ಹಾಕಿ ದಂತಕಥೆ ಕೀತಿರ್ ಕೇಶವ್ ದತ್ ಇನ್ನಿಲ್ಲ

ಕೋಲ್ಕತಾ, ಜು. 07: ಹಾಕಿ ದಂತಕಥೆ ಎಂದೇ ಹೆಸರುವಾಸಿಯಾಗಿದ್ದ, ಒಲಿಂಪಿಕ್‌ನಲ್ಲಿ ಎರಡು ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ ಕೀತಿರ್ ಕೇಶವ್ ದತ್ ಇಂದು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಕೋಲ್ಕತಾದ ಸಂತೋಷ್‌ಪುರದಲ್ಲಿರುವ ನಿವಾಸದಲ್ಲಿ ದತ್ ಮಧ್ಯರಾತ್ರಿ 12.30 ರ ಸುಮಾರಿಗೆ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ. ಭಾರತವು ಸ್ವಾತಂತ್ರ್ಯದ ನಂತರ ಒಲಿಂಪಿಕ್‌ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. 1948 ರ ಲಂಡನ್ ಕ್ರೀಡಾಕೂಟದಲ್ಲಿ ಇವರ ತಂಡಕ್ಕೆ ಚಿನ್ನ ಲಭಿಸಿತ್ತು. ನಂತರ 1952ರಲ್ಲಿ ಪುನಃ ಚಿನ್ನದ ಪದಕ ಇವರ ತಂಡದ್ದಾಗಿತ್ತು.

ಕೇಶವ್‌ ದತ್‌ ಅವರು 1951-1953ರವರೆಗೆ ಹಾಗೂ 1957-1958ರಲ್ಲಿ ‘ಮೋಹನ್ ಬಗಾನ್ ಹಾಕಿ ತಂಡ’ದ ನಾಯಕರಾಗಿದ್ದರು. ಈ 10 ವರ್ಷಗಳ ಅವಧಿಯಲ್ಲಿ ಆರು ಬಾರಿ ಹಾಕಿ ಲೀಗ್ ಮತ್ತು ಮೂರು ಬಾರಿ ಬೀಟನ್ ಕಪ್ ಗೆದ್ದಿದ್ದರು. 2019ರಲ್ಲಿ ಮೋಹನ್ ಬಗಾನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಗೌರವವನ್ನು ಪಡೆದ ಮೊದಲ ಫುಟ್ಬಾಲ್ ಹೊರತಾದ ಆಟಗಾರ ಎಂಬ ಹೆಗ್ಗಳಿಕೆ ಕೂಡ ಇವರದ್ದು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ದತ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Exit mobile version