಿಸಲಾಗುತ್ತಿದೆ.

ಹಿಜಾಬ್ ಧರಿಸುವುದು ನಮ್ಮ ಧಾರ್ಮಿಕ ಹಕ್ಕು. ನಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ಹಿಜಾಬ್‍ಗಾಗಿ ಪಟ್ಟು ಹಿಡಿದಿದ್ದ ಉಡುಪಿಯ ಆರು ಜನ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರು ವಿದ್ಯಾರ್ಥಿನಿಯರು, ನಮಗೆ ನಮ್ಮ ಪವಿತ್ರ ಕುರಾನ್ ಮುಖ್ಯ. ಕುರಾನ್‍ನಲ್ಲಿ ಹಿಜಾಬ್ ಧರಿಸಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ. ನಮಗೆ ಕುರಾನ್ ಹೇಳಿದ್ದೆ ಫೈನಲ್. ಹೈಕೋರ್ಟ್ ನೀಡಿರುವ ಆದೇಶವನ್ನು ನಾವು ಒಪ್ಪುವುದಿಲ್ಲ. ನಮ್ಮ ಧಾರ್ಮಿಕ ಹಕ್ಕಿಗಾಗಿ ನಾವು ಹೋರಾಡುತ್ತೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.

ದೇಶದ ನ್ಯಾಯಾಂಗ ವ್ಯವಸ್ಥೆಯನ್ನೇ ಈ ಆರು ವಿದ್ಯಾರ್ಥಿನಿಯರು ಅಪಹಾಸ್ಯ ಮಾಡುತ್ತಿದ್ದಾರೆ. ನೆಲದ ಕಾನೂನಿಗಿಂತ ನಮಗೆ ನಮ್ಮ ಧರ್ಮ ಮುಖ್ಯ ಎನ್ನುವ ಇಂತ ಧರ್ಮಾಂಧರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಹೈಕೋರ್ಟ್ ತೀರ್ಪಿನ ಮೇಲೆ ರಾಜ್ಯ ಸರ್ಕಾರ ಒತ್ತಡ ಹಾಕಿದೆ ಎಂದು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ನಮಗೆ ನ್ಯಾಯ ಸಿಗಲಿಲ್ಲ. ಹೀಗಾಗಿ ನಾವು ಸುಪ್ರೀಂಕೋರ್ಟ್‍ಗೆ ಹೋಗುತ್ತೇವೆ. ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ನಾವು ಸರ್ಕಾರ ಮತ್ತು ಕೋರ್ಟ್ ನೀಡಿರುವ ತೀರ್ಪನ್ನು ಅನುಸರಿಸುವುದಿಲ್ಲ, ಬದಲಾಗಿ ನಮ್ಮ ಪವಿತ್ರ ಕುರಾನ್ ದೇಹವನ್ನು ಮುಚ್ಚಿಕೊಳ್ಳಬೇಕೆಂದು ಹೇಳಿದೆ. ಅದುವೇ ನಮಗೆ ಮುಖ್ಯ. ಹೀಗಾಗಿ ನಾವು ಕುರಾನ್ ಹೇಳಿದಂತೆ ಮಾಡುತ್ತೇವೆ. ಹಿಜಾಬ್ ಇಲ್ಲದೇ ನಾವು ಕಾಲೇಜಿಗೆ ಹೋಗುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ನಮ್ಮ ಧಾರ್ಮಿಕ ಹಕ್ಕಿಗಾಗಿ ಹೋರಾಡುತ್ತೇವೆ ಎಂದಿದ್ದಾರೆ. ಇನ್ನು ವಿದ್ಯಾರ್ಥಿನಿಯರ ಈ ನಿಲುವಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಇವರು ಸವಾಲು ಹಾಕಿದ್ದಾರೆ.

ಸಂವಿಧಾನವನ್ನು ಅರ್ಥೈಸುವ ಪರಮಾಧಿಕಾರ ಇರುವ ನ್ಯಾಯಾಂಗವನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. 25ನೇ ವಿಧಿಯನ್ನು ಅರ್ಥೈಸುವ ಅಧಿಕಾರ ಇರುವುದು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‍ಗೆ ಎನ್ನುವ ಸಾಮಾನ್ಯ ತಿಳುವಳಿಕೆಯೂ ಈ ವಿದ್ಯಾರ್ಥಿನಿಯರಿಗೆ ಇಲ್ಲ. ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕು ಯಾವುದು? ಎಂದು ನಿರ್ಧರಿಸುವ ಪರಮಾಧಿಕಾರವನ್ನು ನಮ್ಮ ಸಂವಿಧಾನ ನ್ಯಾಯಾಂಗಕ್ಕೆ ನೀಡಿದೆ ಎಂದು ಕೆಲವರು ವಿದ್ಯಾರ್ಥಿನಿಯರ ನಿಲುವುವನ್ನು ಖಂಡಿಸಿದ್ದಾರೆ.

Exit mobile version