Bengaluru: ಬಿಯರ್ (Beer) ಉತ್ಪಾದನಾ ವೆಚ್ಚವನ್ನು ಸರಿಗಟ್ಟಲು ಬಿಯರ್ ಕಂಪನಿಗಳು ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿ ಬಾಟಲಿಗೆ ಸುಮಾರು 10 ರೂ (hike in beer price) ಹೆಚ್ಚಿಸಿದೆ .
ಆದರೆ ಸರ್ಕಾರ ಮದ್ಯದ ಬೆಲೆ ಮತ್ತು ಮದ್ಯದ ಮೇಲಿನ ಸರ್ಕಾರದ ತೆರಿಗೆಯನ್ನು ಹೆಚ್ಚಿಸಿಲ್ಲ ಎಂದು ಅಬಕಾರಿ ಇಲಾಖೆ ಸ್ಪಷ್ಟನೆ ನೀಡಿದೆ.”ಸಾಮಾಜಿಕ ಜಾಲತಾಣಗಳಲ್ಲಿ ಮದ್ಯದ ತೆರಿಗೆ ಹೆಚ್ಚಳವಾಗಿದೆ
ಎಂಬ ಸುದ್ದಿ ಹಬ್ಬಿದೆ ಆದರೆ ಬೆಲೆ ಏರಿಕೆಯ ಈ ಎಲ್ಲಾ ಮಾಹಿತಿ ಸುಳ್ಳು. ಸರ್ಕಾರ ಯಾವುದೇ ಅಬಕಾರಿ ಸುಂಕವನ್ನು ಹೆಚ್ಚಿಸಿಲ್ಲ” ಎಂದು ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ
ಕಾರ್ಯದರ್ಶಿ ಬಿ.ಗೋವಿಂದರಾಜ ಹೆಗಡೆ (B.Govindaraja Hegade) ಹೇಳಿದರು.

ಬೆಲೆ ಏರಿಕೆಯಲ್ಲಿ ಜಿಎಸ್ಟಿ ಇಲಾಖೆ ಪಾತ್ರವಿಲ್ಲ
“ಬಿಯರ್ ಕಂಪನಿಗಳು (Company) ಪ್ರತಿ ಏಪ್ರಿಲ್-ಮೇನಲ್ಲಿ ಉತ್ಪಾದನಾ ವೆಚ್ಚದ ಆಧಾರದ ಮೇಲೆ ಬೆಲೆಗಳನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಿ ಅನುಮತಿ ಪಡೆಯುತ್ತವೆ. ನಂತರ ಅವು ಪ್ರತಿ ಬಾಟಲಿಯ
(Bottle) ಬೆಲೆಯನ್ನು (hike in beer price) ಹೆಚ್ಚಿಸುತ್ತವೆ.
ಹಾಗೆಯೇ ವಿವಿಧ ಬ್ರಾಂಡ್ಗಳ ಬಿಯರ್ ಉತ್ಪಾದಿಸುವ ಕಂಪನಿಗಳು ಸಹ ಬಿಯರ್ ಬೆಲೆಯನ್ನು ಹೆಚ್ಚಿಸುತ್ತವೆ. ಇದರಲ್ಲಿ ಸರ್ಕಾರದ ಹಾಗೂ ಅಬಕಾರಿ ಇಲಾಖೆಯ ಯಾವುದೇ ಪಾತ್ರವಿಲ್ಲ” ಎಂದು ಐಆರ್ಎಸ್ (IRS)
ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜು.7ಕ್ಕೆ ಬಜೆಟ್ (Budget) ಮಂಡಿಸುವುದಾಗಿ ನೂತನ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದು ಒಂದು ವೇಳೆ ಆ ಬಜೆಟ್ ನಲ್ಲಿ ತೆರಿಗೆ ಹೆಚ್ಚಳ ಮಾಡಿದರೆ ಆ ಸಮಯದಲ್ಲಿ ಮತ್ತೆ ಮದ್ಯದ ದರ
ಹೆಚ್ಚಳವಾಗಬಹುದು ಎಂದು ಅವರುಹೇಳಿದರು.ಸಾಮಾಜಿಕ ಜಾಲತಾಣಗಳಲ್ಲಿ ಮದ್ಯ ಬೆಲೆ ಏರಿಕೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಇದನ್ನು ಓದಿ: ಒಟಿಟಿಗೆ ಈ ವಾರ ಬರುತ್ತಿವೆ ಸೂಪರ್ ಹಿಟ್ ಸಿನಿಮಾಗಳು
ವಿದ್ಯುತ್ ದರ ಏರಿಕೆಯ ಬೆನ್ನಲ್ಲೇ ಮದ್ಯ ಬೆಲೆ ಹೆಚ್ಚಿಸಿರುವ ಸರ್ಕಾರ ಅಂತ ಟೀಕೆಗಳು ವ್ಯಕ್ತವಾಗಿದ್ದವು. ಅಷ್ಟೇ ಅಲ್ಲ
ಮದ್ಯಪ್ರಿಯರಂತು ಎಲ್ಲರಿಗೂ ಉಚಿತ ಗ್ಯಾರಂಟಿ (Guarantee) ಕೊಟ್ಟ ಸರ್ಕಾರ ಕುಡುಕರಿಗೆ ಮಾತ್ರ ದರ ಏರಿಕೆ ಬಿಸಿ ಮುಟ್ಟಿಸಿದೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ತರೋ ತಮಗೆ ಸರ್ಕಾರ ಅನ್ಯಾಯ
ಮಾಡುತ್ತಿದೆ ಅಂತಲೂಕುಟುಕಿದ್ದಾರೆ. ಈ ಎಲ್ಲಾ ಟೀಕೆಗಳಿಗೆ ಸರ್ಕಾರ ಉತ್ತರ ಕೊಟ್ಟಿದ್ದು. ಬೆಲೆ ಏರಿಕೆಗೆ ಹಾಗೂ ತಮಗೂ ಯಾವುದೇ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ರಶ್ಮಿತಾ ಅನೀಶ್