ಮೈಗ್ರೇನ್‌ ತೊಂದರೆಗೆ ನಮ್ಮಲ್ಲೇ ಇದೆ ಪರಿಹಾರ!

headache

ತಲೆನೋವು ಬರುವುದು ಸಹಜ. ಆದರೆ ತಲೆನೋವಿನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಮುಖ್ಯವಾಗಿ ಮೈಗ್ರೇನ್‌ ಎಂಬ ತಲೆನೋವು ಬಂದರೆ ಅದರಿಂದ ಪಾರಾಗುವುದು ತುಂಬಾನೇ ಕಷ್ಟ. ತಲೆನೋವಿನಲ್ಲಿ ಹಲವು ಬಗೆಗಳಿವೆ. ತಲೆ ನೆತ್ತಿ ಭಾಗ ನೋವು, ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಕೆಲವು ಮಾನಸಿಕ ಒತ್ತಡದಿಂದ ಬರುವಂಥದ್ದು ಹೀಗೆ ವಿವಿಧ ರೀತಿಯಲ್ಲಿ ತಲೆನೋವು ಕಾಣಿಸಿಕೊಳ್ಳುತ್ತವೆ.

ಇವುಗಳನ್ನು ನೋವು ನಿವಾರಕ ಮಾತ್ರೆ, ಉತ್ತಮ ನಿದ್ರೆ, ವಿಶ್ರಾಂತಿ ಪಡೆಯುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಆದರೆ ಮೈಗ್ರೇನ್ ತಲೆನೋವು ಅಥವಾ ಅರೆ ತಲೆನೋವು ಸಾಮಾನ್ಯವಾಗಿ ಅಷ್ಟು ಬೇಗ ನಿವಾರಣೆ ಆಗುವಂಥದ್ದಲ್ಲ. ದೃಢ ನಿರ್ಧಾರದಿಂದ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳು ಮತ್ತು ಪೌಷ್ಟಿಕಯುಕ್ತ ಆಹಾರ ಪದ್ಧತಿಯು ನಿಮ್ಮದಾಗಿದ್ದರೆ ಮೈಗ್ರೇನ್ ತಲೆನೋವನ್ನು ನಿಯಂತ್ರಣಕ್ಕೆ ತರುವ ಸಾಧ್ಯತೆಗಳಿವೆ.


• ಪ್ರತಿದಿನ ಕನಿಷ್ಠ ಐದು ಒಣಗಿದ ಬೀಜಗಳು ಅಥವಾ ಪಾಲಾಕ್ ಸೊಪ್ಪಿನಂತಹ ಬೇಯಿಸಿದ ಹಸಿರು ಎಲೆಗಳನ್ನು ತಿನ್ನುವುದು.
• ಪ್ರತಿದಿನ 32 ಒಣ ಬೀಜಗಳು ಮತ್ತು ಹಸಿರು ಜ್ಯೂಸ್ ಕುಡಿಯುವುದು.
• ಧಾನ್ಯಗಳು, ಪಿಷ್ಟ ತರಕಾರಿಗಳು, ಎಣ್ಣೆ, ಮಾಂಸಾಹಾರ, ಮುಖ್ಯವಾಗಿ ಡೈರಿ ಉತ್ಪನ್ನಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ನಿಯಂತ್ರಣದಲ್ಲಿಡುವುದು.ಈ ರೀತಿಯ ಆಹಾರ ಪದ್ಧತಿಯನ್ನು ರೋಗಿಯು ರೂಢಿಸಿಕೊಂಡಿದ್ದರು. ಮೂರು ತಿಂಗಳ ಬಳಿಕ ಅವರು ಮೈಗ್ರೇನ್ ಸಮಸ್ಯೆಯಿಂದ ಹೊರಬಂದಿದ್ದಾರೆ. ಬಳಿಕ ರೋಗಿಯು ಮೈಗ್ರೇನ್ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಜೊತೆಗೆ ರೋಗಿಯು ಚಾಕಲೇಟ್, ಚೀಸ್, ಕೆಫೀನ್ ಮತ್ತು ಒಣಗಿದ ಹಣ್ಣುಗಳನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಿ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಯ ಜೊತೆಗೆ ದಿನ ಕಳೆದರು. ಅಮೆರಿಕನ್ ಮೈಗ್ರೇನ್ ಪೌಂಡೇಶನ್ ಪ್ರಕಾರ, ಮೈಗ್ರೇನ್ ಆನುವಂಶಿಕ ಅಸ್ವಸ್ಥತೆ. ಆದರೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಮೈಗ್ರೇನ್ ಎಷ್ಟು ಬಾರಿ ಅನುಭವಿಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ.

ಮನುಷ್ಯ ಈಗಾಗಲೇ ಸಮತೋಲಿತ ಆಹಾರವನ್ನು, ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ ಸೀರಮ್ ಬೀಟಾ-ಕ್ಯಾರೋಟಿನ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ. ಅವು ಕೆಲವು ಬದಲಾವಣೆಗೆ ಕಾರಣವಾಗಿರಬಹುದು. ಅದರಲ್ಲಿಯೂ ರೋಗಿಯು ಹೆಚ್ಐವಿ ಪಾಸಿಟಿವ್ ಆಗಿದ್ದು, ಇದು ಮೈಗ್ರೇನ್ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿತ್ತು ಎಂದು ತಜ್ಞರು ತಿಳಿಸಿದ್ದಾರೆ. ಹಸಿರು ಸೊಪ್ಪಿನಲ್ಲಿ ಬೀಟಾ-ಕ್ಯಾರಟೀನ್ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಅಪೌಷ್ಟಿಕ ಆಹಾರವನ್ನು ನೀವು ಸೇವಿಸುತ್ತಿದ್ದರೆ ಹೆಚ್ಚು ಜಾಗರೂಕರಾಗಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ತಜ್ಞರ ಪ್ರಕಾರ ಆಹಾರದಲ್ಲಿನ ಬದಲಾವಣೆಯ ಬಳಿಕ ವ್ಯಕ್ತಿಯಲ್ಲಿ ಕೆಲವು ಬದಲಾವಣೆಗಳಾದವು. ಈ ಕುರಿತಂತೆ ಇನ್ನು ಹೆಚ್ಚಿನ ಅಧ್ಯಯನಗಳ ಅವಶ್ಯಕತೆ ಇದೆ. ಇದು ಕೇವಲ ಒಂದು ಪ್ರಕರಣದ ಅಧ್ಯಯನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.


ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಿಮ್ಮ ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ. ಆದರೆ ನಿಮ್ಮ ಆರೋಗ್ಯ ಸಂಬಂಧಿಸಿದಂತೆ ನೀವು ವೈದ್ಯರಲ್ಲಿ ಸಲಹೆ ಪಡೆದ ಬಳಿಕ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯ ಬೇಡ. ತಜ್ಞರ ಸಲಹೆಯ ಮೇರೆಗೆ ನಿಮ್ಮ ಅರೋಗ್ಯ ಸುಧಾರಿಸಿಕೊಳ್ಳಿ.


Exit mobile version