ಬ್ಲಾಕ್ ಹೆಡ್ ಸಮಸ್ಯೆಗೆ ಪರಿಹಾರ ಇಲ್ಲಿದೆ!

face

ಇತ್ತೀಚಿನ ದಿನಗಳಲ್ಲಿ ಹದಿ ಹರೆಯದವರಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಮುಖ ಸಮಸ್ಯೆಯೆಂದರೆ ಅದು ಬ್ಲಾಕ್ ಹೆಡ್ ಸಮಸ್ಯೆಯಾಗಿದೆ. ಆದರೆ ಈ ಸಮಸ್ಯೆ ಸುಲಭವಾಗಿ ಬಗೆಹರಿಸಲು ಇಲ್ಲಿದೆ ಹಲವು ಸರಳ ಟಿಪ್ಸ್ಗಳು.
ತ್ವಚೆಗೆ ಸಂಬಂಧಿಸಿದಂತೆ ಸಮಸ್ಯೆಯನ್ನು ಎದುರಿಸದೇ ಇರುವವರು ಇಲ್ಲವೇ ಇಲ್ಲ. ನಾವೆಲ್ಲರೂ ಪ್ರತಿದಿನ ಹಲವಾರು ಚರ್ಮ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತೇವೆ. ಕೆಲವರು ಮೊಡವೆಗಳು, ಇನ್ನು ಕೆಲವರು ಡ್ರೈ ಸ್ಕಿನ್ ಮತ್ತೂ ಕೆಲವರು ಕಪ್ಪು ಚುಕ್ಕೆ ಅಥವಾ ಬ್ಲಾಕ್ ಹೆಡ್ಸ್ಗಳಿಗೆ ಗುರಿಯಾಗುತ್ತಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಬ್ಲಾಕ್ ಹೆಡ್ಸ್ ಸಮಸ್ಯೆ ಸಾಕಷ್ಟು ಸಾಮಾನ್ಯವಾಗಿದೆ. ಏಕೆಂದರೆ, ದಿನವಿಡೀ ಧೂಳು, ಮಾಲಿನ್ಯ, ಕೊಳಕುಗಳಿಗೆ ನಮ್ಮ ಮುಖ ತೆರೆದುಕೊಂಡಿರುವುದರಿಂದ ಈ ಸಮಸ್ಯೆ ಉಂಟಾಗುತ್ತವೆ. ಆದರೆ, ಅವುಗಳನ್ನು ತೊಡೆದುಹಾಕಲು ನೀವು ಸುಲಭವಾದ ಮನೆಮದ್ದುಗಳನ್ನು ಬಳಸಬಹುದು.


ಸಕ್ಕರೆ ಮತ್ತು ತೆಂಗಿನ ಎಣ್ಣೆ ಸ್ಮಬ್:


ಬ್ಲ್ಯಾಕ್ ಹೆಡ್ಸ್ಗಳನ್ನು ಹೋಗಲಾಡಿಸಲು ಸ್ಕ್ರಬ್ ಅತ್ಯಂತ ಉಪಯುಕ್ತವಾಗಿದೆ. ವಿಶೇಷವಾಗಿ ಸಕ್ಕರೆ ಸ್ಕ್ರಬ್ ನಿಮಗೆ ಬ್ಲಾಕ್ ಹೆಡ್ ತೊಡೆದು ಹಾಕಲು ಸಕ್ಕರೆ ಸಹಕಾರಿಯಾಗಿದ್ದು, ಇದಕ್ಕಾಗಿ ಸಕ್ಕರೆಯನ್ನು ಪುಡಿಮಾಡಿಕೊಳ್ಳಿ. ನಂತರ ಅದನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ, ಕೈಗಳಿಂದ ಮುಖದ ಮೇಲೆ ಸ್ಕ್ರಬ್ ಮಾಡಿ. ವಾರಕ್ಕೊಮ್ಮೆ ಇದನ್ನು ಬಳಸಿದರೆ, ಬಹಳಷ್ಟು ವ್ಯತ್ಯಾಸವನ್ನು ನೋಡಬಹುದು. ನೀವು ತೆಂಗಿನ ಎಣ್ಣೆಯ ಬದಲಿಗೆ ಜೊಜೊಬಾ ಎಣ್ಣೆಯನ್ನು ಸಹ ಬಳಸಬಹುದು.

ದಾಲ್ಚಿನಿ ಪುಡಿ :

ಕಪ್ಪು ಚುಕ್ಕೆಗಳನ್ನು ತೊಡೆದು ಹಾಕಲು ದಾಲ್ಚಿನಿ ಪುಡಿ ಸಹ ಪ್ರಯೋಜನಕಾರಿಯಾಗಿದೆ. ಸ್ಕ್ರಬ್ಮಾಡಲು, ದಾಲ್ಚಿನಿ ಪುಡಿಗೆ ಕೆಲವು ನಿಂಬೆ ಹನಿಗಳನ್ನು ಸೇರಿಸಿ, ಮಿಶ್ರಣ ಮಾಡಿ. ಪೇಸ್ಟ್ ಅನ್ನು ಮುಖದ ಮೇಲೆ ಹಚ್ಚಿ, ಕನಿಷ್ಠ 10-15 ನಿಮಿಷಗಳ ಕಾಲ ಬಿಡಿ. ನಂತರ ನಿಧಾನವಾಗಿ ಉಜ್ಜುವ ಮೂಲಕ ಅದನ್ನು ತೆಗೆದುಹಾಕಿ. ಇದು ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ಗಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಚರ್ಮವನ್ನು ಬಿಗಿಗೊಳಿಸುತ್ತದೆ.


ಓಟ್ ಸ್ಕ್ರಬ್ :

ಓಟ್ ಮೀಲ್ ನಿಂದ ಮಾಡಿದ ಸ್ಕ್ರಬ್ ಬ್ಲಾಕ್ ಹೆಡ್ಸ್ ಹೋಗಲಾಡಿಸುವುದಲ್ಲದೆ, ಮುಖಕ್ಕೆ ಹೊಳಪು ತರುತ್ತದೆ. ಇದನ್ನು ತಯಾರಿಸಲು, ಓಟ್ ಮೀಲ್ನಲ್ಲಿ ಮೊಸರು ಮತ್ತು ನಿಂಬೆ ಮಿಶ್ರಣ ಮಾಡಿ, ಪೇಸ್ಟ್ ಮಾಡಿ. ಈಗ ಅದನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಸ್ಕ್ರಬ್ ಮಾಡಿ ಮತ್ತು 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.


ಜೇನುತುಪ್ಪ ಮತ್ತು ಹಾಲಿನ ಸ್ಮಬ್:

ಹಾಲಿನಲ್ಲಿ ಜೇನುತುಪ್ಪ ಬೆರೆಸಿ ಸ್ವಲ್ಪ ಬಿಡಿ. ಇದಕ್ಕಾಗಿ ಬೆಚ್ಚಗಿನ ಹಾಲನ್ನು ಸಹ ಬಳಸಬಹುದು. ಇದರಿಂದ ಜೇನುತುಪ್ಪವು ಚೆನ್ನಾಗಿ ಮಿಶ್ರಣವಾಗುತ್ತದೆ. ಹಾಲು ತಣ್ಣಗಾದ ನಂತರ, ಮುಖವನ್ನು ಸ್ವಚ್ಛಗೊಳಿಸಿ, ಈ ಮಿಶ್ರಣವನ್ನು ಹಚ್ಚಿ, ಕನಿಷ್ಠ 10-15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

Exit mobile version